Thursday, April 24, 2025
HomeUncategorizedಶೇರಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅದ್ದೂರಿಯಾಗಿ ,ನಡೆದ ಮಕ್ಕಳ ಮೆಟ್ರಿಕ್ ಮೇಳ

ಶೇರಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅದ್ದೂರಿಯಾಗಿ ,ನಡೆದ ಮಕ್ಕಳ ಮೆಟ್ರಿಕ್ ಮೇಳ

ಬಂಟ್ವಾಳ : ಮಕ್ಕಳಿಗೆ ಸ್ವ ವ್ಯಾಪಾರ ಉದ್ಯೋಗದ ಅನುಭವ ಬಾಲ್ಯದಲ್ಲಿಯೇ ತಿಳಿ ಹೇಳುದು ಉತ್ತಮ ಬೆಳವಣಿಗೆ ಎಂದು ಕಡೇಶಿವಾಲಯ ಗ್ರಾಮ ಪಂಚಾಯತ್ ಸದಸ್ಯ ಸುರೇಶ್ ಬನಾರಿ ಹೇಳಿದರು.

ಅವರು ಬಂಟ್ವಾಳ ತಾಲೂಕಿನ ಶೇರಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ,ನಡೆದ ಸಮುದಾಯದತ್ತ ಶಾಲಾ ಕಾರ್ಯಕ್ರಮ ಮತ್ತು ಮೆಟ್ರಿಕ್ ಮೇಳ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಮೆಟ್ರಿಕ್ ಮೇಳದ ಉದ್ಘಾಟನೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ಚಂದ್ರಶೇಖರ್ ಮಾಡಿದರು.

ಮಕ್ಕಳು ಮನೆಯಲ್ಲಿ ಬೆಳೆಸಿದ ತರಕಾರಿ ತಂದು ವ್ಯಾಪಾರಕ್ಕೆ ಇಟ್ಟಿದ್ದರು. ಜೊತೆಗೆ ಬೆಂಕಿ ಇಲ್ಲದೆ ತಯಾರಿಸುವ ಆಹಾರ ಗಳಾದ ಜ್ಯೂಸ್, ಚರಂಬೂರಿ, ಪಾನಿಪುರಿ, ಐಸ್ ಕ್ರೀಮ್, ಮಾವಿನ ಕಾಯಿ ಮಸಾಲೆ,ಕಲ್ಲಂಗಡಿ,ಫ್ಯಾನ್ಸಿ ಸಾಮಾಗ್ರಿ ಮೊದಲಾದ ವ್ಯಾಪಾರ ಮಾಡಿದರು.
ಮಕ್ಕಳು ವ್ಯಾಪಾರಕ್ಕೆ ಇಟ್ಟ ಊರಿನ ತರಕಾರಿ ಬಹಳ ಕಡಿಮೆ ಬೆಲೆ ಇಟ್ಟಿದರಿಂದ ಉದ್ಘಾಟನೆ ಗೊಂಡ ಕೆಲವೇ ಕ್ಷಣದಲ್ಲಿ ಖಾಲಿಯಾಗಿತು.
ಜಾತ್ರೆಯಲ್ಲಿ ಇರುವಂತ ಮಕ್ಕಳ ಆಟಗಳಾದ ರಿಂಗ್ ಎಸೆತ, ಗ್ಲಾಸ್ ಗೆ ಚೆಂಡು ಎಸೆತ, ಲಕ್ಕಿ ಗೇಮ್ ಮೊದಲಾದ ಆಟಗಳು ಸೇರಿದವರನ್ನು ರಂಜಿಸಿತು.

ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ರುಗಳಾದ, ಚೆನ್ನಪ್ಪ ಎಸ್ ಅಂಚನ್, ಕೇಶವ ಕೆ,
ಐಡಿಯಲ್ ಕ್ಯಾಷು ಇಂಡಸ್ಟ್ರಿ ಮಾಲಕ ಗಂಗಾಧರ, ನಿವೃತ್ತ ಮುಖ್ಯ ಶಿಕ್ಷಕಿ ಕೋಮಲಾಂಗಿ ಜಿ,
ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಚಿದಾನಂದ.
ಉದಯ ಯುವಕ ಮಂಡಲದ ಅಧ್ಯಕ್ಷ ರವಿ, ನೀರಕಜೆ ಅಂಗನವಾಡಿ ಶಿಕ್ಷಕಿ ಪುಷ್ಪ, ಪ್ರಗತಿ ಬಸ್ ಮಾಲಕ.ಸಂಶುದ್ದೀನ್, ಎಸ್ ಡಿ ಎಂ ಸಿ ಸದಸ್ಯರು ಮತ್ತು ಪೋಷಕರು , ಹಳೆ ವಿದ್ಯಾರ್ಥಿಗಳು, ಶಾಲಾ ಶಿಕ್ಷಕ ವೃಂದ.ಉಪಸ್ಥಿತರಿದ್ದರು.

ಶಿಕ್ಷಕಿ ಜೋಸ್ನಾ ಪ್ರಿಯ ವಾಸ್ ಸ್ವಾಗತಿಸಿ, ಪ್ರಭಾರ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ಪಿ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ಮಾಡಿ, ಹಿರಿಯ ಶಿಕ್ಷಕ ಗೋಪಾಲ ಗೌಡ ವಂದಿಸಿದರು. ಶಿಕ್ಷಕಿ ಅನಿತಾ ಕುಮಾರಿ,
ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಶಿಕ್ಷಕಿ ಸುಮಲತಾ ಸಹಕರಿಸಿದರು.

RELATED ARTICLES
- Advertisment -
Google search engine

Most Popular