ನಾನಿಲ್ತಾರು ದಿ. ಸುಂದರ ಮೂಲ್ಯ ಅಭಿಮಾನಿ ಬಳಗದಿಂದ ಸಂಸ್ಮರಣಾ ಕಾರ್ಯಕ್ರಮ ಸಂಪನ್ನ

0
12

ಕಾರ್ಕಳ : ನಾನಿಲ್ತಾರು ದಿ. ಸುಂದರ ಮೂಲ್ಯ ಅಭಿಮಾನಿ ಬಳಗದ ನೇತೃತ್ವದಲ್ಲಿ ಮುಂಡ್ಕೂರು ಗ್ರಾಮದ ನಾನಿಲ್ತಾರು ಕುಲಾಲ ಭವನ ವಠಾರದಲ್ಲಿ ಸಂಸ್ಮರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನಡೆಯಿತು.

ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿ ಅವರು ತಮ್ಮ ಆಶೀರ್ವಚನದ ನುಡಿಗಳಲ್ಲಿ ದೈವಾರದನೆ ಕ್ಷೇತ್ರದಲ್ಲಿ ಗಣನೀಯ ಸೇವಿ ಸಲ್ಲಿಸಿ ಮತ್ತು ತನ್ನ ಸಮುದಾಯದ ಕಟ್ಟಡಕ್ಕೆ ಭೂಮಿಯನ್ನು ದಾನವಾಗಿ ನೀಡಿ ಸಮಾಜದ ಮನಸ್ಸಿನಲ್ಲಿ ಚಿರಸ್ತಾಯಿಯಾಗಿ ಉಳಿದಿರುವ ದಿವಂಗತ ಸುಂದರ ಮೂಲ್ಯರವರ ಸೇವ ಕಾರ್ಯವನ್ನು ಸ್ಮರಿಸಿ ಸಾಧಕರಿಗೆ ಸನ್ಮಾನ ಮೊದಲಾದ ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು. ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ರಾಮ್ ದಾಸ್ ಭಟ್ ಅವರು ದಿ. ಸುಂದರ ಮೂಲ್ಯರವರ ಸಮಾಜಮುಖಿ ವ್ಯಕ್ತಿತ್ವವನ್ನು ಸ್ಮರಿಸಿ ಶುಭ ಹಾರೈಸಿದರು.

ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ (ರಿ )ಮುನಿಯಾಲು ಇದರ ಅಧ್ಯಕ್ಷರಾದ ಉದಯ ಶೆಟ್ಟಿ ಮುನಿಯಾಲು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ತನ್ನ ಸಮಾಜಕ್ಕೆ ಅಮೂಲಾಗ್ರ ಕೊಡುಗೆಯನ್ನು ನೀಡಿದ ದಿ. ಸುಂದರ ಮೂಲ್ಯ ಅವರು ಕುಲಾಲ್ ಸಮಾಜಕ್ಕೆ ಪ್ರಾಥ ಸ್ಮರಣೀಯರಾಗಿದ್ದಾರೆ. ಸಮಾಜಕ್ಕಾಗಿ ಜೀವಿಸಿದ ವ್ಯಕ್ತಿಯ ಕೊಡುಗೆಗಳನ್ನು ಮರೆಯದೆ ಸ್ಮರಿಸಿಕೊಂಡು ಸಮುದಾಯ ಜೊತೆಗೂಡಿ ಸಂಸ್ಮರಣ ಕಾರ್ಯಕ್ರಮವನ್ನು ನಡೆಸುತ್ತಿರುವುದು ಶ್ಲಾಘನೀಯ, ನಾನಿಲ್ತಾರು ದಿ. ಸುಂದರ ಮೂಲ್ಯ ಅಭಿಮಾನಿ ಬಳಗ ಹಮ್ಮಿಕೊಳ್ಳುವ ಯಾವುದೇ ಸಮಾಜಮುಖಿ ಕಾರ್ಯಕ್ರಮಕ್ಕೆ ನನ್ನ ಸಂಪೂರ್ಣ ಸಹಕಾರ ಸದಾ ಇರಲಿದೆ ಎಂದರು.

