ಬಾಲ್ಯವಿವಾಹ ತಡೆಗೆ ಜಾಗೃತಿ ಅಭಿಯಾನ: ಬನ್ನಂಜೆಯಲ್ಲಿ ವಿಶೇಷ ಕಾರ್ಯಕ್ರಮ

0
14

ಪಡಿ ಮಂಗಳೂರು ಸಂಸ್ಥೆ ವತಿಯಿಂದ ಇಂದು ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿ ನಿಲಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಬನ್ನಂಜೆ ಇಲ್ಲಿ ಬಾಲ್ಯ ವಿವಾಹ ವಿರೋಧಿ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದಲ್ಲಿ ಪಡಿ ಮಂಗಳೂರು ಸಂಸ್ಥೆಯಾ ಕಾರ್ಯ ನಿರ್ವಹನಾ ಅಧಿಕಾರಿ ಪಡಿ ಸಂಸ್ಥೆಯ ರೆನ್ನಿ ಡಿಸೋಜಾ ಕಾರ್ಯನಿರ್ವಾಹಕ ಅಧಿಕಾರಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿನಿಯರಿಗೆ ಬಾಲ್ಯ ವಿವಾಹ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಉಡುಪಿ ವಕೀಲರಾದ ಕುಮಾರಿ ವಿನಯ ಮಾದಕ ವ್ಯಸನದ ಕುರಿತು ಮಾಹಿತಿ ನೀಡಿದರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ತಿಲೋತ್ತಮ ನಾಯಕ್ ರವರು ಬಾಲ್ಯ ವಿವಾಹ, ಮಕ್ಕಳ ಹಕ್ಕು ಗಳ ಕುರಿತು ಮಾತನಾಡಿದರು.

ವಿದ್ಯಾರ್ಥಿನಿಯರು ಪ್ರತಿಜ್ಞಾವಿಧಿ ಸ್ವೀಕರಿಸಿದರು.ಮತ್ತು ಡಾ ಬಿ.ಆರ್.ಅಂಬೇಡ್ಕರ್ ಬಾವಚಿತ್ರಕ್ಕೆ ಪುಷ್ಪ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಬಾಲ್ಯ ವಿವಾಹ ವಿರೋಧಿ ದಿನಾಚರಣೆಯ 100 ದಿನಗಳ ಕಾರ್ಯಕ್ರಮದ ಬ್ಯಾನರ್ ಬಿಡುಗಡೆ ಮಾಡಲಾಯಿತು.ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅರೆ ಕಾಲಿಕಾ ಸ್ವಯo ಸೇವಕಾರಾದ ಶ್ರೀ ರಕ್ಷಿತ್ ಕುಮಾರ್ ಮತ್ತು ಕುಮಾರಿ ಹರಿಣಾಕ್ಷಿ ಉಪಸ್ಥಿತರಿದ್ದಾರೆ.

ಮತ್ತು ವಸತಿ ನಿಲಯ ವಿದ್ಯಾರ್ಥಿಗಲಾದ ಕುಮಾರಿ ಕಲ್ಪನಾ ಮತ್ತು ಕುಮಾರಿ ಸಹನಾ ಭಾಗವಹಿಸಿದರು. ಈ ಕಾರ್ಯಕ್ರಮವನ್ನು ವಿದ್ಯಾರ್ಥಿನಿಲಯದ ಸುಚಿತ ನಿರೂಪಿಸಿದರು ನಿಲಯದ ವಿದ್ಯಾರ್ಥಿನಿರಾದ ಸುಹಾನ ಕಲ್ಪನಾ ಪ್ರಾರ್ಥಿಸಿದರು. ನಿಲಯದ ಮೇಲ್ವಿಚಾರಕಿ ಸುಚಿತ್ರ ಸ್ವಾಗತಿಸಿ ಧನ್ಯವಾದ ಮಂಡಿಸಿದರು.