ಭಾರತೀಯ ಅಂಚೆ ಇಲಾಖೆ ದಕ್ಷಿಣ ಉಪವಿಭಾಗ ಉಡುಪಿ ಹಾಗೂ ಕಳತ್ತೂರು ಸೌತ್ ಅಂಚೆ ಕಛೇರಿ ಸಹಯೋಗದೊಂದಿಗೆ ಉಡುಪಿ ಅಂಚೆ ಇಲಾಖೆಯ ಅಂಚೆ ಅಧೀಕ್ಷಕರಾದ ಜಯರಾಮ ಶೆಟ್ಟಿ, ಇವರ ಮಾರ್ಗದರ್ಶನದೊಂದಿಗೆ ಜನ ಸಂಪರ್ಕ ಅಭಿಯಾನದ ಅಡಿಯಲ್ಲಿ ಆಧಾರ್ ನೋಂದಣಿ ತಿದ್ದುಪಡಿ ಕಾರ್ಯಕ್ರಮವು ಕಳತ್ತೂರು ಸೌತ್ ಅಂಚೆ ಕಚೇರಿ ಮುಂಭಾಗದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಉಡುಪಿ ದಕ್ಷಿಣ ವಿಭಾಗದ ಸಹಾಯಕ ಅಂಚೆ ಅಧೀಕ್ಷಕರಾದ ಸಿ.ಪಿ ಹರೀಶ್ ಕಳತ್ತೂರು, ಅಂಚೆ ಪಾಲಕರಾದ ದಿವಾಕರ ಬಿ ಶೆಟ್ಟಿ,ಉಡುಪಿ ಅಂಚೆ ಮೇಲ್ವಿಚಾರಕರಾದ ರವಿಕುಮಾರ್ ಕಡೆಕಾರ್, ಸಿಸ್ಟಮ್ ಅಡ್ಮಿನ್ ಸೂರಜ್, ಸಹಾಯಕ ಅಂಚೆಪಾಲಕ ನಿತಿನ್,ಶಿರ್ವ ಎಂಟಿಎಸ್ ಬಸವರಾಜು, ಗ್ರಾಮ ಪಂಚಾಯತ್ ಮಾಜಿ ಸದಸ್ಯ ರಾಜೇಶ್ ಕುಲಾಲ್, ರಮೇಶ್ ಶೆಟ್ಟಿ ಪೇದೆಮನೆ, ಸುರೇಶ್ ಮೂಲ್ಯ ಕುತ್ಯಾರು, ವಿಲ್ಸನ್ ತಾವ್ರೋ ಕಳತ್ತೂರು, ಸುಜಾತ ದಿನೇಶ್ ಮೂಲ್ಯ ಕಳತ್ತೂರು, ಸಿಎ ಬ್ಯಾಂಕ್ ನಿರ್ದೇಶಕ ಸುಂದರ ಮೂಲ್ಯ ಉಪಸ್ಥಿತರಿದ್ದರು.

