ಅವಧಿ ಮೀರಿ ವ್ಯಾಪಾರ ಹೋಟೆಲ್​ ಬಂದ್​ ಮಾಡಿದ ಪೊಲೀಸರು..!

0
35

ಉಡುಪಿ : ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ ರೀತಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿ, ತಡರಾತ್ರಿ ಅವಧಿ ಮೀರಿ ಕಾರ್ಯಾಚರಣೆ ನಡೆಸುತ್ತಿದ್ದ ಡಿಸಿ ಕಚೇರಿ ರಸ್ತೆಯ ಖಾಸಗಿ ಹೋಟೆಲ್​ ವಿರುದ್ಧ ಮಣಿಪಾಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂನ್​ 1 ರಂದು ಮುಂಜಾನೆ ಸುಮಾರು 2:30 ಗಂಟೆಯ ವೇಳೆಗೆ ಖಾಸಗಿ ಹೋಟೆಲ್​ನಲ್ಲಿ ನಿಯಮ ಬಾಹಿರವಾಗಿ ಅವಧಿ ಮೀರಿ ಗ್ರಾಹಕರಿಗೆ ಊಟದ ವ್ಯವಸ್ಥೆ ಹಾಗೂ ಪಾರ್ಸೆಲ್​ ನೀಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆ ದಾಳಿ ನಡೆಸಿದ ಪೊಲೀಸರು ಹೋಟೆಲ್​ ತೆರೆದಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಇಡೀ ದೃಶ್ಯಾವಳಿಗಳನ್ನು ವೀಡಿಯೊ ಚಿತ್ರೀಕರಣ ಮಾಡಿಕೊಂಡು, ತಕ್ಷಣವೇ ಹೋಟೆಲ್​ ಮುಚ್ಚಿಸಿದ್ದಾರೆ.

ಹೋಟೆಲ್​ ವ್ಯವಸ್ಥಾಪಕರಿಗೆ ಈಗಾಗಲೇ ಹಲವಾರು ಬಾರಿ ಸರಿಯಾದ ಸಮಯಕ್ಕೆ ಹೋಟೆಲ್​ ಬಂದ್​ ಮಾಡುವಂತೆ ಪೊಲೀಸರು ಮೌಖಿಕವಾಗಿ ಎಚ್ಚರಿಕೆ ನೀಡಿದ್ದರು. ಆದಾಗ್ಯೂ, ಯಾವುದೇ ಸೂಕ್ತ ಪರವಾನಿಗೆ ಪಡೆಯದೆ, ನಿಯಮಗಳನ್ನು ಗಾಳಿಗೆ ತೂರಿ ಹೋಟೆಲ್​ ನಡೆಸುತ್ತಿರುವ ಬಗ್ಗೆ ದೂರು ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here