ಮಂಗಳೂರು, ಸೆ. 16: ಮಿಲಾಗ್ರಿಸ್ ಕಾಲೇಜಿನಲ್ಲಿನೆಕ್ಸೋರಾ – ಇಗ್ನೈಟ್ದಿನೆಕ್ಸ್ಟ್ಇರಾ’ ಎಂಬ ಅಂತರಕಾಲೇಜುಪಿಯುಉತ್ಸವವುಸೆ. 16ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನುಖ್ಯಾತ ಫ್ಲೂಟಿಸ್ಟ್ ಹಾಗೂ ಗೋಲ್ಡನ್ಬುಕ್ ಆಫ್ ವರ್ಲ್ಡ್ರೆಕಾರ್ಡ್ಸಾಧಕರಾದ ಶ್ರೀ ರುಬೆನ್ಮಚಾದೊಉದ್ಘಾಟಿಸಿದರು.ನಂತರಮಾತನಾಡಿದರೆಅವರು, ವಿದ್ಯಾರ್ಥಿಗಳ ಪ್ರತಿಭೆಗೆ ಸೂಕ್ತ ವೇದಿಕೆ ದೊರೆತಾಗ ಅವರಲ್ಲಿರುವ ಸಾಮರ್ಥ್ಯ ಮತ್ತಷ್ಟು ಬೆಳೆಯುತ್ತದೆ. ಪಠ್ಯಾಧ್ಯಯನದ ಜೊತೆಗೆ ಸಂಗೀತ, ಕಲೆ, ಸೃಜನಶೀಲತೆ ಹಾಗೂ ವಿವಿಧ ಸಹಪಠ್ಯಚಟುವಟಿಕೆಗಳಲ್ಲಿತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ಸಮಗ್ರವಾಗಿರೂಪಿಸಿಕೊಳ್ಳಬೇಕು. ತಮ್ಮ ಪ್ರತಿಭೆಯನ್ನುಗುರುತಿಸಿಕೊಂಡು, ಆತ್ಮವಿಶ್ವಾಸದಿಂದಮುನ್ನಡೆದಾಗ ಹೊಸ ಅವಕಾಶಗಳ ಬಾಗಿಲುಗಳು ತೆರೆದುಕೊಳ್ಳುತ್ತವೆ’ ಎಂದರು.
ಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಮಾತನಾಡಿದ ರೆ.ಫಾಐವನ್ಮೈಕೆಲ್ರೋಡ್ರಿಗಸ್, ಯುವಜನರಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಶಿಕ್ಷಣ ಸಂಸ್ಥೆಗಳ ಪ್ರಮುಖ ಜವಾಬ್ದಾರಿಯಾಗಿದೆ. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಸೇರಿ ತಮ್ಮ ಪ್ರತಿಭೆಯನ್ನುಪ್ರದರ್ಶಿಸುವುದರಿಂದ ಪರಸ್ಪರ ಕಲಿಕೆ, ಸ್ನೇಹ ಮತ್ತು ಸೌಹಾರ್ದತೆವೃದ್ಧಿಯಾಗುತ್ತದೆ. ‘ನೆಕ್ಸೋರಾ ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆ ಒದಗಿಸುವುದರ ಜೊತೆಗೆ ಅವರ ಭವಿಷ್ಯದ ಕನಸುಗಳಿಗೆಪ್ರೇರಣೆಯಾಗಲಿ’ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿಪ್ಯಾರಿಷ್ಪಾಸ್ಟೊರಲ್ಪರಿಷದ್ನಅಧ್ಯಕ್ಷರಾದಡಿಕ್ಸನ್ಡಿಸೋಜ,ಪ್ಯಾರಿಷ್ಪಾಸ್ಟೊರಲ್ಕೌನ್ಸಿಲ್ನಚುನಾಯಿತ ಸದಸ್ಯರಾದಸುಮಿತಾಪಿಂಟೋ, ನೆಕ್ಸೋರಾಸಂಯೋಜಕರಾದಹರ್ಷಾಸಾಲ್ಯಾನ್,ವಿದ್ಯಾರ್ಥಿಸಂಯೋಜಕರಾದಡೆಲ್ವಿನ್ ಕ್ಲಾಡಿಯಸ್, ಖತೀಜತುಲ್ನಿಮ್ರಾಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಹಾಗೂ ಕ್ಯಾಂಪಸ್ನಿರ್ದೇಶಕರಾದರೆ. ಡಾ. ಆಲ್ವಿನ್ಸೆರಾವೊಸ್ವಾಗತಿಸಿದರು, ಕಾರ್ಯಕ್ರಮದಸಂಯೋಜಕರಾದಮೆಲಿಟಾಕ್ರಾಸ್ತಾವಂದಿಸಿದರು. ಉಪನ್ಯಾಸಕಿಶೈಲಾಮೊರಸ್ನಿರೂಪಿಸಿದರು.
ಸಮಗ್ರಪ್ರಶಸ್ತಿಯನ್ನುಕೆನರಾಪದವಿಪೂರ್ವಕಾಲೇಜುಹಾಗೂದ್ವಿತೀಯಸ್ಥಾನವನ್ನುಸಂತಅಲೋಶಿಯಸ್ಕಾಲೇಜುಪಡೆದುಕೊಂಡಿತು. ಕಾರ್ಯಕ್ರಮದಲ್ಲಿ ನಗರದ 21 ಕಾಲೇಜುಗಳ ಪದವಿಪೂರ್ವಕಾಲೇಜಿನವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನುಪ್ರದರ್ಶಿಸಿದರು.

