ಮಂಗಳೂರಿನಲ್ಲಿ ನಾದ ಸಂಗಮ ತಂಡದ 8ನೇ ಸಂಗೀತ ಕಾರ್ಯಕ್ರಮ ‘ನಾದ ರಾಗ ರಂಗೋಲಿ’ ಸಂಭ್ರಮ

0
15

ಮಂಗಳೂರು: ನಾದ ಸಂಗಮ ತಂಡದ ಎಂಟನೇ ಸಂಗೀತ ಕಾರ್ಯಕ್ರಮವಾದ ‘ನಾದ ರಾಗ ರಂಗೋಲಿ’ ಅಕ್ಟೋಬರ್ 31ರಂದು ಮಂಗಳೂರಿನ ಕಾರಂಗಲ್ಪಾಡಿಯ ಎ.ಜೆ. ಗ್ರಾಂಡ್‌ನಲ್ಲಿ ಸಂಭ್ರಮದಿಂದ ನಡೆಯಿತು.

ಖ್ಯಾತ ಸಂಗೀತ ನಿರ್ದೇಶಕರಾದ ರಾಜನ್-ನಾಗೇಂದ್ರ ಅವರ ರಚನೆಯ ಜನಪ್ರಿಯ ಗೀತೆಗಳೊಂದಿಗೆ ಎಸ್. ಜಾನಕಿ, ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಪಿ.ಬಿ. ಶ್ರೀನಿವಾಸ್ ಅವರು ಹಾಡಿರುವ ಸುಮಧುರ ಹಾಡುಗಳನ್ನು ಸಂಗೀತಗಾರರು ಹಾಡಿ ಸಂಗೀತ ರಸದೌತಣ ನೀಡಿದರು.

ಹಳೆಯ ಕಾಲದ ಜನಪ್ರಿಯ ಚಿತ್ರಗೀತೆಗಳನ್ನು ಮರುಸ್ಮರಿಸುವ ಮೂಲಕ ಸಂಗೀತಾಸಕ್ತರಿಗೆ ಮಧುರ ನೆನಪುಗಳನ್ನು ಮೆಲುಕು ಹಾಕುವ ಅವಕಾಶ ಕಲ್ಪಿಸಲಾಯಿತು. ಗಾಯಕರ ಗಾಯನ ಹಾಗೂ ಸಂಗೀತದ ಮೂಲಕ ಕಾರ್ಯಕ್ರಮವು ವಿಶೇಷ ಮೆರುಗು ಪಡೆದುಕೊಂಡಿತು.

ನಾದ ಸಂಗಮ ತಂಡದ ರೂವಾರಿ ಮೀರಾ ಪಡಿಯಾರ್ ಅವರ ನೇತೃತ್ವದಲ್ಲಿ ಹಾಗೂ ಮಮತಾ ಶೆಟ್ಟಿ ಅವರ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಳಿಗ್ಗೆ 9 ಗಂಟೆಗೆ ಆರಂಭಗೊಂಡ ಸಂಗೀತ ಕಾರ್ಯಕ್ರಮ ಸಂಜೆ 6 ಗಂಟೆಯವರೆಗೆ ನಿರಂತರವಾಗಿ ನಡೆಯಿತು.

ಸಂಗೀತಾಸಕ್ತರು ಒಂದೆಡೆ ಸೇರಿ ಹಳೆಯ ಸುಮಧುರ ಗೀತೆಗಳೊಂದಿಗೆ ದಿನವಿಡೀ ಸಂಗೀತ ಸಂಭ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.