ಕಾರ್ಕಳದಲ್ಲಿ ಅ. 11ರಂದು ವಿಶ್ವ ತುಳು ಲಿಪಿ ದಿನಾಚರಣೆ

0
26

ಶ್ರೀ ಅನಂತಶಯನ ದೇವಸ್ಥಾನದಿಂದ ಗಾಂಧಿ ಮೈದಾನದವರೆಗೆ ತುಳು ಲಿಪಿ ದಿಬ್ಬಣ

ಕಾರ್ಕಳ : ತುಳು ಲಿಪಿಯ ಮಹತ್ವವನ್ನು ಜನಮಾನಸಕ್ಕೆ ಪರಿಚಯಿಸುವ ಹಾಗೂ ತುಳು ಲಿಪಿಯ ಅಧ್ಯಯನ ಮತ್ತು ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಜೈ ತುಳುನಾಡ್ (ರಿ.) ಕಾರ್ಕಳ ಘಟಕದ ವತಿಯಿಂದ ಅಕ್ಟೋಬರ್ 11ರ ಭಾನುವಾರ ವಿಶ್ವ ತುಳು ಲಿಪಿ ದಿನದ ಅಂಗವಾಗಿ ತುಳು ಲಿಪಿ ದಿಬ್ಬಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ತುಳು ಲಿಪಿಯ ಅಧ್ಯಯನ ನಡೆಸಿ ಅದನ್ನು ಜಗತ್ತಿಗೆ ಪರಿಚಯಿಸಿದ ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ ಅವರ ಜನ್ಮದಿನದ ಸ್ಮರಣಾರ್ಥ ವಿಶ್ವ ತುಳು ಲಿಪಿ ದಿನವನ್ನು ಆಚರಿಸಲಾಗುತ್ತಿದೆ.

ಅಂದು ಬೆಳಿಗ್ಗೆ 9.30ಕ್ಕೆ ಕಾರ್ಕಳದ ಶ್ರೀ ಅನಂತಶಯನ ದೇವಸ್ಥಾನದಿಂದ ಆರಂಭವಾಗುವ ತುಳು ಲಿಪಿ ದಿಬ್ಬಣವು ಗಾಂಧಿ ಮೈದಾನದವರೆಗೆ ಸಾಗಲಿದೆ. ತುಳು ಭಾಷೆ ಮತ್ತು ಲಿಪಿಯ ಪ್ರಾಚೀನ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ತುಳುವಾಭಿಮಾನಿಗಳು, ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಆತ್ಮೀಯವಾಗಿ ಆಹ್ವಾನಿಸಿದ್ದಾರೆ.