ಕಾರ್ಕಳ : ಮೇ 29,30, 31 ಹಲಸು ಮಾವು ಮತ್ತು ಸ್ವದೇಶಿ ಉತ್ಪನ್ನಗಳ ಮೇಳ

0
20

ಕಾರ್ಕಳ, ದೀಪಂ ಮತ್ತು ನಮ್ಮ ಕಾರ್ಲ ಪ್ರಾಯೋಜಕತ್ವದಲ್ಲಿ ಹಲಸು ಮಾವು ಮತ್ತು ಸ್ವದೇಶಿ ಉತ್ಪನ್ನಗಳ ಮೇಳ ಮೇ 29,30, 31 ಶುಕ್ರವಾರ, ಶನಿವಾರ, ಆದಿತ್ಯವಾರ ಬೆಳಿಗ್ಗೆ 9 ರಿಂದ ರಾತ್ರಿ 9 ರ ವರೆಗೆ ಭಗವಾನ್ ಬಾಹುಬಲಿ ಪ್ರವಚನಾ ಮಂದಿರ ದಾನಶಾಲೆಯಲ್ಲಿ ನಡೆಯುತ್ತಿದ್ದು ಹಲಸು ಮಾವು ಸ್ವದೇಶಿ ಉತ್ಪನ್ನಗಳ ಮೇಳದ ಉದ್ಘಾಟನೆಯನ್ನು ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಸ್ವದೇಶಿ ಉತ್ಪನ್ನಗಳ ಮೇಳವನ್ನು ನಡೆಸುವ ಮುಖಾಂತರ ಸ್ಥಳೀಯ ಉದ್ಯಮಿಗಳಿಗೆ ಪ್ರೋತ್ಸಾಹ ಮತ್ತು ಆದ್ಯತೆಯನ್ನು ಕೊಡಬೇಕು, ಹಲಸು ಮತ್ತು ಮಾವು ನಮ್ಮಂತಹ ಗ್ರಾಮೀಣ ಪ್ರದೇಶದವರಿಗೆ ಚಿರಪರಿಚಿತ, ನಾವೆಲ್ಲ ಸಣ್ಣದಿರುವಾಗ ಹಲಸು ಮತ್ತು ಮಾವಿನ ಹಣ್ಣನ್ನೇ ಅವಲಂಬಿಸಿಕೊಂಡು ಇದ್ದೆವು, ಬಡತನ ಇದ್ದಾಗ ಹಲಸಿನಿಂದಲೇ ಹೊಟ್ಟೆ ತುಂಬಿಸಿಕೊಳ್ಳುವಂತಹ ನೂರಾರು ಕುಟುಂಬಗಳು ನಮ್ಮ ತಾಲೂಕಿನಲ್ಲಿ ಇತ್ತು, ಆದರೆ ಇವತ್ತು ಜಗತ್ತು ಬಹಳ ವೇಗವಾಗಿ ಬೆಳೆಯುತ್ತಿರುವ ಹಿನ್ನಲೆಯಲ್ಲಿ ಹತ್ತಾರು ಹೊಸ ಕೃಷಿ ಚಟುವಟಿಕೆಗಳು ಬೆಳೆದು ಬರುತ್ತಾ ಇರುವ ಹಿನ್ನಲೆಯಲ್ಲಿ ಕಾರ್ಕಳದಲ್ಲಿ ದೀಪಂ ಮತ್ತು ನಮ್ಮ ಕಾರ್ಲ ಪ್ರಾಯೋಜಕತ್ವದಲ್ಲಿ ಮೂರು ದಿನಗಳ ಕಾಲ ಒಳ್ಳೆಯ ಹಲಸು ಮತ್ತು ಮಾವಿನ ಮೇಳವನ್ನು ಆಯೋಜಿಸಿರುವುದು ತುಂಬಾ ಸಂತೋಷದ ಸಂಗತಿ, ಗೌರವಾನ್ವಿತ ಪ್ರಧಾನ ಮಂತ್ರಿಗಳು ಸ್ಥಳೀಯ ಉದ್ಯಮಿಗಳಿಗೆ ಹೆಚ್ಚು ಪ್ರೋತ್ಸಾಹ ಮತ್ತು ಆದ್ಯತೆಯನ್ನು ಕೊಡಿ ಎಂಬ ಮಾತನ್ನು ಹೇಳಿದ್ದಾರೆ.

