ಶಸ್ತ್ರಚಿಕಿತ್ಸೆ ಸಾಧ್ಯವಿಲ್ಲ ಎಂದು ಹೇಳಲಾಗಿದ್ದ 74 ವರ್ಷದ ವೃದ್ಧರಿಗೆ ಬೆಂಗಳೂರಿನಲ್ಲಿ ಯಶಸ್ವಿ ಶ್ವಾಸಕೋಶದ ಕ್ಯಾನ್ಸರ್ ರೊಬೊಟಿಕ್ ಚಿಕಿತ್ಸೆ

0
9

“ಶಸ್ತ್ರಚಿಕಿತ್ಸೆ ಕಷ್ಟಸಾಧ್ಯ” ಎಂದು ಪರಿಗಣಿಸಲಾಗಿದ್ದ ರೋಗಿಯಲ್ಲಿ ಎದೆಯನ್ನು ತೆರೆಯದೆ ಮಿನಿಮಲಿ ಇನ್ನಿಸಿವ್ ರೊಬೊಟಿಕ್ ಶಸ್ತ್ರಚಿಕಿತ್ಸೆ ನೆರವಾಯಿತು ಎಂದು ವೈದ್ಯರು ಹೇಳುತ್ತಾರೆ.

ಬೆಂಗಳೂರು : ಉತ್ತರಾಖಂಡದ 74 ವರ್ಷದ ನಿವೃತ್ತ ಸೈನಿಕರೊಬ್ಬರು ಗಂಭೀರ ಉಸಿರಾಟದ ಸಮಸ್ಯೆಗಳು ಮತ್ತು ನಿಯಂತ್ರಣವಿಲ್ಲದ ಮಧುಮೇಹದಿಂದ ಬಳಲುತ್ತಿದ್ದರು. ಅವರಿಗೆ ಶ್ವಾಸಕೋಶದ ಕ್ಯಾನ್ಸ‌ರ್ ಕೂಡಾ ಬಾಧಿಸುತ್ತಿದ್ದು ಅದಕ್ಕೆ ಅಲ್ಲಿನ ವೈದ್ಯರು ಚಿಕಿತ್ಸೆ, ಕಷ್ಟಸಾಧ್ಯ ಎಂದಿದ್ದರು. ಅವರಿಗೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ರೊಬೊಟಿಕ್ ಶಾಸಕೋಶದ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು ಈ ಚಿಕಿತ್ಸೆಯು ವೈದ್ಯರಿಗೆ ಮತ್ತು ವೈದ್ಯಕೀಯವಾಗಿ ಚಿಕಿತ್ಸೆ ಕಷ್ಟಕರ ಎನ್ನುವ ಅತ್ಯಂತ ಸೂಕ್ಷ್ಮ ಕ್ಯಾನ್ಸರ್ ರೋಗಿಗಳಿಗೆ ಹೊಸ ಭರವಸೆ ಮೂಡಿಸಿದೆ.

ನಾಲ್ವರು ಮಕ್ಕಳ ತಂದೆಯಾಗಿರುವ ರೋಗಿಯು ಶ್ವಾಸಕೋಶದ ಕ್ಯಾನ್ಸರ್ ಪತ್ತೆಯಾದಾಗ ಸತತ ಉಸಿರಾಟದ ತೊಂದರೆ ಮತ್ತು ಕುಸಿಯುತ್ತಿರುವ ಆರೋಗ್ಯದಿಂದ ಸಂಕಷ್ಟ ಅನುಭವಿಸುತ್ತಿದ್ದರು. ಆದಾಗ್ಯೂ ಅವರ ಗಂಭೀರ ಕ್ರಾನಿಕ್ ಅಬ್ಬನ್ ಪಲ್ಮನರಿ ಡಿಸೀಸ್ (ಸಿಒಪಿಡಿ), ದುರ್ಬಲ ಶ್ವಾಸಕೋಶದ ರಿಸರ್ವ್ ಮತ್ತು ಮಧುಮೇಹವು ಸಾಂಪ್ರದಾಯಿಕ ತೆರೆದ ಎದೆಯ ಶಸ್ತ್ರಚಿಕಿತ್ಸೆಯನ್ನು ಅತ್ಯಂತ ಕಠಿಣವಾಗಿಸಿತ್ತು. ಅವರ ಊರಿನಲ್ಲಿ ರೋಗಿಯ ಶ್ವಾಸಕೋಶಗಳು ಶಸ್ತ್ರಚಿಕಿತ್ಸೆಯನ್ನು ತಡೆಯುವ ಸಾಮರ್ಥ್ಯ ಹೊಂದಿಲ್ಲದೇ ಇರುವುದರಿಂದ ಶಸ್ತ್ರಚಿಕಿತ್ಸೆ ಸಾಧ್ಯವಿಲ್ಲ ಎಂದು ಹೇಳಲಾಗಿತ್ತು.

