ಬೆಳಾಲು ಶ್ರೀ ಧ. ಮಂ. ಪ್ರೌಢ ಶಾಲೆಯಲ್ಲಿ ಹಿಂದಿ ದಿವಸ್ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯೋಪಾಧ್ಯಾಯ ಜಯರಾಮ ಮಯ್ಯ ಮಾತನಾಡಿ ಮಾತೃಭಾಷೆ ಪ್ರೀತಿಸುವುದರೊಂದಿಗೆ, ಉಳಿದ ಭಾಷೆಗಳನ್ನು ಗೌರವಿಸೋಣ ಎಂದರು. ವಿದ್ಯಾರ್ಥಿನಿ ಮುರ್ಷಿದ ದಿನ ವಿಶೇಷತೆಯ ಕುರಿತು ಮಾತನಾಡಿದರು. ಕಾರ್ಯಕ್ರಮವನ್ನು ಸಂಘಟಿಸಿದ
ಹಿಂದಿ ಶಿಕ್ಷಕಿ ಐಶ್ವರ್ಯ ಹಿಂದಿ ಭಾಷೆಯ ಮಹತ್ವವನ್ನು ತಿಳಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ನಿಶಾನ್ ಸ್ವಾಗತಿಸಿ, ಸೃಜನ್ ವಂದಿಸಿದರು.
ಶ್ರೇಯ ಮತ್ತು ಸೃಜನ್ಯ ಕಾರ್ಯಕ್ರಮ ನಿರೂಪಿಸಿದರು.