ಕುಟುಂಬ ಸಮೇತರಾಗಿ ದೇಶದಲ್ಲಿರುವ ಯಾವುದಾದರೂ ಒಂದು ಪ್ರಸೋದ್ಯಮಕ್ಕೆ ಹೋಗಿ ಬನ್ನಿ ಮತ್ತು ಸ್ವದೇಶಿ ವಸ್ತುಗಳನ್ನು ಖರೀದಿ ಮಾಡಿ ಎಂಬ ಮಾತನ್ನು ಹೇಳಿದ್ದಾರೆ ಇದರ ಹಿಂದೆ ಬಹಳ ದೊಡ್ಡ ಪ್ರಮಾಣದ ಆರ್ಥಿಕ ಚಟುವಟಿಕೆ ಇದೆ ಎಂಬ ಮಾತನ್ನು ಮರೆಯಲಾಗುವುದಿಲ್ಲ. ನಂತರ ಮಾತನಾಡಿದ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಮಂಡಳಿ ಯ ಅಧ್ಯಕ್ಷರಾದ ಮಂಜುನಾಥ ಪೂಜಾರಿಯವರು ಮಾತನಾಡಿ ಮುಂದಿನ ಜನಾಂಗಕ್ಕೆ ಸ್ವದೇಶಿ ಉತ್ಪನ್ನಗಳ ಅರಿವು ಮೂಡಿಸುವ ನಿಟ್ಟಿನಲ್ಲಿ ಇದೊಂದು ಉತ್ತಮ ಕಾರ್ಯಕ್ರಮ, ಅದಲ್ಲದೇ ಇದೊಂದು ಹೃದಯ ಸ್ಪರ್ಶಿ ಕಾರ್ಯಕ್ರಮ, ಈ ಸಂದರ್ಭದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಮಾಡಲಾಗಿದೆ , ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಪೌರ ಕಾರ್ಮಿಕರಾದ ರವಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ವರ್ಧಮಾನ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಶಶಿಕಲಾ ಕೆ ಹೆಗ್ಡೆ ಹಾಗೂ ಕೃಷಿ ಕ್ಷೇತ್ರದಲ್ಲಿ ಶ್ರೀಮತಿ ಆಸ್ಮಾ ಬಾನು ಇವರನ್ನು ಸನ್ಮಾನಿಸುವ ಕಾರ್ಯಕ್ರವನ್ನು ಮಾಡಲಾಗಿದೆ.

ಪೌರ ಕಾರ್ಮಿಕರನ್ನು ಸನ್ಮಾನಿಸಿ ದ್ದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು. ನಂತರ ಜ್ಞಾನ ಸುಧಾ ಶಿಕ್ಷಣ ಸಂಸ್ಥೆಯ ಸುಧಾಕರ್ ಶೆಟ್ಟಿ ಮಾತನಾಡಿದರು. ವೇದಿಕೆಯಲ್ಲಿ ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್, ಮುಖ್ಯ ಅತಿಥಿ ಗಳಾಗಿ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ದ ಅಧ್ಯಕ್ಷರಾದ ಮಂಜುನಾಥ ಪೂಜಾರಿಯವರು ಹಾಗೂ ಜ್ಞಾನ ಸುಧಾ ಶಿಕ್ಷಣ ಸಂಸ್ಥೆಯ ಸುಧಾಕರ್ ಶೆಟ್ಟಿ ಮತ್ತು ವಿಜಯ್ ಶೆಟ್ಟಿ, ವಂದನಾ ರೈ, ಮತ್ತು ಕಾರ್ಯಕ್ರಮ ದ ಪ್ರಾಯೋಜಕರಾದ ಸುಧಾ ಪ್ರಹ್ಲಾದ್ ಮತ್ತು ಅರ್ಚನ ವಿಜೇಶ್ ಶೆಟ್ಟಿ, ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಶ್ವೇತಾ ಎಸ್ ಜೈನ್ ರೆಂಜಾಳ ನಿರೂಪಿಸಿದರು.

LEAVE A REPLY

Please enter your comment!
Please enter your name here