ಹಸಿರಿಲ್ಲದೆ ಉಸಿರಿಲ್ಲ : ಡಾ ಚೂಂತಾರು

0
8

ಮಂಗಳೂರು : ವಿಶ್ವ ಪರಿಸರ ದಿನದ ಅಂಗವಾಗಿ ಚೂಂತಾರು ಸರೋಜಿನಿ ಪ್ರತಿಷ್ಟಾನ ಮತ್ತು ರೋಟರೀ ಕ್ಲಬ್ ಹಿಲ್ ಸೈಡ್ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಅಶೋಕ ಭವನ ಸಮೀಪದ  ಆನಂದ ನಗರದ ಹಿಂದೂ ರುದ್ರ ಭೂಮಿಯಲ್ಲಿ ವನಮಹೋತ್ಸವ ಕಾರ್ಯಕ್ರಮ ಜರುಗಿತು. ಹಲಸು, ಮಾವು,ಪೇರಳೆ,ನೇರಳೆ ಮುಂತಾದ ಹತ್ತು ಹಣ್ಣಿನ ಗಿಡಗಳನ್ನು ನೆಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ ಚೂಂತಾರು,ಹಸಿರು ಕ್ರಾಂತಿ ಆಗಿ ಮರ ಗಿಡಗಳ ಪ್ರಮಾಣ ಹೆಚ್ಚಲೇಬೇಕು . ಇಲ್ಲವಾದಲ್ಲಿ ಭೂಮಿ ಬರಡಾಗಿ ಶುದ್ದ ಗಾಳಿ ನೀರು ಇಲ್ಲದಾಗಿ ಈ ಭೂಮಿ ಬದುಕಲು ಯೋಗ್ಯವಾಗದೆ ಇರುವ ಸಾಧ್ಯತೆ ಇದೆ. ಈಗಲೇ ಎಚ್ಚೆತ್ತುಕೊಂಡು ಮರ ಗಿಡ ನೆಟ್ಟು ಬೆಳೆಸಿದಲ್ಲಿ ಭೂಮಿ ಹಸಿರಿನಿಂದ ಕಂಗೊಳಿಸಿ ನಾಡು ಸುಭೀಕ್ಷವಾಗಬಹುದು ಎಂದು ನುಡಿದರು.ಈ ಸಂದರ್ಭದಲ್ಲಿ ರೋಟರೀ ಕ್ಲಬ್ ಹಿಲ್ ಸೈಡ್ ಇದರ ಅಧ್ಯಕ್ಷ ಶ್ರೀ ಪೀಟರ್ ಆಂಟೋನಿ ಪಿಂಟೋ, ರುದ್ರಭೂಮಿಯ ವ್ಯವಸ್ಥಾಪಕ ಶ್ರೀ ಆನಂದ್ ಪಾಂಗಾಳ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here