ಕುಲಾಲ ಮುಖಂಡ ಕುಂಭ ನಿಧಿ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಕುಶ. ಆರ್. ಮೂಲ್ಯ ಮಾತನಾಡಿ ಕುಲಾಲ ಸಮುದಾಯಕ್ಕೆ ದಿವಂಗತ ಸುಂದರ ಮೂಲ್ಯರವರ ಕೊಡುಗೆ ಮಹತ್ತರವಾದುದು, ಅವರ ಕುಟುಂಬಸ್ಥರು ತಮ್ಮ ಹಿರಿಯರ ಆಶಯಗಳಿಗೆ ಪೂರಕವಾಗಿ ಸ್ಪಂದಿಸುತ್ತಿರುವುದು ಅನುಕರಣೀಯ ಎಂದರು.
ದಿ. ಸುಂದರ ಮೂಲ್ಯರವರ ಒಡನಾಡಿಗಳಾದ ಸುರೇಂದ್ರ ಶೆಟ್ಟಿ ಕೊರಿಬೇಟ್ಟುಗುತ್ತು, ಶ್ರೀಧರ್ ಸನಿಲ್, ಮುಂಬಯಿ ಕುಲಾಲ್ ಸಂಘದ ಕಾರ್ಯದರ್ಶಿ ಕರುಣಾಕರ ಕುಲಾಲ್, ನಾನಿಲ್ತಾರು ಕುಲಾಲ್ ಸಂಘದ ಅಧ್ಯಕ್ಷ ಜಯರಾಮ್ ಕುಲಾಲ್ ಅವರುಗಳು ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಮುಂಬಯಿ ಉದ್ಯಮಿ ನಾನಿಲ್ತಾರು ದಿ. ಸುಂದರ ಮೂಲ್ಯ ಅಭಿಮಾನಿ ಬಳಗದ ಅಧ್ಯಕ್ಷ ಸುಕುಮಾರ್ ಸಾಲ್ಯಾನ್ ಮಾತನಾಡಿ ಸರ್ವರ ಸಹಕಾರದಿಂದ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿದೆ, ಇದೇ ರೀತಿ ಪ್ರತಿ ವರ್ಷವೂ ಸಂಸ್ಮರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ಲಕ್ಷ್ಮಣ ಸಾಲ್ಯಾನ್ ನಾನಿಲ್ತಾರ್, ಮಂಜಪ್ಪ ಮೂಲ್ಯ ಎಳಿಂಜೆ, ಮಾಜಿ ಅಧ್ಯಕ್ಷರು ಕುಲಾಲ್ ಸಂಘ ನಾನಿಲ್ತಾರು, ಬೊಗ್ಗು ಮೂಲ್ಯ ಬೇಲಾಡಿ, ಬಿ. ವಾರಿಜ ಮೂಲ್ಯ ಬೆಳ್ಳಣ್, ರತ್ನಾ, ರವೀಶ್ ಕುಲಾಲ್, ಇನ್ನಾ, ಮನಸ್ವಿ ಕುಲಾಲ್, ಕಾರ್ಕಳ, ಸುಧಾಕರ ಕುಲಾಲ್, ಮುಂಡ್ಕೂರು, ದೀಪಕ್ ಕುಲಾಲ್ ಬೆಳ್ಳಣ್, ಚಿತ್ರೆಶ್ ಕುಲಾಲ್ ಇನ್ನ, ಮೋಕ್ಷಿತ್ ಕುಲಾಲ್ ಮುಲ್ಲಡ್ಕ, ಜಗನ್ನಾಥ್ ಕುಲಾಲ್ ಬೆಳ್ಳಣ್ , ಸುಧಾಕರ್ ಕುಲಾಲ್ ಮುಂಡೂರು, ಅಶೋಕ್ ಕುಲಾಲ್ ಮುಂಡೂರು, ಉಷಾ ಮುಂಡ್ಕೂರು , ಪ್ರೇಮ್ ಕುಲಾಲ್ ಇನ್ನಾ, ಮಾದ್ಯಮಬಿಂಬ ಸಂಪಾದಕರಾದ ವಸಂತ ಕುಮಾರ್ ಅವರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಮಾಜಿ ಜಿ.ಪಂ ಸದಸ್ಯರಾದ ಸುಪ್ರಿತ್ ಶೆಟ್ಟಿ ಕೆದಿಂಜೆ, ದಿವಾಕರ ಶೆಟ್ಟಿ ಕಾಚೂರ ಪರಾಡಿ, ಮಾಜಿ ತಾಲ್ಲೂಕು ಪಂಚಾಯತ ಸದಸ್ಯರಾದ ಜಯ.