
ಕಾಸರಗೋಡು : ಕರ್ನಾಟಕ ಸರಕಾರದ ವಾಣಿಜ್ಯ ತೆರಿಗೆಗಳ ಇಲಾಖೆ ಬೆಂಗಳೂರು ಇದರ “ಕನ್ನಡ ಸಂಘ (ನೋo). ಕನ್ನಡ ಭವನ ಕಾಸರಗೋಡು ಜಂಟಿ ಆಶ್ರಯದಲ್ಲಿ ಕಾಸರಗೋಡು ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)ಇದರ ಬಯಲು ರಂಗ ಮಂಟಪದ “ಕನ್ನಡ ಭುವನೇಶ್ವರಿ ವೇದಿಕೆಯಲ್ಲಿ ನಡೆದ “ಕರ್ನಾಟಕ ರಾಜ್ಯೋತ್ಸವ ಸಂಭ್ರಮದಲ್ಲಿ ಗಡಿನಾಡು ಕಾಸರಗೋಡಿನ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರದಲ್ಲಿ ಸೇವೆಗೈಯುತ್ತಿರುವ ಡಾl ಕೆ.ಎನ್. ವೆಂಕಟ್ರಮಣ ಹೊಳ್ಳರಿಗೆ “ಕರ್ನಾಟಕ ರಾಜ್ಯೋತ್ಸವ-2026 ಗೌರವಾರ್ಪಣೆ” ನೀಡಿ ಗೌರವಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರಾದ ಟಿ. ಆರ್. ಕೃಷ್ಣಕುಮಾರ್ ವಹಿಸಿದ್ದರು. ಸಮಾರಂಭದಲ್ಲಿ ಎಮ್. ಪಿ. ರವಿಪ್ರಸಾದ್, ರಮೇಶ್ ಕುಮಾರ್, ವಾಣಿಜ್ಯ ತೆರಿಗೆಗಳ ಇಲಾಖೆ ‘ ಸಿ ‘ಮತ್ತು ‘ಡಿ ‘ದರ್ಜೆ ನೌಕರರ ಸಂಘ (ರಿ.)ಅಧ್ಯಕ್ಷ ಶ್ರೀ ಧರ್ಮರಾಜು. ಸಿ, ವಾಣಿಜ್ಯ ತೆರಿಗೆಗಳ ಇಲಾಖೆ ಎಸ್. ಟಿ /ಎಸ್. ಸಿ ಕ್ಷೇಮಾಭಿವೃದ್ದಿ ಸಂಘ ಅಧ್ಯಕ್ಷರಾದ ದೊರೈ, ಕನ್ನಡ ಸಂಘ ಅಧ್ಯಕ್ಷರಾದ ಕೆ. ಸಿ. ಮಂಜುನಾಥ್, ಉಪಾಧ್ಯಕ್ಷೆ ಶಬಿಸ್ತ ತಬಸ್ಸುಮ್, ಪ್ರಧಾನ ಕಾರ್ಯದರ್ಶಿ ಎಸ್. ಆರ್ ರಂಗರಾಮಯ್ಯ, ಕೋಶಾಧಿಕಾರಿ ನಾಗಲಕ್ಷ್ಮಿ ಕೆ. ಎಸ್ ಕಾರ್ಯಕ್ರಮ ರೂವಾರಿ ದಶರತಿ, ಕನ್ನಡ ಭವನ ಪ್ರಕಾಶಕಿ ಸಂಧ್ಯಾರಾಣಿ ಟೀಚರ್ ಮುಂತಾದವರ ಉಪಸ್ಥಿತರಿದ್ದರು.
ಮಧು ಕೊಡನಾಡು ಕಾರ್ಯಕ್ರಮ ನಿರೂಪಿಸಿದರು ಕನ್ನಡ ಭವನದ ಸಂಸ್ಥಾಪಕರಾದ ಡಾ. ವಾಮನ್ ರಾವ್ ಬೇಕಲ್ ಸ್ವಾಗತಿಸಿ ಕನ್ನಡ ಭವನ ಪ್ರದಾನ ಕಾರ್ಯದರ್ಶಿ ವಸಂತ್ ಕೆರೆಮನೆ ವಂದಿಸಿದರು.
