ಮೂಡುಬಿದಿರೆ : ಸಮಾಜದ ಅಭಿವೃದ್ಧಿಗೆ ಶಿಕ್ಷಣವೇ ಮೂಲ ಎಂಬ ನಂಬಿಕೆಯಿಂದ, ಗ್ರಾಮೀಣ ಪ್ರದೇಶದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೋರುಗುಡ್ಡೆ ಇಲ್ಲಿನ 100 ವಿದ್ಯಾರ್ಥಿಗಳಿಗೆ ನವಚೇತನ ಸೇವಾ ಬಳಗ (ರಿ.) ತೋಡಾರು ಇದರ ನವಚೇತನ ವಿದ್ಯಾ ನಿಧಿ ಅಂಗವಾಗಿ ಉಚಿತ ಶಾಲಾ ಬರವಣಿಗೆ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.
ಮಕ್ಕಳ ಶೈಕ್ಷಣಿಕ ಪ್ರಗತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕೈಗೊಂಡ ಈ ಸಮಾಜಮುಖಿ ಕಾರ್ಯವು ಅರ್ಥಪೂರ್ಣ ಸೇವಾ ಕ್ಷಣವಾಗಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

