ಬೆಳ್ತಂಗಡಿ ತಾಲೂಕು ಯೋಜನೆಯ ಪ್ರಯೋಗ ಶಾಲೆ ಕರ್ನಾಟಕ ರಾಜ್ಯಾದ್ಯಂತ ಯೋಜನೆಯ ಮೂಲಕ ಪ್ರತಿಯೊಬ್ಬರ ಬದುಕನ್ನು ಬೆಳಗಿಸಿದೆ: ಶ್ರದ್ಧಾ ಅಮಿತ್

0
91

ಯೋಜನೆಯ ಬೆಳ್ತಂಗಡಿ ಮತ್ತು ಗುರುವಾಯನಕೆರೆ ತಾಲೂಕಿನ, ಮಂಜುನಾಥ ಸ್ವಾಮಿ ಕಲಾಭವನ ಬೆಳ್ತಂಗಡಿಯಲ್ಲಿ ನಡೆದ ಸೇವಾಪ್ರತಿನಿಧಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಶ್ರದ್ಧಾ ಅಮಿತ್ ರವರು ಮಾತನಾಡುತ್ತಾ ಪೂಜ್ಯರು ಯೋಜನೆಯ ಪ್ರಥಮದ ದಿನಗಳ 1982/83 ರಲ್ಲಿ ರೈತರ ಕೃಷಿ ಭೂಮಿಯ ಅಭಿವೃದ್ಧಿ,ಪ್ರತಿಯೊಬ್ಬರಿಗೂ ಮೂಲಭೂತ ಸೌಕರ್ಯ,ಗ್ರಹ ಬಳಕೆಯ ಸಾಮಗ್ರಿಗಳು ಇದರ ಬಗ್ಗೆ ಪ್ರಥಮದ ಕಾರ್ಯಕರ್ತರು ಪ್ರತಿಯೊಬ್ಬರ ಮನೆ ಮನೆಗೆ ಕಾಲುನಡಿಗೆಯ ಮೂಲಕವಾಗಿ ಭೇಟಿಯನ್ನು ನೀಡಿ ಅವರ ಸಮಸ್ಯೆಗಳನ್ನು ಗುರುತಿಸಿ ವರದಿಯನ್ನು ಮಾಡುತ್ತಿದ್ದರು,ಪೂಜ್ಯರು ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರು, ಈ ವರದಿಗಳನ್ನು ವಿಮರ್ಶಿಸಿ, ಈ ವರದಿಗಳಿಗೆ ಪೂರಕವಾಗಿ ಪ್ರತಿಯೊಬ್ಬರ ಕಷ್ಟಗಳಿಗೆ ಸ್ಪಂದಿಸುವಂತೆ, ಆ ಪಟ್ಟಿಯಲ್ಲಿರುವ ಪ್ರತಿಯೊಬ್ಬರ ಸಾಮರ್ಥ್ಯವನ್ನು ಗುರುತಿಸಿ,ಕ್ಷೇತ್ರದಿಂದ ಇವರಿಗೆ ಬೇಕಾದ ಸಂಪೂರ್ಣವಾದ ಸಹಕಾರ ನೆರವನ್ನು ನೀಡಿ ಪ್ರತಿಯೊಬ್ಬರ ಬದುಕನ್ನು ಬೆಳಗಿಸಿ, ಹೊಸ ಚಿಗುರು ಹಳೆ ಬೇರು ಸೇರಿದಂತೆ ಮರ ಸೊಬಗು ಎನ್ನುವ ಗಾದೆಯಂತೆ, ಒಂದು ಮನೆಯ ಇಡೀ ಕುಟುಂಬಕ್ಕೆ ಒಬ್ಬ ಪಾಲುದಾರ ಸದಸ್ಯನ ಮೂಲಕವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಅವರ ಪ್ರಗತಿಯ ದಾರಿಗೆ ಯೋಜನೆ ಮೂಲ ಕಾರಣ ವಾಗಿದೆ,ಇದಕ್ಕೆ ಪೂರಕ ಕಣ್ಣ ಮುಂದೆ ಇಂತಹ ಅನೇಕ ಅನೇಕ ಸಾಧಕರ ನಿದರ್ಶನಗಳಿವೆ ಎಂದು ತಿಳಿಸಿದರು.
