ಸಂಪೂರ್ಣ ಸುರಕ್ಷಾ ಕಾರ್ಡ್ ವಿತರಣಾ ಕಾರ್ಯಕ್ರಮ

0
9

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾಲುದಾರ ಕುಟುಂಬಗಳ ಅರೋಗ್ಯ ಹಾಗೂ ಮತ್ತಿತರ ಸಮಸ್ಯೆ ಗಳಿಗೆ ಸ್ಪಂದನೆ ನೀಡುವ ಉದ್ದೇಶದಿಂದ ಸಂಪೂರ್ಣ ಸುರಕ್ಷಾ ಕಾರ್ಯಕ್ರಮದಡಿ ತಾಲೂಕಿನಲ್ಲಿ ಪ್ರಸ್ತುತ ವರ್ಷ 8,965 ಕುಟುಂಬದ 29,175, ಪಲಾನುಭವಿ ಗಳಿಗೆ ಸಂಪೂರ್ಣ ಸುರಕ್ಷಾ ನೋಂದಣಿಮಾಡಲಾಗಿದ್ದು. ನೊಂದಣಿ ಮಾಡಿದ ಸದಸ್ಯ ಕುಟುಂಬಗಳಿಗೆ ಸಂಪೂರ್ಣ ಸುರಕ್ಷಾ ಕಾರ್ಡ್ ವಿತರಣಾ ಕಾರ್ಯಕ್ಕೆ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಜಯನಂದ ಪಿ ಮೇ 28ನೇ ಗುರುವಾರ ತಾಲ್ಲೂಕಿನ ತುಂಬೆ ವಲಯದ, ಪರಂಗಿಪೇಟೆ ಕಾರ್ಯಕ್ಷೇತ್ರದ ಸೀತಾರಾಮ ತಂಡಕ್ಕೆ ವಿತರಣೆ ಮಾಡಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತುಂಬೆ ವಲಯ ಮೇಲ್ವಿಚಾರಕಿ ಮಮತಾ, ಸೇವಾಪ್ರತಿನಿಧಿ ಅಮಿತಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here