ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ರೂರಲ್ ರಿಸೋರ್ಸಸ್ ಡೆವಲಪ್ಮೆಂಟ್ ಅಸೋಸಿಯೇಷನ್ ಅವರ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ಖಾದಿ ಗ್ರಾಮೋದ್ಯೋಗಕ್ಕೆ ಸಂಬಂಧ ಪಟ್ಟ ಸಂಸ್ಥೆಯವರು ಹಲವಾರು ಜಿಲ್ಲೆಗಳಲ್ಲಿ ತಮ್ಮ ಖಾದಿ ಬಟ್ಟೆಯ ಪ್ರದರ್ಶನ ಮತ್ತು ಮಾರಾಟಗಳನ್ನು ಇದೀಗ ಮೂಡುಬಿದಿರೆ ತಾಲೂಕಿಗೆ ವಿಸ್ತರಿಸಿದ್ದಾರೆ.
ದಿನಾಂಕ 23 ಹಾಗೂ 24 ಎಂದರೆ ಇಂದು ಮತ್ತು ನಾಳೆ ಖಾದಿ ವಸ್ತ್ರ ಹಾಗೂ ರೆಡಿಮೇಡ್ ಬಟ್ಟೆಗಳ, ವಿಸ್ತೃತ ಪ್ರದರ್ಶನ ಹಾಗೂ ಮಾರಾಟ ತಾಲೂಕು ಕಚೇರಿಯಲ್ಲಿ ನಡೆಯುತ್ತಿದೆ. ತಹಸಿಲ್ದಾರ್ ಪುಟ್ಟರಾಜು ಅವರು ಪ್ರದರ್ಶನವನ್ನು ದೀಪ ಬೆಳಗಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ಚೇರ್ಮನ್ ರಂಗನಾಥ್ ಜಿ ಪಿ ಅವರು ಆಗಮಿಸಿದ ಎಲ್ಲರನ್ನು ಸ್ವಾಗತಿಸಿ ಗ್ರಾಮೋದ್ಯೋಗ ಮೂಲಕ ಖಾದಿ ಬಟ್ಟೆಗೆ ಸರಕಾರ 30 ಶೇಕಡಾ ಗಳಷ್ಟು ರಿಯಾಯಿತಿಯನ್ನು ಒದಗಿಸುತ್ತಿದ್ದು ಹೆಚ್ಚಿನ ಜನ ಉಪಯೋಗಿಸಿಕೊಳ್ಳಬೇಕೆಂದು ಕೇಳಿಕೊಂಡರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಡಾ ಅಕ್ಷತಾ ಪೈ, ಇತರ ಅಧಿಕಾರಿಗಳಾದ ರೀತೇಶ್ ಶೆಟ್ಟಿ, ರವಿಕುಮಾರ, ಇದರ ಅಧಿಕಾರಿಗಳು, ವಿವಿಧ ಶಿಕ್ಷಕ ಸಂಘದ ಪದಾಧಿಕಾರಿಗಳು ಹಾಜರಿದ್ದರು. ಬಾಲಕೃಷ್ಣ ರೇಖ್ಯ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
.