ಅವರಿಗೆ ಚಿಕಿತ್ಸೆ ಪಡೆಯಲು ಒಂದು ಅವಕಾಶ ನೀಡಲು ನಿರ್ಧರಿಸಿದ ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಯ ತಜ್ಞವೈದ್ಯರು ತೀವ್ರವಾದ ಪ್ರಿಹ್ಮಾಬಿಲಿಟೇಷನ್ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿ ಶಸ್ತ್ರಚಿಕಿತ್ಸೆ ಮುನ್ನ ಅವರ ದೇಹದಾರ್ಡ್ಯವನ್ನು ಹೆಚ್ಚಿಸಿದರು, ರೋಗಿಯು ಪಲ್ಮನರಿ ರಿಹ್ಯಾಬಿಲಿಟೇಷನ್, ಉಸಿರಾಟದ ವ್ಯಾಯಾಮಗಳು, ಚೆಸ್ಟ್ ಫಿಸಿಯೋಥೆರಪಿ, ನ್ಯೂಟ್ರಿಷನಲ್ ಆಪ್ಟಿಮೈಸೇಪ್ ಮತ್ತು ವೈದ್ಯಕೀಯವಾಗಿ ಸ್ಥಿರತೆಯನ್ನು ಎದೆಗೂಡಿನ ಕ್ಯಾನ್ಸರ್ ಚಿಕಿತ್ಸಾ ತಂಡವು ಒದಗಿಸಿತು,

ಅವರ ಪರಿಸ್ಥಿತಿ ಸುಧಾರಿಸಿದ ಕೂಡಲೇ ವೈದ್ಯರು ರೊಬೊಟಿಕ್ ಲೊಬಿಕ್ಯೂಮಿ- ಕನಿಷ್ಠ ಒಳ ಕತ್ತರಿಕೆಯ ಶಸ್ತ್ರಚಿಕಿತ್ಸೆಯ ಮೂಲಕ ಶ್ವಾಸಕೋಶದ ಕ್ಯಾನ್ಸರ್ ಹಾನಿಯುಂಟಾದ ಭಾಗವನ್ನು ನಿವಾರಿಸಿದರು, ಅದರೊಂದಿಗೆ ಸಂಪೂರ್ಣ ಕ್ಯಾನ್ಸರ್ ಚಿಕಿತ್ಸೆಗೆ ಶಸ್ತ್ರಚಿಕಿತ್ಸೆ, ನಿರ್ವಹಿಸಿದರು.

ಸಾಂಪ್ರದಾಯಿಕ ಥೋರಾಸಿಕ್ ಶಸ್ತ್ರಚಿಕಿತ್ಸೆಯ ದೊಡ್ಡ ಛೇದನ ಮತ್ತು ಪಕ್ಕೆಲುಬು ಅಗಲಗೊಳಿಸುವ ಅಗತ್ಯವಿಲ್ಲ,ದೆ ರೊಬೊಟಿಕ್ ಶಸ್ತ್ರಚಿಕಿತ್ಸೆ,ಯನ್ನು ಕಿರಿದಾದ ಕೀಹೋಲ್ ಛೇದನದೊಂದಿಗೆ ಸುಧಾರಿತ ರೊಬೊಟಿಕ್ ತಂತ್ರಜ್ಞಾನ ಬಳಸಿಮಾಡಲಾಗುತ್ತಿದ್ದು ಅದು ತಜ್ಞರಿಗೆ ಹೆಚ್ಚಿನ ನಿಖರತೆ ಮತ್ತು ನಿಯಂತ್ರಣ ನೀಡುವುದಲ್ಲದೆ ಎದೆಯ ಭಾಗದಲ್ಲಿ ಆಘಾತ ಕಡಿಮೆ ಮಾಡುತ್ತದೆ.

