ಮೂಡುಬಿದಿರೆ: ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾ ಗಿರಿ ಕಡಂದಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ತಂಡದ ವತಿಯಿಂದ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು.

ಪುಸ್ತಕ ವಿತರಣೆ ಮಾಡಿ ಮಾತನಾಡಿದ ಸುನಿಲ್ ಮೆಂಡೋನ್ಸ, ಶಾಲೆ ಕಲಿಯುವ ಮಕ್ಕಳು ಹಗಲು ಕನಸು ಕಾಣಬೇಕು. ಮುಂದೆ ನಾವು ಯಾವ ಗುರಿಯನ್ನು ಸಾಧಿಸಬೇಕು ಎಂದು ಚಿಕ್ಕ ವಯಸ್ಸಿನಲ್ಲಿಯೇ ಯೋಚನೆ ಮಾಡಿದರೆ ದೊಡ್ಡ ಸಾಧನೆ ಮಾಡಲು ಸಾಧ್ಯವಾಗುತ್ತದೆ. ನಾನು ಸಹ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತು ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದರು. ನಮಗೆ ಮೊದಲ ಗುರುಗಳು ತಂದೆ ತಾಯಿ. ಆದರೆ ನಮಗೆ ವಿದ್ಯೆ, ಬುದ್ಧಿ ಕಲಿಸುವ ಗುರುಗಳು ಕೇವಲ ಪಾಠ ಹೇಳುವವರಲ್ಲ, ಅವರು ನಮ್ಮ ಜೀವನಕ್ಕೆ ರೂಪ ಕೊಡುವ ಶಿಲ್ಪಿಗಳು. ನಮ್ಮ ಯಶಸ್ಸು ಕಂಡು ಹೆಮ್ಮೆಪಡುವವರು ಮತ್ತು ನಮ್ಮ ನೋವನ್ನು ತಮ್ಮದಾಗಿಸಿಕೊಳ್ಳುವವರು ಗುರುಗಳಾಗಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.

ಲಯನ್ಸ್ ಕ್ಲಬ್ ಅಲಂಗಾರ್ ಅಧ್ಯಕ್ಷ ಅಮಿತ್ ಡಿಸಿಲ್ವ, ಡೈನಾ ಸೇರವೋ, ಮುಖ್ಯ ಶಿಕ್ಷಕಿ ಪ್ರತಿಭಾ ಪಿ.ಎಂ, ಎಸ್.ಡಿ.ಎಂ.ಸಿ. ಅಧ್ಯಕ್ಷ ಸೀತಾರಾಮ ಸಾಲ್ಯಾನ್, ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಪ್ರಣೀತ ನಾಗೇಶ್, ಅಂಗನವಾಡಿ ಕಾರ್ಯಕರ್ತೆ ಬೆನಡಿಕ್ಟ ದಾಂತೀಶ್, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗದೀಶ್ ಸಾಲ್ಯಾನ್, ಪೋಷಕರು ಉಪಸ್ಥಿತರಿದ್ದರು.
ಸಹಶಿಕ್ಷಕಿ ಪೌಲಿನ್ ಪಿಂಟೋ ಸ್ವಾಗತಿಸಿದರು. ಸುಮನಾ ಎಚ್. ಎಸ್. ಅತಿಥಿಗಳನ್ನು ಗೌರವಿಸಿದರು ಮತ್ತು ಸತೀಶ್ ಶೆಟ್ಟಿ ವಂದಿಸಿದರು.