ಪೂಜ್ಯರು ಕ್ಷೇತ್ರಕ್ಕೆ ಭಕ್ತರು ಬಂದಾಗ ಅವರ ಕಷ್ಟಗಳನ್ನು ಪೂಜ್ಯರೊಂದಿಗೆ ಹೇಳಿಕೊಂಡಾಗ,ಪೂಜ್ಯರು ಪ್ರತಿಯೊಬ್ಬರಿಗೂ ಸಮಯವನ್ನು ನೀಡಿ ವ್ಯಕ್ತಿ ಗೌರವಕ್ಕೆ ಗೌರವವನ್ನು ನೀಡುತ್ತಿರುವುದು ನಮಗೆಲ್ಲರಿಗೂ ಮಾದರಿ ಎಂದರು,ಯೋಜನೆಯ ಪ್ರತಿಯೊಬ್ಬ ಕಾರ್ಯಕರ್ತರಿಗೂ ಗೌರವ ಇದೆ ಅದು ತನ್ನ ಸಾಧನೆಯ ಮೂಲಕವಾಗಿ ಆಗಬೇಕು,ಮಾತುಗಾರಿಕೆ ಮನವರಿಕೆ ವ್ಯಕ್ತಿಗೌರವ ಇದನ್ನು ನಾವು ನಮ್ಮಲ್ಲಿ ಮೊದಲಾಗಿ ತೊಡಗಿಸಿಕೊಳ್ಳಬೇಕು, ಸಮರ್ಪಕ ಕೆಲಸವೇ ನಮ್ಮ ಕರ್ತವ್ಯವನ್ನು ಗುರುತಿಸುತ್ತದೆ.
ಉದಾಹರಣೆಗೆ ಬೆಂಗಳೂರಿನ ಕ್ಷೇಮವನದಲ್ಲಿ ಕೆಲಸ ನಿರ್ವಹಿಸುತ್ತಿರುವ ಅಲ್ಲಿಯ ಸಿಬ್ಬಂದಿಗಳ ಬಗ್ಗೆ ಹೊರಗಿನವರು ಅಲ್ಲಿಗೆ ಬಂದಾಗ ಶ್ರದ್ದಮರವರಲ್ಲಿ ಕೇಳುವುದುಂಟು,ನೀವು ಇಂತಹ ನಗುಮೊಗದ ಪ್ರತಿಯೊಬ್ಬರೊಂದಿಗೆ ಸಮಾನವಾಗಿ ಬೆರೆಯುವ,ತನ್ನ ಮನೆಯವರ ರೀತಿಯೇ ಸ್ಪಂದಿಸುವ ಇಂತಹ ಸೇವಕರೇ ನಿಮಗೆ ಹೇಗೆ ಸಿಗುತ್ತಾರೆ ಎನ್ನುವಂತಹ ಮಾತು,ಅದಕ್ಕೆ ಇವರ ಉತ್ತರ ಅದೆಲ್ಲವೂ ಸ್ವಾಮಿಯ ದಯೆ ಎಂದು.
ನಾವು ಪ್ರತಿದಿನವೂ ನಮ್ಮ ವೇಷ ಭೂಷಣಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತೇವೆಯೋ ಹಾಗೆ ನಮ್ಮ ಮನಸ್ಥಿತಿಯನ್ನು ಕೂಡ ಆಯ್ಕೆ ಮಾಡಿಕೊಳ್ಳುವುದು ಅತೀ ಮುಖ್ಯ.
ಪ್ರತಿಯೊಂದು ಕೆಲಸ ಎಂದಾಗ ಸವಾಲುಗಳು ಸಹಜ,ಆ ಸವಾಲುಗಳನ್ನು ಎದುರಿಸಿ ಸೇವೆಯನ್ನು ಮಾಡುತ್ತೇನೆ ಎನ್ನುವ ಆಯ್ಕೆ ನಮ್ಮಲ್ಲಿ ಇರಬೇಕು, ಯೋಜನೆಯ ಅಡಿಪಾಯ ಗಟ್ಟಿಯಾಗಿರುವ ಕಾರಣವಾಗಿಯೇ ಇಂದು ಯೋಜನೆ ಭದ್ರವಾಗಿದೆ,ಈ ಮೂಲಕ ಕಾರ್ಯಕರ್ತರಿಗೆ ಮಾರ್ಗದರ್ಶನವನ್ನು ನೀಡಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್ ಎಸ್ ಸರ್ ರವರು, ಮಾನವೀಯತೆ ಮತ್ತು ಧರ್ಮದ ವ್ಯಾಖ್ಯಾನವೇ ಇದು. ನನಗೆ ಯಾರಿಂದ ಯಾವುದನ್ನು ಬಯಸುತ್ತೇನೆಯೋ ಅದನ್ನೇ ನಾನು ಮತ್ತೊಬ್ಬರಿಗೂ ಕೂಡ ಮಾಡಬೇಕು ಬಯಸಬೇಕು, ನನಗೆ ಯಾರಿಂದ ಯಾವುದನ್ನು ಬಯಸುವುದಿಲ್ಲವೋ ಅದನ್ನು ಮತ್ತೊಬ್ಬರಿಗೂ ಕೂಡ ನಾವು ಬಯಸಬಾರದು.