ಈ ಕನಿಷ್ಠ ಕತ್ತರಿಸುವಿಕೆಯ ವಿಧಾನವು ನಿಖರವಾದ ಲಿಂಫ್ ನೋಡ್ ಶಸ್ತ್ರಚಿಕಿತ್ಸೆ ಸಾಧ್ಯವಾಗಿಸುತ್ತದೆ ಮತ್ತು ಗುಣಮಟ್ಟದ ಕ್ಯಾನ್ಸರ್ ಚಿಕಿತ್ಸೆಯ ತತ್ತ್ವಗಳಿಗೆ ಬದ್ಯವಾಗಿರುವುದಲ್ಲದೆ ಶಸ್ತ್ರಚಿಕಿತ್ಸೆ ನಂತರದ ಸಂಕಷ್ಟ ಕಡಿಮೆ ಮಾಡುತ್ತದೆ. ಈ ಕನಿಷ್ಠ ಕತ್ತರಿಸುವಿಕೆಯ ವಿಧಾನವು ನಿಖರವಾದ ಲಿಂಫ್ ನೋಡ್ ಶಸ್ತ್ರಚಿಕಿತ್ಸೆ ಸಾಧ್ಯವಾಗಿಸುತ್ತದೆ ಮತ್ತು ಗುಣಮಟ್ಟದ ಕ್ಯಾನ್ಸರ್ ಚಿಕಿತ್ಸೆಯ ತತ್ತ್ವಗಳಿಗೆ ಬದ್ಧವಾಗಿರುವುದಲ್ಲದೆ ಶಸ್ತ್ರಚಿಕಿತ್ಸೆ ನಂತರದ ಸಂಕಷ್ಟ ಕಡಿಮೆ ಮಾಡುತ್ತದೆ.

ಈ ಪ್ರಕರಣ ಕುರಿತು ಬೆಂಗಳೂರಿನ ಅಪೋಲೋ ಆಸ್ಪತ್ರೆಯ ಹಿರಿಯ ಕ್ಯಾನ್ಸರ್ ತಜ್ಞ ವೈದ್ಯರಾದ ಡಾ.ಸೂರಜ್ ಮಂಜುನಾಥ್, “ಗಂಭೀರ ಸಿಒಪಿಡಿ ಮತ್ತು ದುರ್ಬಲ ಶ್ವಾಸಕೋಶದ ರಿಸರ್ವ್ ಹೊಂದಿರುವ ರೋಗಿಗಳನ್ನು ಪ್ರಮುಖ ಶ್ವಾಸಕೋಶದ ಕ್ಯಾನ್ಸ‌ರ್ ಶಸ್ತ್ರಚಿಕಿತ್ಸೆಗೆ ಯೋಗ್ಯರಲ್ಲ ಎಂದು ಪರಿಗಣಿಸಲಾಗುತ್ತದೆ, ಏಕೆಂದರೆ ರೋಗದಿಂದ ಪುನಶ್ಚತನದ ಸಂದರ್ಭದಲ್ಲಿ ಉಸಿರಾಟದ ಮೇಲೆ ಅಪಾರ ಒತ್ತಡ ಉಂಟು ಮಾಡುತ್ತದೆ. ಈ ಪ್ರಕರಣದಲ್ಲಿ ಸವಾಲು ಕ್ಯಾನ್ಸರ್ ಅನ್ನು ಸುರಕ್ಷಿತವಾಗಿ ನಿವಾರಿಸುವುದು ಮಾತ್ರವಲ್ಲ, ಬದಲಿಗೆ ರೋಗಿಯು ಉಸಿರಾಟದ ತೊಂದರೆ ಇಲ್ಲದೆ ಚೇತರಿಸಿಕೊಳ್ಳುವಂತೆ ಮಾಡುವುದಾಗಿತ್ತು” ಎನ್ನುತ್ತಾರೆ,

