ಉಡುಪಿ: ಪೇಜಾವರ ಶ್ರೀ ವಿಶ್ವಪ್ರಸನ್ನತಿರ್ಥ ಸ್ವಾಮೀಜಿ ಭಾನುವಾರ ಕೃಷ್ಣ ಮಠದಿಂದ ನೀಲಾವರ ಗೋಶಾಲೆಗೆ 10ನೇ ವರ್ಷದ ಪಾದಯಾತ್ರೆ ಕೈಗೊಂಡಿದ್ದರು.
ಬೆಳಗ್ಗೆ 7ಕ್ಕೆ ಕೃಷ್ಣ ಮಠದಿಂದ ಹೊರಟು ರಥಬೀದಿ, ಬಡಗುಪೇಟೆ, ಕಲ್ಸಂಕ, ಗುಂಡಿಬೈಲು, ಅಂಬಾಗಿಲು, ಸಂತೆಕಟ್ಟೆ ಮಾರ್ಗವಾಗಿ ಮಡಿ ಮಲ್ಲಿಕಾರ್ಜುನ ದೇವಸ್ಥಾನ ಭೇಟಿ ನೀಡಿದರು. ನಂತರ ಹೇರೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಧ್ಯಾಹ್ನ ಪೂಜೆ ನೆರವೇರಿಸಿ, ಪ್ರಸಾದ ಸ್ವೀಕರಿಸಿದರು.
ಕುಂಜಾಲು ಮಾರ್ಗವಾಗಿ ಸಾಗಿದ ಪಾದಯಾತ್ರೆ ನೀಲಾವರ ಗೋಶಾಲೆಯಲ್ಲಿ ಸಾಯಂಕಾಲ 3 ಗಂಟೆಗೆ ಸಂಪನ್ನಗೊಂಡಿತು. ಗೋಶಾಲೆಯಲ್ಲಿ ಶ್ರೀಗಳು ಕಾಲೀಯ ಕೃಷ್ಣ ದೇವರ ಪೂಜೆ ನೆರವೇರಿಸಿದರು. 19 ಕಿ.ಮೀ. ಪಾದಯಾತ್ರೆಯಲ್ಲಿ 300ಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು.

