ಪ್ರಜಾಪ್ರಭುತ್ವ ದಿನಾಚರಣೆ ಸಂಬಂಧ ಯುವ ಸಂಸತ್ತು ಸಭೆ

0
5

ಮೂಡುಬಿದಿರೆ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಅಕ್ಟೋಬರ್ ಒಂಬತ್ತರಂದು ತಾಲೂಕು ಕಚೇರಿಯಲ್ಲಿ ಪ್ರಜಾಪ್ರಭುತ್ವ ದಿನಾಚರಣೆ ಸಂಬಂಧ ಯುವ ಸಂಸತ್ತಿನ ಸಭೆ ಆಯೋಜಿಸಲಾಗಿತ್ತು. ಸಭೆಯ ಉದ್ಘಾಟನೆಯನ್ನು ಮೂಡುಬಿದಿರೆ ನ್ಯಾಯಾಲಯದ ನ್ಯಾಯಾಧೀಶ ಪವಾಜ್ ದೀಪ ಬೆಳಗಿ ವಿದ್ಯಾರ್ಥಿಗಳಿಗೆ ಸಾಮಾಜಿಕ ಜವಾಬ್ದಾರಿಯ ವಿಚಾರಗಳನ್ನು ಅರಿತುಕೊಳ್ಳುವುದಕ್ಕೆ ಇಂತಹ ಕಾರ್ಯಕ್ರಮ ಬಹಳ ಉತ್ತಮ ಅವಕಾಶ. ಇದನ್ನು ಸದುಪಯೋಗಪಡಿಸಿಕೊಂಡು ಬದುಕಿನಲ್ಲಿ ಅಳವಡಿಸಿಕೊಳ್ಳುವುದರಿಂದ ಉತ್ತಮ ನಾಗರಿಕರಾಗಿ ಬೆಳೆಯಬಹುದು ಎಂದು ತಿಳಿಸಿದರು. ಶಾಸಕ ಉಮಾನಾಥ ಕೋಟ್ಯಾನ್ ತಮ್ಮ ಶಾಲಾ ದಿನಗಳನ್ನು ನೆನಪು ಮಾಡಿಕೊಂಡರು. ಉತ್ತಮ ಭಾಷಣಕಾರ ಆಗಿದ್ದ ಕಾರಣ ಹಿರಿಯ ರಾಜಕಾರಣಿ ಕೃಷ್ಣ ಪಾಲೆಮಾರ್ ಗುರುತಿಸಿ ರಾಜಕೀಯಕ್ಕೆ ಅವಕಾಶವನ್ನು ಒದಗಿಸಿದರು ಎಂದು ಸ್ಮರಿಸಿಕೊಂಡರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ತಹಸೀಲ್ದಾರ್ ಶ್ರೀಧರ್ ಎಂ ಅವರು ವಿದ್ಯಾರ್ಥಿಗಳಿಗೆ ಸಂಸತ್ತಿನ ಬಗ್ಗೆ ತಿಳುವಳಿಕೆ ಇರುವುದು ಅತಿ ಅಗತ್ಯವಾಗಿದೆ. ಉತ್ತಮ ರೀತಿಯ ಕಾರ್ಯಕಲಾಪಗಳನ್ನು ಸಂಸತ್ತಿನಲ್ಲಿ ನಡೆಸುವುದರಿಂದ ಒಳ್ಳೆಯ ನಾಗರಿಕತ್ವದ ವಿಚಾರಗಳನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯ ಇದೆ ಎಂದು ಕಿವಿಮಾತು ಹೇಳಿದರು.
ಯುವ ಸಂಸತ್ತಿನ ಮುಖ್ಯಮಂತ್ರಿ ಯಾಗಿ ಆಳ್ವಾಸ್ ನ ಸಾನಿಕ ಉಪಮುಖ್ಯಮಂತ್ರಿಯಾಗಿ ಭವನ ಜ್ಯೋತಿಯ ಲಕ್ಷ್ಮಿ, ವಿರೋಧ ಪಕ್ಷದ ನಾಯಕನಾಗಿ ಪವನ್ ಎಂಪಿ ಹಾಗೂ ಇತರ ಮಂತ್ರಿಗಳಾಗಿ ವಿವಿಧ ಜವಾಬ್ದಾರಿಗಳನ್ನು ಇತರರು ಹೊಂದಿದ್ದರು.

ವಕೀಲರ ಸಂಘದ ಅಧ್ಯಕ್ಷ ಶರತ್ ಶೆಟ್ಟಿ, ತಾಲೂಕು ಗ್ಯಾರೆಂಟಿ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಬಳ್ಳಾರಿ ಕೃಷ್ಣದೇವರಾಯ ವಿವಿಯ ಡಾ ಮೋಹನ್ ದಾಸ್ ಕೆ, ಶಿರ್ತಾಡಿ ಕಾನೂನು ಕಾಲೇಜಿನ ಪ್ರಶಾಂತ್, ಸಮಾಜ ಕಲ್ಯಾಣ ಇಲಾಖೆಯ ಜಯಶ್ರೀ, ಪ್ರವೀಣ್ ಭಂಡಾರಿ ವೇದಿಕೆಯಲ್ಲಿ ಹಾಜರಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ವಿರುಪಾಕ್ಷಪ್ಪ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮೂಡುಮಾರ್ನಾಡು ಜಾನ್ ರೊನಾಲ್ಡ್ ಕಾರ್ಯಕ್ರಮ ನಿರ್ವಹಿಸಿದರು. ಇಲಾಖೆಯ ಸಂತೋಷ್ ವಂದಿಸಿದರು.