ಮೂಡುಮಾರ್ನಾಡಿನಲ್ಲಿ ದಿನಸಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ಗ್ರಾಮಸ್ಥರ ಪಣ

0
244

ಮೂಡುಮಾರ್ನಾಡು ಗ್ರಾಮದ ತಂಡ್ರಕೆರೆ ವಾರ್ಡಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಿನಸಿ ಅಂಗಡಿಗಳಲ್ಲಿ ಅಕ್ರಮ ಮದ್ಯಮಾರಾಟ ಆಗುತ್ತಿರುವುದನ್ನು ತಡೆಯುವ ಉದ್ದೇಶದಿಂದ ಮಾರ್ನಾಡು ಗರಡಿಯಲ್ಲಿ ಚುನಾಯಿತ ಜನಪ್ರತಿನಿಧಿಗಳು,ಸಂಘಸಂಸ್ಥೆಗಳು, ಮಹಿಳಾಮಂಡಳಿಗಳು, ಹಾಗೂ ಸಮಾಜದ ಪ್ರಮುಖರು, ನಾಗರಿಕರು ಸೇರಿಕೊಂಡು ಸಬೆ ನಡೆಸಿದರು‌.

ಕಾರ್ಯಕ್ರಮದ ನಿರೂಪಣೆಯನ್ನು ಸೌಮ್ಯ ಆಚಾರ್ಯ ನಡೆಸಿದರು, ರಾಜೇಶ್ ಕುಮಾರ್ ಗೋಳಾರ ಇವರು ಸಭೆಯಲ್ಲಿದ್ದ ಎಲ್ಲರನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ‌ ಮಾತನಾಡಿದರು. ನಂತರ ಚೇತನ ಯುವಕ ಮಂಡಲದ ಪರವಾಗಿ‌ ನಿತೇಶ್ ಪೂಜಾರಿ ಮಾರ್ನಾಡುರವರು ಮದ್ಯಪಾನ ಪರಿಸರದ ದಿನಸಿ ಅಂಗಡಿಗಳಲ್ಲಿ ಮಾರಾಟವಾಗುತ್ತಿರುವುದರಿಂದ ಜನರಿಗೆ ಯಾವ ರೀತಿ‌ ತೊಂದರೆಯಾಗುತ್ತಿದೆ. ಎಂದು ಜನರಿಗೆ ಅರ್ಥಪೂರ್ಣವಾಗಿ ತಿಳಿಸಿದರು. ನಂತರ ವಿಘ್ನೇಶ್ವರ ಭಜನಾ ಮಂಡಳಿಯ ಅದ್ಯಕ್ಷರಾದ ರಾಘು ಪೂಜಾರಿಯವರು ಇದೊಂದು ಸಮಾಜದ ಒಳಿತಿಗಾಗಿ ಉತ್ತಮ ಕೆಲಸ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಘೋಷಿಸಿದರು, ಕುಂಭಕಂಠಿಣಿ ಮಹಿಳಾ ಬಳಗದ ಪರವಾಗಿ‌ ಶಶಿಕಲಾ ಗಿರೀಶ್ ರವರು ಮಹಿಳೆಯರಿಗೆ ಇದರಿಂದ ಆಗುತ್ತಿರುವ ಸಮಸ್ಯೆಯ ಬಗ್ಗೆ ತಿಳಿಸಿ, ಇದೊಂದು ಊರಿನ ಒಳಿತಿಗಾಗಿ ಅತಿ ಅಗತ್ಯವಾದ ಕೆಲಸ‌ ಎಂದರು.ಪಡುಮಾರ್ನಾಡು ಗ್ರಾಮ ಪಂಚಾಯತ್ ಅದ್ಯಕ್ಷರಾದ ವಾಸುದೇವ ಭಟ್, ಸದಸ್ಯರಾದ ಕಲ್ಯಾಣಿ ಪೂಜಾರ್ತಿ, ರಾಜೇಶ್ ಪೂಜಾರಿ ಪೆಂರ್ಕಾಡಿ, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅದ್ಯಕ್ಷರಾದ ದೇವರಾಜ್ ಸುವರ್ಣ ಪೊಸಲಾಯಿ, ಹಾಗೂ ಚೇತನ ಯುವಕ ಮಂಡಲದ ಅದ್ಯಕ್ಷರಾದ ಸುನಿಲ್ ಪೂಜಾರಿ, ವಿಘ್ನೇಶ್ವರ ಭಜನಾ ಮಂಡಳಿಯ ಅದ್ಯಕ್ಷರಾದ ರಾಘು ಪೂಜಾರಿ ಜಾರಿಗೆದಡಿ, ಕುಂಭಕಂಠಿನಿ ಮಹಿಳಾ ಬಳಗದ ಉಪಾಧ್ಯಕ್ಷರಾದ ಶ್ರೀಮತಿ ಜಯಂತಿ ಹರೀಶ್, ಪುದ್ದರ್ ಪ್ರೆಂಡ್ಸ್ ನ ಪ್ರಮುಖರಾದ ಸುದರ್ಶನ್, ಚೇತನ ಯುವಕ ಮಂಡಲದ ಪ್ರಧಾನ ಸಲಹೆಗಾರರಾದ ಸುರೇಶ್ ಆಚಾರ್ಯ, ಊರಿನ ಪ್ರಮುಖರಾದ ಪುಂಡಲೀಕ ಭಟ್ ಹುಲ್ಲಜಾಲು, ಶೇಖರ ಪೂಜಾರಿ ಹಿತ್ತಿಲು ಇವರುಗಳು ವೇದಿಕೆಯಲ್ಲಿದ್ದು ಊರಿನ ಒಳಿತಿಗಾಗಿ ನಮ್ಮೆಲ್ಲರ ಬೆಂಬಲವಿದೆ ಎಂದರು, ಹಾಗೂ ಸಭೆಯಲ್ಲಿ ಗ್ರಾಮಸ್ಥರು, ಮಹಿಳೆಯರು, ಸಂಘಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು, ಸಬೆ ಮುಕ್ತಾಯಗೊಂಡ ಬಳಿಕ ಅಕ್ರಮ ಮದ್ಯಮಾರಟ ಮಾಡುವ ಅಂಗಡಿಗಳಿಗೆ ಎಲ್ಲರು ಒಟ್ಟಾಗಿ ಬೇಟಿ ನೀಡಿ ತಕ್ಷಣದಿಂದ ಮದ್ಯ ಮಾರಟ ನಿಲ್ಲಿಸುವಂತೆ ಮನವಿ ಮಾಡಲಾಯಿತು. ಇಲ್ಲವಾದಲ್ಲಿ ಮುಂದೆ ಸಂಬಂದಪಟ್ಟ ಇಲಾಖೆಗಳ ನೆರವು ಪಡೆದು ನಿಮ್ಮ ವಿರುದ್ದ ಕ್ರಮ ಜರಗಿಸಲು ಕಾರ್ಯಪ್ರವ್ರತ್ತರಾಗುತ್ತೇವೆ ಎಂದು ತಿಳಿಸಲಾಯಿತು.

ವರದಿ ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here