ಕಾಪು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಲೈಟ್ ಹೌಸ್ ರಸ್ತೆ ಇದರ “ಶಾಲಾ ಶತಸಂಭ್ರಮೋತ್ಸವದ ಮನವಿ ಪತ್ರ ಬಿಡುಗಡೆ” ಕಾರ್ಯಕ್ರಮದಲ್ಲಿ ದಿನಾಂಕ 05-07-2026 ರಂದು ಶಾಸಕರು, ಶಾಲಾ ಆಚರಣಾ ಸಮಿತಿಯ ಗೌರವಾಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದರು.

ಈ ಸಂದರ್ಭದಲ್ಲಿ ಆಚರಣಾ ಸಮಿತಿಯ ಅಧ್ಯಕ್ಷರಾದ ಲಾಲಾಜಿ ಆರ್ ಮೆಂಡನ್, ಗೌರವಾಧ್ಯಕ್ಷರಾದ ಸದಾಶಿವ ಶ್ರಿಯಾನ್, ಕಾರ್ಯಾಧ್ಯಕ್ಷರಾದ ಕುಶಾ ಸಾಲ್ಯಾನ್, ಉಪಾಧ್ಯಕ್ಷರಾದ ಮೋಹನ್ ಬಂಗೇರ, ಷರೀಫ್, ಶಿವರಾಜ್ ಪುತ್ರನ್, ಶಾಖಾ ಮುಖ್ಯೋಪಾಧ್ಯಾಯರಾದ ಉಷಾ ಹಾಗೂ ಗಣ್ಯರು ಉಪಸ್ಥಿತರಿದ್ದರು.