ಎಸ್.ಕೋಟ್ಯಾನ್, ಉದ್ಯಮಿ ಉದಯ ಶೆಟ್ಟಿ ಗುಂಡುಕಲ್ಲು, ದೀಪಕ್ ಕೋಟ್ಯಾನ್ ಇನ್ನಾ, ಸಮಾಜ ಸೇವಕಿ ಅನಿತಾ ಡಿಸೋಜ, ನಮಿತಾ ಉದಯ ಶೆಟ್ಟಿ, ಆಶಾ ವರದರಾಜ ಕುಲಾಲ್, ಕುಲಾಲ್ ಸಂಘದ ಮಹಿಳಾ ಘಟಕದ ಅದ್ಯಕ್ಷೆ ಚೈತ್ರಾ ಕುಲಾಲ್, ತುಳು ಚಲನಚಿತ್ರ ನಿರ್ದೇಶಕ ರಂಜಿತ್ ಬಜಾಲ್, ಚಾಂದಿನಿ, ಮಾಜಿ ಗ್ರಾ. ಪಂ. ಸದಸ್ಯ ಸೂರಜ್ ಸಾಲ್ಯಾನ್ ಆಶಾ ವರದರಾಜ್ ಜ್ಯೋತಿ ಸದಾನಂದ ಮೊದಲಾದವರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮಕ್ಕೆ ಮೊದಲು ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಮತ್ತು ನೃತ್ಯ ವೈವಿಧ್ಯ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಿತು. ಕೇಮಾರು ಶ್ರೀ, ವೇದಮೂರ್ತಿ ರಾಮದಾಸ್ ಭಟ್ ಸೇರಿದಂತೆ ಕಾರ್ಯಕ್ರಮದ ಗಣ್ಯರು ದಿ. ಸುಂದರ ಮೂಲ್ಯರವರ ಮನೆಯಿಂದ ಚೆಂಡೆ ಮತ್ತು ಭಜನಾ ತಂಡಗಳೊಂದಿಗೆ ಮೆರವಣಿಗೆಯ ಮೂಲಕ ಸಭಾ ಮಂಟಪಕ್ಕೆ ಆಗಮಿಸಿದರು. ಸಭೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶ್ರೀಕಾಂತ್ ಕುಲಾಲ್ ಎಲ್ಲರನ್ನು ಸ್ವಾಗತಿಸಿದರು, ಸಾಮಾಜಿಕ ಕಾರ್ಯಕರ್ತರಾದ ಪ್ರದೀಪ್ ಬೇಲಾಡಿ ಅವರು ಪ್ರಾಸ್ತಾವಿಕ ಮಾತಗಳನ್ನಾಡಿದರು‌. ಮನಸ್ವಿ ಕುಲಾಲ್, ಸಮೀಕ್ಷಾ ಕುಲಾಲ್, ಹರ್ಷಿತಾ ಕುಲಾಲ್, ವಂಶಿಕಾ ಕುಲಾಲ್, ಕೃತಿಕಾ ಕುಲಾಲ್, ಸಂತೋಷ್ ಕುಲಾಲ್ ಪದವು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ದಿನೇಶ್ ಕುಲಾಲ್, ಸೂರಜ್ ಸಾಲ್ಯಾನ್, ವಂದನಾರ್ಪಣೆಗೈದರು. ಕಾರ್ಯಕ್ರಮದ ಬಳಿಕ ದೇವದಾಸ್ ಕಾಪಿಕಾಡ್ ನೇತೃತ್ವದ ಚಾಪರ್ಕ ಕಲಾವಿದರಿಂದ “ಎನ್ನನೇ ಕಥೆ” ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.

LEAVE A REPLY

Please enter your comment!
Please enter your name here