ಕಾರ್ನಾಡು ಸಿಎಸ್ಐ ಶಾಲೆಗೆ ಕಂಪ್ಯೂಟರ್ ಕೊಡುಗೆ

0
8

ಮುಲ್ಕಿ : ಸಿಎಸ್ ಗೋಜರ್ ಫೌಂಡೇಶನ್ ಬೆಂಗಳೂರು ವತಿಯಿಂದ 8 ಕಂಪ್ಯೂಟರ್ ಮತ್ತು ಕ್ರಿಶ್ಚಿಯನ್ ಸೊಸೈಟಿ ಮಂಗಳೂರು ಪ್ರಾಯೋಜಕತ್ವದಲ್ಲಿ ನೀಡಲ್ಪಟ್ಟ 1 ಕಂಪ್ಯೂಟರ್ ನ್ನು ಕಾರ್ನಾಡು ಸಿಎಸ್ಐ ಆಂಗ್ಲಮಾಧ್ಯಮ ಶಾಲೆಗೆ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದ ನಿಮಿತ್ತ ಜರಗಿದ ಕೃತಜ್ಞತಾ ಸಭೆಯನ್ನು ರೆ.ಎಡ್ವಿನ್ ವೋಲ್ಟರ್ ಉದ್ಘಾಟಿಸಿ, ದಾನಿಗಳ ನೆರವಿನಿಂದ ಯಾವುದೇ ಸಂಸ್ಥೆಯು ಬೆಳವಣಿಗೆ ಕಾಣಲು ಸಾಧ್ಯ ಎಂದು ಸಂಸ್ಥೆಗೆ ಶುಭಹಾರೈಸಿದರು.

ಇದೇ ಸಂದರ್ಭ ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ.ಪ್ರವೀಣ್ ಶೆಟ್ಟಿ ಪ್ರಾಯೋಜಕತ್ವದಲ್ಲಿ ಸಿಎಸ್ಐ ಶಾಲೆಯಲ್ಲಿ ಜರಗಿದ ಬೆಂಕಿ ರಹಿತ ಅಡುಗೆ ಕಾರ್ಯಕ್ರಮದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಶಾಲಾಭಿವೃದ್ಧಿ ಅಧ್ಯಕ್ಷರು, ಲಯನ್ಸ್ ಮುಲ್ಕಿಯ ಪೂರ್ವಾಧ್ಯಕ್ಷರಾದ ಲ. ಹರ್ಷರಾಜ್ ಶೆಟ್ಟಿ ಜಿ.ಎಮ್. ಮಾತನಾಡಿ, ಅಸಂಖ್ಯಾತ ಮಂದಿಗೆ ವಿದ್ಯೆ ನೀಡಿದ ಸಿಎಸ್ಐ ಶಿಕ್ಷಣ ಸಂಸ್ಥೆಯ ಕಾರ್ಯ ಸ್ತುತ್ಯರ್ಹವಾಗಿದೆ. ಸಂಸ್ಥೆಯ ಬೆಳವಣಿಗೆಗೆ ಶಿಕ್ಷಕರು, ಶಾಲಾಡಳಿತದ ಶ್ರಮ ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಥಳೀಯ ಸಭಾಪಾಲನ ಸಮಿತಿ ಅಧ್ಯಕ್ಷರಾದ ರೆ.ವಿಲಿಯಂ ಕುಂದರ್, ಶಿಕ್ಷಣದ ಜೊತೆಗೆ ಕಂಪ್ಯೂಟರ್ ಕಲಿಕೆಯು ಅನಿವಾರ್ಯ. ಸಂಸ್ಥೆಗೆ ಕೊಡುಗೆ ನೀಡಿದ ದಾನಿಗಳಿಗೆ ಶುಭಹಾರೈಸಿದರು.

ಮುಲ್ಕಿ ಲಯನ್ಸ್‌ ಅಧ್ಯಕ್ಷರಾದ ಲ.ಪ್ರವೀಣ್ ಶೆಟ್ಟಿ, ಕಾರ್ಯದರ್ಶಿ ಲ.ಉದಯ ಅಮೀನ್, ಲ. ಲತಾ ಶೇಖರ್ ಮುಲ್ಕಿ, ಸಿಎಸ್ಐ ಶಾಲಾ ಮಾಜಿ ಸಂಚಾಲಕ ಪ್ರೊ.ಸ್ಯಾಮ್ ಮಾಬೆನ್, ಶಾಲಾ ಸಂಚಾಲಕ ರಂಜನ್ ಜತ್ತನ್ನ, ಮುಖ್ಯ ಶಿಕ್ಷಕಿ ಶಾಂತಿ ಸುಹಾಸಿನಿ ಕರ್ಕಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಶಾಂತಿ ಸುಹಾಸಿನಿ ಕರ್ಕಡ ಸ್ವಾಗತಿಸಿ ದರು. ಶಿಕ್ಷಕಿಯರಾದ ಪ್ರತೀಕ್ಷಾ ಮತ್ತು ಎಲಿಜಬೆತ್ ಪುಷ್ಪಲತಾ ನಿರೂಪಿಸಿ, ಝೀಟಾ ಮೆಂಡೋನ್ಸ ವಂದಿಸಿದರು.