ಅವರು, “ರೊಬೊಟಿಕ್ ಶಸ್ತ್ರಚಿಕಿತ್ಸೆಯು ನಮಗೆ ದೊಡ್ಡ ಎದೆಯ ಛೇದನ ಮತ್ತು ಪಕ್ಕೆಲುಬು ಅಗಲ ಮಾಡುವುದನ್ನು ತಪ್ಪಿಸುತ್ತದೆ ಅದು ದುರ್ಬಲ ಶ್ವಾಸಕೋಶವುಳ್ಳ ರೋಗಿಗಳಿಗೆ ನಿಜಕ್ಕೂ ಕಷ್ಟಕರವಾಗಿರುತ್ತದೆ. ಸೂಕ್ಷ್ಮವಾದ ಬ್ರಹ್ಮಾಬಿಲಿಟೇಷನ್ ಸಂಯೋಜಿಸಿದಾಗ ಅದು ನಮಗೆ ಶಸ್ತ್ರಚಿಕಿತ್ಸೆಯ ಆಯ್ಕೆಯೇ ಇಲ್ಲದಂತಾಗುವ ರೋಗಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುವಂತೆ ಮಾಡಿತು” ಎಂದರು.

ಹೆಚ್ಚಿನ ತೊಂದರೆಯ ಶಸ್ತ್ರಚಿಕಿತ್ಸೆಯ ಅಭ್ಯರ್ಥಿ ಎಂದು ಪರಿಗಣಿತವಾಗಿದ್ದರೂ ರೋಗಿಯ ಚೇತರಿಕೆಯು ಸುಸೂತ್ರವಾಗಿತ್ತು. ಶಸ್ತ್ರಚಿಕಿತ್ಸೆಯ ದಿನವೇ ಬಾಯಿ ಮೂಲಕ ಆಹಾರ ಸೇವಿಸಿದರು ಮತ್ತು ಮರುದಿನ ನಡೆದಾಡಿದರು. ಶಸ್ತ್ರಚಿಕಿತ್ಸೆಯ ನಂತರದ ನೋವು ಕನಿಷ್ಠವಾಗಿತ್ತು ಮತ್ತು ಅದನ್ನು ಮೌಖಿಕ ಔಷಧಗಳಿಂದ ನಿರ್ವಹಿಸಿದ್ದು ವೇಗದ ಚೇತರಿಕೆ ಮತ್ತು ನಿಯಮಿತ ಚಟುವಟಿಕೆಗೆ ಬೇಗನೆ ಮರಳಲು ಅನುಕೂಲ ಕಲ್ಪಿಸಿದವು.

ತಜ್ಞರ ಪ್ರಕಾರ ರೊಬೊಟಿಕ್ ಥೋರಾಸಿಕ್ ಶಸ್ತ್ರಚಿಕಿತ್ಸೆಯು ಎಚ್ಚರಿಕೆಯಿಂದ ಆಯ್ಕೆ ಮಾಡಿದ ವೃದ್ಧ ಮತ್ತು ಹೆಚ್ಚಿನ ತೊಂದರೆ ಹೊಂದಿದ ಶ್ವಾಸಕೋಶದ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆಯ ಆಯ್ಕೆಗಳನ್ನು ವಿಸ್ತರಿಸಿದ್ದು ಶಸ್ತ್ರಚಿಕಿತ್ಸೆಯ ನಂತರದ ಆಘಾತ, ಶಸ್ತ್ರಚಿಕಿತ್ಸೆಯ ನಂತರದ ನೋವು ಮತ್ತು ಶ್ವಾಸಕೋಶದ ಸಂಕೀರ್ಣತೆಗಳನ್ನು ಕಡಿಮೆ ಮಾಡಿದೆ. ರೋಗಿಯು ಸ್ಥಿರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಹೆಚ್ಚಿನ ವಿಶ್ವಾಸ ಮತ್ತು ಸೌಖ್ಯದೊಂದಿಗೆ ತಮ್ಮ ಪ್ರತಿನಿತ್ಯದ ಚಟುವಟಿಕೆಗಳಿಗೆ ಮರಳಿದ್ದಾರೆ.

LEAVE A REPLY

Please enter your comment!
Please enter your name here