ನ. 29 ರಂದು ಸಾಲಿಗ್ರಾಮ ಗಣೇಶ್ ಶೆಣೈ ದಂಪತಿಗಳಿಗೆ “ಆದರ್ಶ ದಂಪತಿಗಳ” ಪ್ರಶಸ್ತಿ ಪ್ರಧಾನ

0
10

ದಾವಣಗೆರೆ :ರಾಯಚೂರಿನ ಬೆಳಕು ಸಾಹಿತ್ಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ವತಿಯಿಂದ ನ. 29 ರಂದು ಭಾನುವಾರ ಮಂತ್ರಾಲಯದ ಶ್ರೀಮಠದ ಆವರಣ ಶ್ರೀಗುರು
ರಾಜಾಂಗಣದ ಭವನದಲ್ಲಿ ದಾವಣಗೆರೆಯಲ್ಲಿ 4 ದಶಕಗಳಿಂದ ನಿರಂತರವಾಗಿ ಕಠಿಣ ಪರಿಶ್ರಮದಿಂದ ಕಲೆ, ಸಾಹಿತ್ಯ, ಸಂಗೀತ, ಯಕ್ಷಗಾನ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳನ್ನು ವಾಣಿಜ್ಯ ನಗರಿ ದಾವಣಗೆರೆಯನ್ನು ಸಾಂಸ್ಕೃತಿಕ ನಗರಿಯಾಗಿ ಬದಲಾಯಿಸಿದ ಸಾಧನೆಗಳನ್ನು ಗುರುತಿಸಿ ಜ್ಯೋತಿ ಗಣೇಶ್‌ಶೆಣೈ ದಂಪತಿಗಳಿಗೆ “ “ಆದರ್ಶ ದಂಪತಿಗಳ” ಪ್ರಶಸ್ತಿ ಪ್ರಧಾನ ಮಾಡಲಾಗಿದೆ ಎಂದು ಬೆಳಕು ಸಂಸ್ಥಾಪಕರಾದ ಅಣ್ಣಪ್ಪ ಮೇಟಿ ಗೌಡರವರು ತಿಳಿಸಿದ್ದಾರೆ.

ಸುಕ್ಷೇತರ ಮಂತ್ರಾಲಯದ ಪುಣ್ಯಭೂಮಿಯಲ್ಲಿ “ಗಡಿನಾಡು ಸಮ್ಮೇಳನ”ದಲ್ಲಿ ಆದರ್ಶ ಮಹಿಳಾ ಕೀರ್ತಿಶೇಷ ಕೌಸಲ್ಯ ವೈ.ಕೋರಮಂಗಲ ಅವರ ದತ್ತಿ
ಪ್ರಶಸ್ತಿ ನೀಡಲಾಗುವುದು ಎಂದು ಬೆಳಕು ಸಂಸ್ಥೆಯ ಸಮಿತಿಯವರು ಪ್ರಕಟಿಸಿದ್ದಾರೆ.

ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ, ಬಿಚ್ಕತ್ತಿ ಕುಟುಂಬ, ಜೈಮಹಾಲಸ ಕುಟುಂಬ, ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, ಯಕ್ಷರಂಗ, ಯಕ್ಷಗಾನ ಸಂಸ್ಥೆ, ಚಲನಚಿತ್ರ ಕ್ರಿಯಾಶೀಲ ಸಿನಿಮಾಸಿರಿ ಸಂಸ್ಥೆ, ಕಾವೇರಿ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಸಗಮ ಸಂಗೀತ ಪರಿಷತ್, ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ಛಾಯಾಗ್ರಾಹಕ ಸಂಘ, ಗೌಡ ಸಾರಸ್ವತ ಸಮಾಜ, ಕೇರಳ ಕಲಾಕುಂಚ ಶಾಖೆ, ಕಲಾಕುಂಚ ಮೈಸೂರು ಶಖೆ,ಕಲಾಕುಂಚ ಶಿರಸಿ ಶಾಖೆ, ಕಲಾಕುಂಚ ದಾವಣಗೆರೆಯ ವಿವಿಧ ಬಡಾವಣೆಯ ಶಾಖೆಗಳು, ಕರಾವಳಿ ಮಿತ್ರ ಮಂಡಳಿ ಮುಂತಾದ ಅನೇಕ ಸಂಘಟನೆಗಳ ಸರ್ವ ಸದಸ್ಯರು,ಪದಾಧಿಕಾರಿಗಳು, ಶೆಣೈ ದಂಪತಿಗಳಿಗೆ ಅಭಿಮಾನದಿಂದ
ಅಭಿನಂದಿಸಿದ್ದಾರೆ.