ದಾವಣಗೆರೆ : ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕೇರಳದ ಗಡಿನಾಡ ಕಲಾಕುಂಚ ಶಾಖೆಯಿಂದ ಇತ್ತೀಚಿಗೆ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಸಭಾಂಗಣದಲ್ಲಿ ಚಾತರ್ಮಾಸ್ಯ ವ್ರತಾಚರಣೆ ಪ್ರಯುಕ್ತ ವೀಣಾಗಾನ ಲಹರಿ, ಭರತನಾಟ್ಯ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳು ಸುಸಂಪನ್ನಗೊಂಡಿತು ಎಂದು ಕೇರಳದ ಗಡಿನಾಡಿನ ಶಾಖೆಯ ಸಂಸ್ಥಾಪಕರಾದ ಜಯಲಕ್ಷ್ಮಿ ಕಾರಂತ್ ತಿಳಿಸಿದ್ದಾರೆ.
ಕುಮಾರಿ ಸುಪ್ರಜಾರಾವ್ ವೀಣಾವಾದನ, ಶಾಸ್ತ್ರೀಯ ಸಂಗೀತಗಳನ್ನು ಮಂಗಲ್ಪಾಡಿಯ ದಿವ್ಯಾ ಚಂದನ್ ಕಾರಂತ, ಪುತ್ತೂರಿನ ಸುಮನ್‌ರಾವ್, ಮೀಯಪದವುನ ರಾಧಾಮಣಿ ರಾವ್ ಪುತ್ತೂರಿನ ಕುಮಾರಿ ಸುಪ್ರಜಾರಾವ್ ಮುಂತಾದವರು ಈ ಸಾಂಸ್ಕೃತಿಕ ಚಟುವಟಿಕೆ ಯಶಸ್ವಿಗೊಳಿಸಿದರು ಎಂದು ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಪ್ರಕಟಿಸಿದರು.

