ರಾಜ್ಯ ಸರ್ಕಾರದ ಜನ ವಿರೋಧಿ, ದುರಾಡಳಿತವನ್ನು ಖಂಡಿಸಿ ಬೃಹತ್ ಪಾದಯಾತ್ರೆ

0
7

ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳನ್ನು, ದುರಾಡಳಿತವನ್ನು, ಬೊಕ್ಕಸವನ್ನು ಬರಿದು ಮಾಡಿದ ಸರಕಾರದ ನೀತಿಯನ್ನು ವಿರೋಧಿಸಿ ಮೂಡುಬಿದಿರೆ ಬಿಜೆಪಿ ಪಕ್ಷದ ಮುಂದಾಳುಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸೇರಿ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದರು.

ಪೇಟೆಯ ಆಂಜನೇಯ ದೇವಾಲಯದ ಬಳಿಯಿಂದ ಪ್ರಾರಂಭವಾದ ಪಾದಯಾತ್ರೆ ತಾಲೂಕು ಕಚೇರಿಯ ತನಕ ನಡೆದು ಕಚೇರಿಯ ಎದುರು ಘೋಷಣೆಗಳನ್ನು ಕೂಗುತ್ತಾ ಜನವಿರೋಧಿ ನೀತಿಗಳನ್ನು ಖಂಡಿಸಿದರು. ರಸ್ತೆಯ ಅಸಮರ್ಪಕ ನಿರ್ವಹಣೆ, ಪಿಂಚಣಿ ವ್ಯವಸ್ಥೆಯ ಅಸಮರ್ಪಕತೆ, ಆಸ್ಪತ್ರೆಗಳಲ್ಲಿ ಸೂಕ್ತ ವ್ಯವಸ್ಥೆಗಳನ್ನು ರೋಗಿಗಳಿಗೆ ಮಾಡದೆ ಇರುವುದು, ಸಾರ್ವಜನಿಕ ಅಗತ್ಯದ ಕಾಮಗಾರಿಗಳನ್ನು ನಡೆಸಲು ಹಣದ ಕೊರತೆ ಇತ್ಯಾದಿಗಳನ್ನು ಮುಂದಿಟ್ಟುಕೊಂಡು ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.

ವರದಿ ರಾಯಿ ರಾಜ ಕುಮಾರ್