ಮಹಿಳಾ ಕಾಂಗ್ರೆಸ್‌ ಸಮಿತಿ ಆಶ್ರಯದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ

0
31

ಉಡುಪಿ: ಭಾರತ ಕೃಷಿ ಪ್ರಾಧಾನ್ಯ ದೇಶವಾಗಿದ್ದು, ಶೇ. 80ರಷ್ಟು ಮಂದಿ ಕೃಷಿಯನ್ನು ಅವಲಂಬಿಸಿದ್ದರು. ಹಿಂದಿನ ಕಾಲದಲ್ಲಿ ಜೂನ್‌ ಮತ್ತು ಜುಲೈ ತಿಂಗಳು ಕಷ್ಟದ ದಿನವಾಗಿದ್ದು, ಪ್ರಕೃತಿಯನ್ನು ದೊರೆಯುವ ಆಹಾರ ಸೇವಿಸುವ ಸಂಪ್ರದಾಯವಿತ್ತು. ಆಟಿ ಆಹಾರಗಳಲ್ಲಿ ಔಷಧ ಗುಣವಿದ್ದು, ಈ ಉತ್ಕೃಷ್ಟ ಆಹಾರ ಪದ್ಧತಿಯನ್ನು ಪಂಚತಾರಾ ಹೋಟೆಲ್‌ಗಳು ಕೂಡ ಗುರುತಿಸಿವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್‌ ಸೊರಕೆ ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಮಹಿಳಾ ಕಾಂಗ್ರೆಸ್‌ ಸಮಿತಿ ಆಶ್ರಯದಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತುಳುನಾಡಿನ ಆಚಾರ-ವಿಚಾರಗಳ ಬಗ್ಗೆ ಯುವಪೀಳಿಗೆಗೆ ಅರಿವು ಮೂಡಿಸಬೇಕು. ಆಟಿ ತಿಂಗಳಲ್ಲಿ ಕೃಷಿಗೆ ಸಂಬಂಧಪಟ್ಟ ಅನೇಕ ಚಟುವಟಿಕೆಗಳು ನಡೆಯುತ್ತವೆ. ಕೆಸರಿನಲ್ಲಿ ಒಂದು ದಿನ, ಆಟಿ ಕೂಟ ಮುಂತಾದ ಆಚರಣೆಗಳನ್ನು ಎಳೆ ಮಕ್ಕಳಿಗೆ ತಿಳಿಸಬೇಕು ಎಂದು ಹೇಳಿದರು.

ಜಿಲ್ಲಾ ಕಾರ್ಯಾಧ್ಯಕ್ಷ ಕಿಶನ್‌ ಹೆಗ್ಡೆ ಕೊಳ್ಕೆಬೈಲು, ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್‌ ಕಿಣಿ, ರಾಜ್ಯ ಸಮಿತಿ ಸದಸ್ಯೆ ನಮಿತಾ ರಾವ್‌, ಹಿರಿಯಡ್ಕ ಶಾಲಾ ಉಪನ್ಯಾಸಕಿ ಶಾಲಿನಿ, ಪ್ರಮುಖರಾದ ದೇವಕಿ ಸಣ್ಣಯ್ಯ, ಮಮತಾ ಶೆಟ್ಟಿ, ಶಾಂತಾ ರೈ, ಕಿರಣ್‌ ಹೆಗ್ಡೆ, ಸರಸು ಬಂಗೇರ, ಮಾಲಿನಿ ರೈ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾಧ್ಯಕ್ಷೆ ಜ್ಯೋತಿ ಹೆಬ್ಬಾರ್‌ ಸ್ವಾಗತಿಸಿದರು.