ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಅಕ್ಷರಾಭ್ಯಾಸ

0
8

ಹೆಬ್ರಿ : ಪಿ ಆರ್ ಎನ್ ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಯ ಅನ್ನಪೂರ್ಣ ಸಭಾಂಗಣದಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಕಾರ್ಯದರ್ಶಿ ಹೆಚ್ ಗುರುದಾಸ್ ಶೆಣೈ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಸುಸಂಸ್ಕೃತರಾಗಲು ಸದ್ಬುದ್ಧಿಯನ್ನು ಪಡೆಯಲು ಸಂಸ್ಕಾರ ಅತ್ಯಗತ್ಯ ಆದ್ದರಿಂದ ನೂತನ ಪುಟಾಣಿಗಳಿಗೆ ಅಕ್ಷರಾಭ್ಯಾಸವನ್ನು ನಮ್ಮ ಸಂಸ್ಥೆ ನಡೆಸುತ್ತಿದೆ ಎಂದು ತಿಳಿಸಿದರು.

ಸಂಸ್ಥೆಯ ಸಂಸ್ಕೃತ ಶಿಕ್ಷಕ ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ಸರಸ್ವತಿ ಪೂಜೆ ಸಲ್ಲಿಸಿ, ಅಕ್ಷರಾಭ್ಯಾಸದ ವಿಧಿ ವಿಧಾನಗಳನ್ನು ತಿಳಿಸಿ ಮಾತನಾಡಿ ಅಕ್ಕಿ ಧಾನ್ಯ ಲಕ್ಷ್ಮಿಯ ಪ್ರತೀಕವಾಗಿದೆ. ಆದ್ದರಿಂದ ಲಕ್ಷ್ಮಿ ಯೊಂದಿಗೆ ಸರಸ್ವತಿಯು ನಮಗೆ ಅನುಗ್ರಹಿಸಿದಾಗ ಜೀವನ ಸುಖಮಯವಾಗಲಿದೆ. ಪುಟಾಣಿಗಳ ಜೀವನದಲ್ಲಿ ದೇವರ ಅನುಗ್ರಹ ಸದಾಕಾಲ ಇರಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಅಮೃತ ಭಾರತಿ ಟ್ರಸ್ಟ್ ನ ಬಾಲಕೃಷ್ಣ ಮಲ್ಯ, ರಾಜೇಶ್ ನಾಯಕ್, ಸುಧೀರ್ ನಾಯಕ್, ಶೈಲೇಶ್ ಕಿಣಿ ಹಾಗೂ ಸಂಸ್ಥೆಯ ಮುಖ್ಯಸ್ಥರಾದ ಅರುಣ್ ಹೆಚ್ ವೈ, ಅಪರ್ಣಾ ಆಚಾರ್, ಶಕುಂತಲಾ ಹಾಗೂ ಗುರುವೃಂದ, ಮತ್ತು ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here