ಒಂದು ಮನಸ್ಸಿಗೆ ನಾವು ಬೇಸರ ಮಾಡಿದ್ದಲ್ಲಿ ಪ್ರೀತಿ ನಂಬಿಕೆ ಸ್ನೇಹ ಗೌರವ ಸಿಗಲು ಸಾಧ್ಯವಿಲ್ಲ, ಯಾವತ್ತು ನಮಗೆ ಯಾವುದು ಕೂಡ ಅನಿವಾರ್ಯ ಎಂದು ಸೇವೆ ನೀಡಬಾರದು,ನಾವು ಹೃದಯತನದಿಂದ ಸೇವೆಯನ್ನು ನೀಡಬೇಕು, ಮಕ್ಕಳು ಚಿಕ್ಕವರಿದ್ದಾಗಲೇ ಬುದ್ಧಿ ಕಲಿಸಬೇಕು ದೊಡ್ಡವರಾದ ನಂತರ ಸ್ನೇಹಿತರಾಗಿ ನಾವು ಅವರೊಂದಿಗೆ ಇರಬೇಕು, ಯುವ ಸಮೂಹ ಇದೀಗ ಯೋಜನೆಯೊಂದಿಗೆ ಒಂದಾಗುತ್ತಿದ್ದು ನಾವೆಲ್ಲರೂ ಕೂಡ ಯುವ ಸಮೂಹದೊಂದಿಗೆ ಒಂದಾಗಿ ಯೋಜನೆಯನ್ನು ಕಟ್ಟಬೇಕಾಗಿದೆ ಎಂದರು, ನಾವು ಒಬ್ಬರಿಗೆ ಗೌರವವನ್ನು ನೀಡಿದಾಗ ಅವರು ನಮಗೆ ಗೌರವವನ್ನು ನೀಡುತ್ತಾರೆ ಎನ್ನುವುದನ್ನು ಎಂದಿಗೂ ಮರೆಯಬಾರದು.
ತಾಯಿತನದ ಗೌರವವೇ ಬೇರೆ ಸ್ನೇಹಿತತನದ ಗೌರವವೇ ಬೇರೆ, ನಾವು ಒಬ್ಬರಿಗೆ ಗೌರವ ಕೊಟ್ಟಾಗ ನಮ್ಮ ಗೌರವವು ಹೆಚ್ಚಾಗುತ್ತದೆ,ಕಾಯಕದಲ್ಲಿ ವೃತ್ತಿಪರತೆ ಸೇವೆಯಲ್ಲಿ ಸಂವೇದನಾಶೀಲತೆ ನಮ್ಮ ಧ್ಯೇಯವಾಗಬೇಕು, ಎಂದು ಮಾರ್ಗದರ್ಶನ ನೀಡಿದರು.

ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ ಸರ್ ರವರು, ಯೋಜನೆಯ ಕಾರ್ಯಕ್ರಮಗಳ ಮೂಲದಿಂದ ಇಲ್ಲಿಯವರೆಗೆ ಅನುಷ್ಠಾನದ ಹಂತಗಳು ಹಾಗೂ ಇದರಿಂದ ಪಾಲುದಾರ ಮಿತ್ರರು ಅಭಿವೃದ್ಧಿಯ ಪತದದಾರಿಗೆ ಸಾಗಿದ ಪೂರ್ಣ ಚಿತ್ರಣವನ್ನು ತಿಳಿಸಿದರು.
ಮುಂದಕ್ಕೆ ಪಾಲುದಾರ ಬಂಧುಗಳಲ್ಲಿ ಯೋಜನೆಯ ಪೂರ್ಣ ಸಹಕಾರದೊಂದಿಗೆ ಆಗಬೇಕಾದ ಅಭಿವೃದ್ದಿಯ ಬಗ್ಗೆ ಪೂರ್ಣ ಮಾಹಿತಿ ಮಾರ್ಗದರ್ಶನ ನೀಡಿದರು.

ನಿವೃತ್ತ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ಮಹಾವೀರ ಅಜ್ರಿ ಸರ್ ಉಪಸ್ಥಿತರಿದ್ದರು. ಜಿಲ್ಲಾ ನಿರ್ದೇಶಕರಾದ ದಿನೇಶ್ ಸರ್ ರವರು,ಯೋಜನೆಯ ಕಾರ್ಯಕ್ರಮಗಳ ಬಗ್ಗೆ ತಿಳಿಸಿ ಸ್ವಾಗತಿಸಿದರು,
ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಯಶೋಧರ್ ಮತ್ತು ಗುರುವಾಯನಕೆರೆ ತಾಲೂಕಿನ ಯೋಜನಾಧಿಕಾರಿ ಅಶೋಕ್, ಯೋಜನೆಯ ಬೆಳ್ತಂಗಡಿ ತಾಲೂಕಿನ ಮತ್ತು ಗುರುವಾಯನಕೆರೆ ತಾಲೂಕಿನ ಮೇಲ್ವಿಚಾರಕರು ಮತ್ತು ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here