ಮುಕ್ಕ : ಇಂದಿನ ಎಐ ಯುಗದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಕ್ಷೇತ್ರದ ಆಯ್ಕೆಯಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳು ಜಾಗರೂಕರಾಗ ಬೇಕಾಗಿದೆ. ಅವರ ಆಯ್ಕೆಯ ಕ್ಷೇತ್ರವನ್ನು ವಿದ್ಯಾರ್ಥಿಗಳಿಗೆ ಬಿಡಬೇಕು ಎಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಕೌನ್ಸಿಲರ್ ಅಂಕಿತ್ ಎಸ್.ಕುಮಾರ್ ಹೇಳಿದರು.
ಅವರು ಮುಕ್ಕದ ಮಿತ್ರಪಟ್ಣ ಯುವಕ ಮಂಡಲದ ವತಿಯಿಂದ ನಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಗೌರವಾಪ೯ಣಾ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪೋಷಕರು ಯಾವುದೇ ರೀತಿಯಲ್ಲಿ ಒತ್ತಾಯ ಅಥವಾ ಸ್ಪರ್ಧಾತ್ಮಕ ಆಯ್ಕೆಗೆ ತಮ್ಮ ಇಚ್ಚೆಯನ್ನು ಹೇರಬಾರದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಪದವಿ ಪಡೆದ ಡಾ.ಪ್ರಥಮ್ ಪಿ ಸುವರ್ಣ ಅವರನ್ನು ಸನ್ಮನಿಸಲಾಯಿತು.
2025-2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ತೃತೀಯ ಸ್ಥಾನ ಪಡೆದ ವೈಭವಿ ಎಸ್. ಕರ್ಕೇರ ಹಾಗೂ ವೈಷ್ಣವಿ ಎಸ್. ಕರ್ಕೇರ,ಸೃಜನ್ ಎಲ್.ಪುತ್ರನ್ ಮತ್ತು ಎಸ್.ಎಸ್.ಎಲ್.ಸಿ ಯಲ್ಲಿ ರಿತ್ವೀಕ್ ಎಸ್.ಕರ್ಕೇರ, ಧೃತಿ ಪಿ.ಶ್ರೀಯಾನ್, ರಾಶಿ ಎಸ್.ಪೂಜಾರಿ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಸುಮಾರು 70 ವಿದ್ಯಾಥಿಗಳಿಗ ವಿದ್ಯಾರ್ಥಿವೇತನ ವಿತರಿಸಲಾಯಿತು.
ಮುಕ್ಕ ಮಿತ್ರಪಟ್ಣದ ಮಹಿಳಾ ಸಂಘದಲ್ಲಿ ಸೇವೆ ಸಲ್ಲಿಸಿದ ಹಿರಿಯರಾದ ಲೀಲಾ ಆರ್.ಬಂಗೇರ, ಸುಲೋಚನ ಕರ್ಕೇರ, ಜಲಜ ಸಾಲ್ಯಾನ್ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಿತ್ರಪಟ್ಣ ಯುವಕ ಮಂಡಲದ ಅಧ್ಯಕ್ಷ ವಿಜಯ ಕುಮಾರ್ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಮಂಗಳೂರು ಮಹಾನಗರ ಪಾಲಿಕೆ ನಿಕಟಪೂರ್ವ ಸದಸ್ಯೆ ಶ್ರೀಮತಿ ಶೋಭಾ ರಾಜೇಶ್, ಮುಕ್ಕ ಪ್ರೋಟೀನ್ಸ್ ಲಿಮಿಟೆಡ್ ಇದರ ಮ್ಯಾನೇಜರ್ ಜಗನ್ನಾಥ ಕೋಟ್ಯಾನ್, ಮಿತ್ರಪಟ್ಣ ಮೊಗವೀರ ಸಂಘದ ಅಧ್ಯಕ್ಷ ಸುರೇಶ್ ಕರ್ಕೇರ,ಪ್ರಧಾನ ಕಾರ್ಯದರ್ಶಿ ರಾಜೇಶ್ ಆರ್, ಉದ್ಯಮಿ ಪುಷ್ಪರಾಜ್ ಕರ್ಕೇರ, ಶ್ರೀರಾಮ ಭಜನ ಮಂದಿರ ಅಧ್ಯಕ್ಷ ಪ್ರದೀಪ್ ಕುಂದರ್, ಮಾರುತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಕಿಶೋರ್ ಬಿ.ಪುತ್ರನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಿತ್ರಪಟ್ಣ ಯುವಕ ಮಂಡಲದ ಗೌರವಧ್ಯಕ್ಷ ರವೀಂದ್ರ ಕರ್ಕೇರ, ಅರುಣ್ ಕುಮಾರ್, ಚಂದ್ರಶೇಖರ ಕರ್ಕೇರ, ಕಿಶೋರ್ ಕುಮಾರ್, ಯಾದವ ಕಕೇ೯ರ, ದಾಮೋದರ ಬಂಗೇರ, ಲೋಕೇಶ್ ಬಂಗೇರ, ಪ್ರಶಾಂತ್ ಪುತ್ರನ್, ರಾಜೇಶ್ ಕುಂದರ್,ಪದ್ಮನಾಭ ಸುವಣ೯, ನಿತ್ಯಾನಂದ ಸುವಣ೯, ಲೂಯಿಸ್ ಡಿಸೋಜ, ಜಯರಾಮ್ ಶ್ರೀಯಾನ್, ಸನತ್ ಕುಮಾರ್ ಮೊದಲಾದವರು ಭಾಗವಹಿಸಿದರು.
ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಪುತ್ರನ್ ಪ್ರಸ್ತಾಪಿಸಿ, ಪುರುಷೋತ್ತಮ ಸುವರ್ಣ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.

