ಜಿಲ್ಲಾ ಮಟ್ಟದ ಖೋಖೋ ಪಂದ್ಯಾಟ – ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ

0
6


ಪುತ್ತೂರು :
ಶ್ರೀದೇವಿ ವಿದ್ಯಾಕೇಂದ್ರ ದೇವಿನಗರ, ಪುಣಚ ಇಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಖೋಖೋ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನವನ್ನು ಪಡೆದು, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ.

ತಂಡದಲ್ಲಿ ಪ್ರಥಮ ಪಿಯುಸಿಯ ವಿದ್ಯಾರ್ಥಿಗಳಾದ ಶಶಾಂಕ್, ಚಂದನ್ , ದಿಶಾಲ್ ಎ , ಉದಯ್ ,ತುಶಾನ್ ಎ, ತರುಣ್ ಎ. ರೈ ,ಪ್ರದ್ವಿತ್ ರೈ. ಎಮ್, ಯಶ್ವಿನ್ ಬಿ, ಜೀವಿತ್ , ಎಸ್.ಡಿ.ಮಸಾಲಿ , ಪೃಥ್ವಿರಾಜ್.ಜಿ ಹಾಗೂ ದ್ವಿತೀಯ ಪಿಯುಸಿಯ ತರುಣ್ ಕುಮಾರ್ ಬಿ.ಆರ್ , ದೇಶ್ಚಿತ್ ಎಸ್, ಘನಶ್ಯಾಮ್, ಲಿಖಿತ್ , ಕೀರ್ತನ್, ಸಾತ್ವಿಕ್ , ಮನ್ವಿತ್ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಮತ್ತು ಯತೀಶ್‌ಇವರ ನೇತೃತ್ವದಲ್ಲಿ ಮಾರ್ಗದರ್ಶನವನ್ನು ಪಡೆದಿರುತ್ತಾರೆ. ಇವರನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.