ಜನರೊಂದಿಗೆ ಸ್ಪಂದಿಸಿ ಕಾನೂನಾತ್ಮಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ-ಪೃಥ್ವಿರಾಜ್ ರೈ

0
3

ಮೂಡುಬಿದಿರೆ ಕೋ ಆಪರೇಟಿವ್ ಸರ್ವಿಸ್ ಸೊಸೈಟಿಯ ಸಹಕಾರ ಸಪ್ತಾಹ ಸಂಭ್ರಮದ ಮೂರನೇ ದಿನದ ಕಾನೂನು ಮತ್ತು ಸಹಕಾರ ವಿಷಯದ ದಿಕ್ಸೂಚಿ ಭಾಷಣವನ್ನು ಮಂಗಳೂರಿನ ನ್ಯಾಯವಾದಿ ಪೃಥ್ವಿರಾಜ ರೈ ಮಾತನಾಡಿ ಬ್ಯಾಂಕುಗಳಿಗೆ ಪೈಪೋಟಿ ಕೊಟ್ಟು ಸೊಸೈಟಿಯು ಜನಪರವಾದ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡು ಜನರಿಗೆ ಹತ್ತಿರವಾಗಿದೆ. ಜನರ ಅಗತ್ಯಗಳನ್ನು ಪೂರೈಸಿದ ಕಾರಣ ಜನರ ಸಹಭಾಗಿತ್ವವು ಕಂಡುಬರುತ್ತಿದೆ. ಇಲ್ಲಿ ಕಾನೂನಿಗಿಂತ ಸಹಕಾರಿ ತತ್ವವೇ ಪ್ರಧಾನವಾದದ್ದು. ಪ್ರತಿಯೊಂದನ್ನು ಪ್ರಶ್ನಿಸುವ ಅಧಿಕಾರ ಇದ್ದರೂ ಸಮಾಜದ ಅನುಕೂಲಕ್ಕಾಗಿ ಯಾವುದೇ ಯೋಜನೆಗಳನ್ನು ಜಾರಿಗೆ ತರಲು ಸದಸ್ಯರು ಅಭಿಮತ ನೀಡಬಹುದಾಗಿದೆ ಎಂದರು.

ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷ ಶರತ್ ಶೆಟ್ಟಿ ಮಾತನಾಡಿ ನ್ಯಾಯವಾಗಿಗಳು ಜೀವನದ ಕೊನೆಯ ತನಕವು ಕಲಿಯುವ ವಿದ್ಯಾರ್ಥಿಯಾಗಿರುತ್ತಾರೆ. ಬ್ಯಾಂಕುಗಳು ಹೆಸರನ್ನು ಬದಲಾಯಿಸಿಕೊಂಡಲು ನೀಡಲಾದ ಚೆಕ್ ಸದಾ ಮಾನ್ಯ ವಾಗಿರುತ್ತದೆ. ಪ್ರತಿಯೊಂದನ್ನು ದಾಖಲಿಸಿಕೊಂಡರೆ ಬಹಳ ಉತ್ತಮವಾಗಿರುತ್ತದೆ ಎಂದು ಹಲವಾರು ಉದಾಹರಣೆಗಳನ್ನು ನೀಡಿದರು. ಪುರಸಭೆ ಮುಖ್ಯಾಧಿಕಾರಿ ಇಂದು ಎಂ ಪರಿಸರ ಸ್ನೇಹಿಯಾಗಿ ಸಮಾಜಮುಖಿ ಕಾರ್ಯ ಮಾಡುತ್ತಿರುವ ಸೊಸೈಟಿಯನ್ನು ಮೆಚ್ಚಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ಡಾ ರಶ್ಮಿ ಶೆಟ್ಟಿ ಮಾತನಾಡಿ ಕಾನೂನಿನ ವಿದ್ಯಾರ್ಥಿಗಳು ಜನರೊಂದಿಗೆ ಸೇರಿ ಸಾಕಷ್ಟ ವಿಚಾರಗಳನ್ನು ಕಲಿಯುವದಿದೆ. ಸಹಕಾರಿ ತತ್ವದಲ್ಲಿ ಮಾನವೀಯ ಗುಣವೇ ಪ್ರಧಾನವಾದದ್ದು ಎಂದರು.

ಇದೇ ಸಂದರ್ಭದಲ್ಲಿ ಮೂಡುಬಿದಿರೆಯ 24 ಸಮಾಜಮುಖಿ ಕಾರ್ಯ ಮಾಡುತ್ತಿರುವ ಸಂಘ-ಸಂಸ್ಥೆಗಳಿಗೆ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಸೊಸೈಟಿಯ ಅಧ್ಯಕ್ಷ ಬಾಹುಬಲಿ ಪ್ರಸಾದ್, ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಭಟ್ ಹಾಜರಿದ್ದರು. ವಿಶೇಷ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳಲ್ಲಿ ಸೊಸೈಟಿಯ ಯೋಜನೆಗಳ ಬಗ್ಗೆ, ಅಂಕಿ ಅಂಶಗಳನ್ನು ಪ್ರಸ್ತುತಪಡಿಸಿದ್ದರು. ಚೇತನ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದ್ದರು. ಸುಜಾತ ವಂದಿಸಿದರು. ತರುವಾಯ ಭರತನಾಟ್ಯ ವೈಭವ ಕಾರ್ಯಕ್ರಮ ನಡೆಯಿತು.

ವರದಿ ರಾಯಿ ರಾಜ ಕುಮಾರ್
.