ಚಂದಳಿಕೆಯಲ್ಲಿ ಸೆ.14ರಂದು 28ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

0
16

ವಿಟ್ಲ: ಕಾರ್ತಿಕ್ ಫ್ರೆಂಡ್ಸ್ ಕ್ಲಬ್ (ರಿ.) ಚಂದಳಿಕೆ–ವಿಟ್ಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಗೌರವ ಸಮಿತಿಯ ಆಶ್ರಯದಲ್ಲಿ 28ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಸೆ.14ರಂದು ಚಂದಳಿಕೆಯ ಶ್ರೀ ರಾಮನಗರದ ‘ಮಂಗಳಾ ಮಂಟಪ’ದಲ್ಲಿ ನಡೆಯಲಿದೆ.

ಗಣೇಶೋತ್ಸವದ ಅಂಗವಾಗಿ ಕರಾವಳಿ ಕರ್ನಾಟಕದಾದ್ಯಂತ ವಿನೂತನ ಕಾರ್ಯಕ್ರಮಗಳ ಮೂಲಕ ಜನಮನ್ನಣೆ ಪಡೆದ ಧರ್ಮನಗರ–ಕಂಬಳಬೆಟ್ಟಿನ ಕಲಾತಪಸ್ವಿ ಸಾಂಸ್ಕೃತಿಕ ತಂಡದ ವತಿಯಿಂದ ವಿಶೇಷ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮವು ಸೆ.14ರಂದು ಸೋಮವಾರ ಸಂಜೆ 6.30ರಿಂದ ನಡೆಯಲಿದ್ದು, ಜೈದೀಪ್ ಅಮೈ ನಿರ್ದೇಶನ ಹಾಗೂ ನಿರೂಪಣೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಕಾರ್ಯಕ್ರಮದಲ್ಲಿ ‘ಕಲಾರತ್ನ’ ನಿಶಾಂತ್ ಶೆಟ್ಟಿ, ಸರಿಗಮಪ ಲಿಟಲ್ ಚಾಂಪ್ಸ್‌ನ ಪ್ರಥಮ ರನ್ನರ್ ಅಪ್ ಆಚಿಂತ್ಯ ರೈ, ವಿಶ್ವಗುರು ನೃತ್ಯ ಶಾಲೆ ಕುರಿಯ–ಪುತ್ತೂರಿನ ಕಲಾವಿದರು, ಎನ್‌ವಿ ಡ್ಯಾನ್ಸ್ ಸ್ಟುಡಿಯೋ ಪುತ್ತೂರು ಸೇರಿದಂತೆ ಹಲವು ಕಲಾವಿದರು ಭಾಗವಹಿಸಲಿದ್ದಾರೆ.

ರಾಜ್ಯ ಪ್ರಶಸ್ತಿ ವಿಜೇತೆ ವಿದುಷಿ ಅನುಶ್ರೀ ಅರಳು ಮಲ್ಲಿಗೆ, ಕರ್ನಾಟಕ ಶ್ರೇಷ್ಠತಾ ಪ್ರಶಸ್ತಿ ಪುರಸ್ಕೃತೆ ಪ್ರತಿ ಶೆಟ್ಟಿ ಪುತ್ತೂರು, ‘ಕಲಾರತ್ನ’ ಮಮತಾ ಕಲ್ಲಡ್ಕ ಹಾಗೂ ಖ್ಯಾತ ಗಾಯಕ ಚರಣ್ ಅಮೈ ಅವರು ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಲಿದ್ದಾರೆ.

ಗಣೇಶೋತ್ಸವದ ಅಂಗವಾಗಿ ನಡೆಯಲಿರುವ ಈ ಮನರಂಜನಾ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.

ಮದುವೆ, ಮೆಹಂದಿ, ಜಾತ್ರೋತ್ಸವ ಹಾಗೂ ಇನ್ನಿತರ ಶುಭ ಸಮಾರಂಭಗಳಿಗೆ ಮನರಂಜನಾ ಕಾರ್ಯಕ್ರಮಗಳಿಗಾಗಿ ಜೈದೀಪ್ ಅಮೈ – 7090615880 ಅವರನ್ನು ಸಂಪರ್ಕಿಸಬಹುದು.