ಸುಭಾಷ್ ನಗರ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ

0
7

ಸುಭಾಷ್ ನಗರ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಸುಭಾಷ್ ನಗರ ಸಜೀಪ ಮೂಡ ಗುರುವಾರದಂದು ವಾರ್ಷಿಕ ಮಹಾಸಭೆಯು ಹರಿಪ್ರಸಾದ್ ಭಂಡಾರಿ ಎ ಅಧ್ಯಕ್ಷತೆಯಲ್ಲಿ ಜರಗಿತ್ತು .

2025 26 ನೇ ಸಾಲಿನಲ್ಲಿ ಸಂಘವು 5. 40,590 ರೂಲಾಭಗಳಿಸಿದೆ ಸದಸ್ಯರಿಗೆ ಇಪ್ಪತ್ತು ಪರ್ಸೆಂಟ್ ಡಿವಿಡೆಂಟ್,ನೀಡಲು ಆಡಳಿತ ಮಂಡಳಿ ತೀರ್ಮಾನಿಸಿದೆ ಸಂಘದ 42 ಕುಟುಂಬಗಳು 164 ಜನರಿಗೆ ಯಶಸ್ವಿನಿ ಯೋಜನೆಯನ್ನು ಅಳವಡಿಸಲಾಗಿದೆ ಹೆಣ್ಣು ಕರು ಸಾಕಾಣಿಕೆ ಯೋಜನೆ,ಅನಿಲಸ್ತಾವರ ಯೋಜನೆ ಹುಲ್ಲುಕಟಾವು ಯಂತ್ರ ,ಹಾಲು ಕರೆಯುವ ಯಂತ್ರ, ಮಿನಿ ಡೈರಿ ಯೋಜನೆ, ಹುಲ್ಲು ಬೆಳೆಸಲು ಅನುದಾನ ರಬ್ಬರ್ ಮ್ಯಾಟ್ ಅನುದಾನ ರಾಸುಗಳಿಗೆ ವಿಮೆ ಪ್ರೋತ್ಸಾಹ ಧನ ವಿತರಣೆ ಮೊದಲಾದ ಮಾಹಿತಿ ನೀಡಲಾಯಿತು ಕಾರ್ಯದರ್ಶಿ ರಮೇಶ್ ಅನ್ನಪ್ಪಾಡಿ, ನಿರ್ದೇಶಕರಾದ ಎಡ್ಮಿನ್ ನೊರೋನಾ, ಬಾಲಕೃಷ್ಣ ಅರಸ, ಜಯಕೆ ,ಮಾಧವ ಬೆಲ್ಚಾಡ ,ಗಣೇಶ್ ಆಳ್ವ ,ಯಶೋಧರ ಕೊಟ್ಟಾರಿ, ಇಕ್ಬಾಲ್ ,ಕಮಲಾಕ್ಷಿ, ಕುಸುಮಾವತಿ, ವಿಜಯ ,ಯಮುನಾ, ಜಯಲಕ್ಷ್ಮಿ, ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ಲಲಿತಾ ಬರ್ಕೆ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.