ಸುಧಾರಿತ ಸನ್‍ಶೀಲ್ಡ್ ಉತ್ಪನ್ನ ಶ್ರೇಣಿ ಬಿಡುಗಡೆ

0
16

ಮಂಗಳೂರು: ಕಾಸ್ಮೋ ಫಸ್ಟ್ ಮಂಗಳೂರಿನಲ್ಲಿ ಸನ್‍ಶೀಲ್ಡ್ ಬ್ರ್ಯಾಂಡ್ ಅಡಿಯಲ್ಲಿ ಉತ್ಪನ್ನಶ್ರೇಣಿ ವಿಸ್ತರಣೆಯನ್ನು ಪ್ರಕಟಿಸಿದೆ. ಅತ್ಯಧಿಕ ಇಂಧನ ಕ್ಷಮತೆಯ ಮೂಲಕ ಮನೆ, ಕಚೇರಿ ಹಾಗೂ ವಾಣಿಜ್ಯ ಸ್ಥಳಗಳಲ್ಲಿ ಒಳಾಂಗಣ ಪರಿಸರವನ್ನು ಸುಧಾರಿಸುವ ಗುರಿಯನ್ನು ಈ ವಿನೂತನ ಶ್ರೇಣಿ ಹೊಂದಿದೆ.

ಲಸ್ಟರ್, ರೇನ್‍ಬೊ ಮತ್ತು ಅಲ್ಟ್ರಾ ಕೂಲ್ ಸರಣಿಯ ಈ ವಿನೂತನ ಉತ್ಪನ್ನಗಳು ಬೆಳಕಿನ ಸಹಜ ಪ್ರಸರಣದೊಂದಿಗೆ ಶಾಖ/ ಬಿಸಿ ಹೊರಹಾಕುವುದನ್ನು ಸಮತೋಲನಗೊಳಿಸಲು ನೆರವಾಗುತ್ತದೆ. ಗಾಜಿನ ಮೇಲ್ಮೈ ಮೂಲಕ ಪ್ರವೇಶಿಸುವ ಶಾಖದ ಪ್ರಮಾಣವನ್ನು ಸೀಮಿತಗೊಳಿಸುವ ಈ ಫಿಲ್ಮ್‍ಗಳು ಆರಾಮದಾಯಕ ಒಳಾಂಗಣ ಪರಿಸರವನ್ನು ಕಾಯ್ದುಕೊಳ್ಳುವ ಜತೆಗೆ ಹವಾನಿಯಂತ್ರಣ ಕ್ಷಮತೆ ಗರಿಷ್ಠಮಟ್ಟದಲ್ಲಿ ಉಳಿಯಲು ಸಹಕಾರಿ ಎಂದು ಕಾಸ್ಮೋ ಗ್ರಾಹಕ ವ್ಯವಹಾರ ಮುಖ್ಯಸ್ಥ ಅಭಿನೀಶ್ ದಾಸ್ ಹೇಳಿದ್ದಾರೆ.

ಈ ವಿಶಿಷ್ಟ ಸನ್‍ಸ್ಕ್ರೀನ್, ಹವಾನಿಯಂತ್ರಣ ದಕ್ಷತೆ ಹೆಚ್ಚಿಸುವ ಜತೆಗೆ ಪೀಠೋಪಕರಣ, ನೆಲಹಾಸು ಮತ್ತು ಒಳಾಂಗಣ ಅಲಂಕಾರಿಕ ಸಾಮಗ್ರಿಗಳು ಕ್ರಮೇಣ ಮಸುಕಾಗುವುದಕ್ಕೆ ಕಾರಣವಾಗುವ ಅತಿನೇರಳೆ ಕಿರಣಗಳನ್ನು ತಡೆಯುತ್ತದೆ. ನೈಸರ್ಗಿಕ ಬೆಳಕನ್ನೇ ಹೆಚ್ಚು ಅವಲಂಬಿಸುವ ಆಧುನಿಕ ಮನೆ, ಕಚೇರಿಗಳು ಎದುರಿಸುವ ಅತಿಯಾದ ಶಾಖ ಮತ್ತು ಪ್ರಖರತೆಯ ಸವಾಲುಗಳಿಗೆ ಇದು ಉತ್ತರವಾಗಿರುತ್ತದೆ ಎಂದು ವಿವರಿಸಿದ್ದಾರೆ.

ಹವಾನಿಯಂತ್ರಣ ವ್ಯವಸ್ಥೆ ಮೇಲಿನ ಅವಲಂಬನೆ ಹಾಗೂ ಇಂಧನ ಬಳಕೆ ಬಗೆಗಿನ ಜಾಗೃತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಿಟಕಿಗಳ ಮೂಲಕ ಶಾಖದ ಪ್ರವೇಶ ನಿರ್ವಹಿಸುವುದು ಒಳಾಂಗಣ ಸೌಕರ್ಯ ಸುಧಾರಣೆ ನಿಟ್ಟಿನಲ್ಲಿ ಮಹತ್ವದ ಅಂಶವಾಗಿದೆ. ಕಾಸ್ಮೋ ಸನ್‍ಶೀಲ್ಡ್ ಫಿಲ್ಮ್‍ಗಳು ಸೂರ್ಯನ ಶಾಖ ಒಳಪ್ರವೇಶಿಸುವುದನ್ನು ಕಡಿಮೆ ಮಾಡುವ, ತಂಪುಗೊಳಿಸುವ ಪ್ರಕ್ರಿಯೆಗೆ ವಿದ್ಯುತ್ ಬಳಕೆಯನ್ನು ಮಿತಗೊಳಿಸುತ್ತದೆ ಎಂದು ಪ್ರಕಟಣೆ ಹೇಳಿದೆ.

LEAVE A REPLY

Please enter your comment!
Please enter your name here