ಗಮಕ ಕಲಾ ಪರಿಷತ್ ಮಂಗಳೂರು : ‘ಸುಭದ್ರಾ ಕಲ್ಯಾಣ’ ಪುರಾಣ ಪ್ರವಚನ

0
16

ಮಂಗಳೂರು : ಗಮಕ ಕಲಾ ಪರಿಷತ್ತು ಮಂಗಳೂರು ತಾಲ್ಲೂಕು ವತಿಯಿಂದ ‘ಅಧಿಕ ಮಾಸದ ಗಮಕ ಸಪ್ತಾಹ’ವನ್ನು ನಗರದ ವಿವಿಧ ದೇವಸ್ಥಾನಗಳಲ್ಲಿ ಏರ್ಪಡಿಸಲಾಗಿದೆ. ಅದರಂತೆ ಮಂಗಳೂರಿನ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಜರುಗಿದ ಸಪ್ತಾಹದ ಆರನೆಯ ದಿನ ಮೇ.29ರಂದು ಕವಿ ಕುಮಾರವ್ಯಾಸ ಕೃತ ‘ಕರ್ನಾಟ ಭಾರತ ಕಥಾ ಮಂಜರಿ’ ಯ ‘ಸುಭದ್ರಾ ಕಲ್ಯಾಣ’ ಕಥಾಭಾಗದ ಪುರಾಣ ಪ್ರವಚನ ನಡೆಯಿತು.

ಯುವ ಗಮಕಿ ಮಧೂರು ರಾಮ ಪ್ರಕಾಶ ಕಲ್ಲೂರಾಯ ಕಾವ್ಯವಾಚನವನ್ನು ನೆರವೇರಿಸಿದರು.ಹೆಸರಾಂತ ಯಕ್ಷಗಾನ ಅರ್ಥಧಾರಿ – ಪ್ರವಚನಕಾರ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ವ್ಯಾಖ್ಯಾನ ನಡೆಸಿಕೊಟ್ಟರು. ಹಿರಿಯ ಗಮಕಿ, ಗಮಕ ಕಲಾ ಪರಿಷತ್ತಿನ ನಿರ್ದೇಶಕ ಸುರೇಶ್ ರಾವ್ ಅತ್ತೂರು ಸ್ವಾಗತಿಸಿ, ಸ್ತುತಿ ಗೀತೆಯನ್ನು ಹಾಡಿದರು.
ಬಹುಸಂಖ್ಯೆಯ ಕಲಾಭಿಮಾನಿಗಳು ಮತ್ತು ಗಮಕ ಕಲಾ ಪರಿಷತ್ತಿನ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here