ದ.ಕ. ಹಾಗೂ ಉಡುಪಿ ಜಿಲ್ಲಾ ಕೃಷಿ ತಾಂತ್ರಿಕ ಪದವೀಧರ ಚಾಪ್ಟರ್ ಉದ್ಘಾಟನೆ

0
9

ಹೈನು, ತೋಟಗಾರಿಕೆ, ಭತ್ತ ಇತ್ಯಾದಿ ಕೃಷಿಯನ್ನು ಮಾಡುತ್ತಿರುವ ತಾಂತ್ರಿಕ ಪದವೀಧರರಿಗೆ ತರಬೇತಿಯನ್ನು ನೀಡುವ ಉದ್ದೇಶವನ್ನು ಹೊಂದಿರುವ ಉಭಯ ಜಿಲ್ಲೆಗಳ ಪಾರಿನಾಥರನ್ನು ಒಟ್ಟುಗೂಡಿಸುವ ಪ್ರಯತ್ನ ಫುಡ್ ಕ್ಯಾಂಪೇನ್ ನಿಂದ ನಡೆಯುತ್ತಿದೆ. ಆ ಪ್ರಕಾರ ಉಭಯ ಜಿಲ್ಲೆಗಳ ಕೃಷಿ ಪದವೀಧರರನ್ನು ಜುಲೈ 18ರಂದು ಮಂಗಳೂರು ಫಿಶರೀಸ್ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಒಟ್ಟುಗೂಡಿಸಿ ಚಾಪ್ಟರ್ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಮಳೆ ಕಡಿಮೆಯಾಗಿರುವ ಕಾರಣದಿಂದ ಸಮರ್ಪಕ ತಳಿಯನ್ನು ಆಯ್ಕೆ ಮಾಡುವ ಬಗ್ಗೆ ಕೃಷಿ ಪದವೀ ತರರಿಗೆ ಚಾಪ್ಟರ್ ನ ಮೂಲಕ ತರಬೇತಿಯನ್ನು ನೀಡಲಾಗುತ್ತದೆ ಅಲ್ಲದೆ ವಿವಿಧ ಕೃಷಿಯನ್ನು ಮಾಡುವವರಿಗೆ ಅವರವರ ತರಬೇತಿಯನ್ನು ತಾಂತ್ರಿಕ ಹಾಗೂ ಪ್ರಾಯೋಗಿಕ ರೀತಿಯಲ್ಲಿ ಒದಗಿಸಲಾಗುತ್ತದೆ. ರಾಜ್ಯ ಮಟ್ಟದಲ್ಲಿ ಈಗಾಗಲೇ 6,000 ಸದಸ್ಯರಿದ್ದು ಉಭಯ ಜಿಲ್ಲೆಗಳ 56 ಸದಸ್ಯರು ನಮ್ಮ ಚಾಪ್ಟರ್ ನಲ್ಲಿ ಸೇರಿರುತ್ತಾರೆ.

ಕೃಷಿ ವಿಜ್ಞಾನ ಕೇಂದ್ರಗಳೂ ನಮ್ಮೊಂದಿಗೆ ಸಹಕರಿಸುತ್ತಿದ್ದಾರೆ ಎಂದು ಅಧ್ಯಕ್ಷ, ನಿವೃತ್ತ ಡೀನ್,ಎಸ್ಎಂ ಶಿವಪ್ರಕಾಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ತೋಟಗಾರಿಕಾ ಉಪ ನಿರ್ದೇಶಕ ಡಾ. ಕೆ ಪ್ರವೀಣ್, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಯತೀಶ್ ತುಕಾರಾಂ, ಡಾ ಅರುಣ್ ಕುಮಾರ್ ಉಪಸ್ಥಿತರಿದ್ದರು.

ವರದಿ ರಾಯಿ ರಾಜ ಕುಮಾರ್