ಸಾಧನೆಗೆ ವಯಸ್ಸು ಅಡ್ಡಿಯಲ್ಲ : ಯೋಗದಲ್ಲಿ ವಿಶ್ವ ದಾಖಲೆ ಬರೆದ ಕಡಬದ ಪುಟಾಣಿ ಅದ್ವಿನ್

0
51

ಕಡಬ : ತಾಲ್ಲೂಕಿನ ಶಿರಾಡಿ ಗ್ರಾಮದ ಅದ್ವಿನ್ ಸಂಪ್ಯಾಡಿ ಯೋಗಾಸನದಲ್ಲಿ ಜಾಗತಿಕ ಮಟ್ಟದ ಸಾಧನೆ ಮಾಡಿದ್ದಾನೆ. ಕಠಿಣವಾದ ಭೂನಮಾನಾಸನ ದಲ್ಲಿ ಬರೋಬ್ಬರಿ 1ಗಂಟೆ, 5 ನಿಮಿಷ 35 ಸೆಕೆಂಡು ಗಳ ಕಾಲ ಇರುವ ಮೂಲಕ ವಿಶ್ವ ದಾಖಲೆಯ ಪುಟ ಸೇರಿದ್ದಾನೆ.

ನೆಲ್ಯಾಡಿಯ ಜ್ಞಾನೋದಯ ಬೆಥನಿ

ಶಾಲೆಯ 4 ನೇ ತರಗತಿ ವಿದ್ಯಾರ್ಥಿ ಯಾಗಿರುವ ಈತ ಸುದರ್ಶನ್ ಕುಮಾರ್ ರಮ್ಯಾ ದಂಪತಿಗಳ ಸುಪುತ್ರ. ಸುಳ್ಯದ ‘ನಿರಂತರ ಯೋಗ’ ಕೇಂದ್ರದ ಗುರುಗಳಾದ ಶರತ್ ಮರ್ಗಿಲಡ್ಕ ಅವರ ಮಾರ್ಗದರ್ಶನದಲ್ಲಿ ಈ ಸಾಧನೆ ಮೂಡಿಬಂದಿದೆ.

LEAVE A REPLY

Please enter your comment!
Please enter your name here