ಭೈರವಿ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ

0
116

ಮೂಡುಬಿದಿರೆ ನಾಗರಕಟ್ಟೆ ರಸ್ತೆಯ ಸುಮನ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಭೈರವಿ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ ಸಮಾಜ ಮಂದಿರದಲ್ಲಿ ಸೆಪ್ಟೆಂಬರ್ 14ರಂದು ನಡೆಯಿತು. ಸಂಘದ ಅಧ್ಯಕ್ಷ ರಾಮಚಂದ್ರ ಕೆಂಬಾರೆ ಅಧ್ಯಕ್ಷತೆ ವಹಿಸಿ 100% ರಿಕವರಿಯನ್ನು ಪ್ರತಿ ತಿಂಗಳು ಪಡೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಶೇಖರ ನಾಯ್ಕ ಸ್ವಾಗತಿಸಿದರು. ಶಂಕರ ನಾಯ್ಕ ಪ್ರಸ್ತಾವಿಕ ಮಾತನಾಡಿದರು. ಲೆಕ್ಕಪತ್ರ ವಿಠ್ಠಲ ನಾಯ್ಕ ಮಂಡಿಸಿದರು. ಅತಿ ಹೆಚ್ಚು ಠೇವಣಿ ಇಟ್ಟವರನ್ನು ಗೌರವಿಸಲಾಯಿತು. ಪ್ರಕಾಶ್ ನಾಯ್ಕ್ ಬಜೆಟ್ ಮಂಡಿಸಿದರು. ನಿರ್ದೇಶಕರುಗಳಾದ ಸುಂದರ ನಾಯ್ಕ,, ವಿಶ್ವನಾಥ ನಾಯ್ಕ, ಉಮೇಶ ನಾಯ್ಕ, ವಾಸು ನಾಯ್ಕ, ಗೌತಮ್, ಶೋಭಾ ಹಾಜರಿದ್ದರು. ಕಾರ್ಯನಿರ್ವಹಣಾಧಿಕಾರಿ ಶ್ರೀನಿಧಿ ವಾರ್ಷಿಕ ವರದಿ ಮಂಡಿಸಿದರು. ನಿವೇದಿತ ಕಾರ್ಯಕ್ರಮ ನಿರ್ವಹಿಸಿದರು. ಸಂಜೀವ ನಾಯ್ಕ ವಂದಿಸಿದರು.

ವರದಿ ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here