ವಿಮಾನ ಅಪಘಾತದ ಬಳಿಕ ಕಚೇರಿಯಲ್ಲಿ ಪಾರ್ಟಿ; ಏರ್ ಇಂಡಿಯಾದ ಅಧಿಕಾರಿಗಳ ವಜಾ

0
659

ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತದಿಂದ ಇನ್ನು ಯಾರು ಹೊರ ಬಂದಿಲ್ಲ, ಈ ಅಪಘಾತದಲ್ಲಿ ಜೀವನದ ಕಳೆದಕೊಂಡವರ ಕುಟುಂಬ ಇನ್ನು ದುಃಖದಿಂದ ಹೊರಬಂದಿಲ್ಲ. ಇಂತಹ ಸಮಯದಲ್ಲಿ ಏರ್ ಇಂಡಿಯಾದ ವಿಮಾನ ನಿಲ್ದಾಣ ಸಿಬ್ಬಂದಿಗಳು ಪಾರ್ಟಿ ಮಾಡಿದ್ದಾರೆ. ಈ ಬಗ್ಗೆ ವಿಡಿಯೋವೊಂದು ವೈರಲ್​ ಆಗಿದೆ. ಇದೀಗ AISATSನ ನಾಲ್ವರು ಹಿರಿಯ ಉದ್ಯೋಗಿಗಳನ್ನು ವಜಾ ಮಾಡುವಂತೆ ಆದೇಶ ನೀಡಲಾಗಿದೆ.

ಈ ಸುದ್ದಿಗೆ ಜಗತ್ತಿನ ಅನೇಕ ರಾಷ್ಟ್ರಗಳು ಸಂತಾಪ ಹಾಗೂ ದುಃಖವನ್ನು ವ್ಯಕ್ತಪಡಿಸಿತ್ತು. ಭಾರತಕ್ಕೆ ಇದೊಂದು ಕರಾಳ ದಿನ ಕೂಡ ಹೌದು, 259 ಜನರನ್ನು ಈ ವಿಮಾನ ಬಲಿ ತೆಗೆದುಕೊಂಡಿತ್ತು. ಆದರೆ ಈ ಘಟನೆ ನಡೆದು ಇನ್ನು ಒಂದು ತಿಂಗಳು ಕಳೆದಿಲ್ಲ. ದುಃಖದಿಂದ ಹಾಗೂ ನೆನಪಿನಿಂದ ಯಾರು ಹೊರಬಂದಿಲ್ಲ. ಈ ಸಮಯದಲ್ಲಿ ಏರ್ ಇಂಡಿಯಾದ ವಿಮಾನ ನಿಲ್ದಾಣ ಸಿಬ್ಬಂದಿಗಳು ಪಾರ್ಟಿ ಮಾಡಿದ್ದಾರೆ. ಈ ಬಗ್ಗೆ ವಿಡಿಯೋವೊಂದು ವೈರಲ್​ ಆಗಿದೆ. ಈ ವಿಡಿಯೋಗೆ ಸಂಬಂಧಿಸಿದಂತೆ ಏರ್ ಇಂಡಿಯಾದ ವಿಮಾನ ನಿಲ್ದಾಣದ ಗೇಟ್‌ವೇ ಸೇವಾ ಪೂರೈಕೆದಾರ AISATSನ ನಾಲ್ವರು ಹಿರಿಯ ಉದ್ಯೋಗಿಗಳನ್ನು ವಜಾ ಮಾಡುವಂತೆ ಆದೇಶ ನೀಡಲಾಗಿದೆ. ನೌಕರರು ಕೆಲಸದ ಸ್ಥಳದಲ್ಲಿ ಪಾರ್ಟಿ ಮಾಡುತ್ತಿರುವ ವಿಡಿಯೋಗೆ ಸಾರ್ವಜನಿಕ ವಲಯದಿಂದ ಭಾರೀ ಅಕ್ರೋಶ ವ್ಯಕ್ತವಾಗಿತ್ತು. ಈ ಕಾರಣದಿಂದ, ಈ ಪಾರ್ಟಿಯಲ್ಲಿ ಭಾಗಿವಹಿಸಿದ ನಾಲ್ವರು ಹಿರಿಯ ಸಿಬ್ಬಂದಿಗಳನ್ನು ವಜಾ ಮಾಡಲಾಗಿದೆ.

LEAVE A REPLY

Please enter your comment!
Please enter your name here