ಜಪ್ಪಿನಮೊಗರು ಶ್ರೀ ಗಣೇಶೋತ್ಸವದ ವಾರ್ಷಿಕ ಮಾಹಸಭೆ

0
55

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜಪ್ಪಿನಮೊಗರು.   ಇದರ 17ನೇ ವರ್ಷದ ಗಣೇಶೋತ್ಸವದ ಪ್ರಥಮ ಮಹಾಸಭೆಯು ಲಯನ್ಸ್ ಕ್ಲಬ್ ಜಪ್ಪಿನಮೊಗರಿನಲ್ಲಿ 15/06/2025 ಆದಿತ್ಯವಾರ ಸಂಜೆ 4:30ಕ್ಕೆ ಜರಗಿತು..

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷರಾದ ಜೆ.ನಾಗೇಂದ್ರ ಕಮಾರ್ ರವರು ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸುಭಾಷ್ ವಿ ಅಡಪ್ಪರವರು ಸ್ವಾಗತಿಸಿ, ಕುಮಾರಿ ವೈಷ್ಣವಿ ಶೆಟ್ಟಿ ಪ್ರಾರ್ಥನೆಯನ್ನು ನೆರವೇರಿಸಿದರು .

17ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ಹಾಗೂ ಸಿಧಿ ಸಂಗ್ರಹಣೆಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಕಾರ್ಯಕಾರಿ ಸಮಿತಿಯ ನಿರ್ಣಯವನ್ನು ಮುಖ್ಯ ಕಾರ್ಯದರ್ಶಿ ಶ್ರೀಮತಿ ಕವಿತಾ ಗಂಗಾಧರ್ ರವರು ಸಭೆಗೆ ಮಂಡಿಸಿದರು. 16ನೇ ವರ್ಷದ ಗಣೇಶೋತ್ಸವದಲ್ಲಿ ಅತ್ಯಂತ ಹೆಚ್ಚಿನ ಅದೃಷ್ಟ ಕೂಪನ್ ಮಾರಾಟ ಮಾಡಿದ ಲ| ಶ್ರೀ ಗಣೇಶ್ ಶೆಟ್ಟಿ ಕಂರ್ಬುಕೆರೆ ಹಾಗೂ ಶ್ರೀ ಶೈಲೇಶ್ ಭಂಡಾರಿಯವರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. 16ನೇ ವರ್ಷದ ಲೆಕ್ಕ ಪತ್ರವನ್ನು ಪ್ರಧಾನ ಕೋಶಾಧಿಕಾರಿ ಶ್ರೀ ಶೈಲೇಶ್ ಭಂಡಾರಿ ತಾರ್ದೋಲ್ಯ ಸಭೆಗೆ ಮಂಡಿಸಿದರು. ಸಮಾಜಿಕ ಸೇವಾಕರ್ತ ಹಸನ್ ಬಜಾಲ್ವರನ್ನು ಶಾಲು ನೀಡಿ ಸಮಿತಿಗೆ ಸೇರ್ಪಡಿಸಲಾಯಿತು. ಕಳೆದ ವರ್ಷ ಉಪಹಾರದ ಸೇವೆಯನ್ನು ನೀಡಿದವರಿಗೆ ಅಭಿನಂದಿಸಲಾಯಿತು.

ಸಭೆಯಲ್ಲಿ ಕಾರ್ಯಾಧ್ಯಕ್ಷರುಗಳಾದ ಉದಯ ಕೊಟ್ಟಾರಿ ಬಜಾಲ್‌, ಲ| ಗಣೇಶ್‌ ಸಾಲ್ಯಾನ್‌, ಲ| ಗಣೇಶ್‌ ಶೆಟ್ಟಿ ಕಂರ್ಬುಕೆರೆ, ಗೌರವ ಸಲಹೆಗಾರರಾದ ಲ| ಸಂಜೋತ್‌ ಶೇಖ, ಮುಖ್ಯ ಕಾರ್ಯದರ್ಶಿ ಜೆ. ಬಾಲಕೃಷ್ಣ ಶಟ್ಟಿ ಮೊದಲಾದವರು ಉಪಸ್ಥಿತರಿದ್ದರು

ಇದೇ ಬರುವ ತಾ-26-08-2025ನೇ ಮಂಗಳವಾರದಿಂದ ತಾ|28-08-2025ನೇ ಗುರುವಾರದವರೆಗೆ ವೇದಮೂರ್ತಿ ಬ್ರಹ್ಮಶ್ರೀ ವಿಠಲದಾಸ ತಂತ್ರಿ ದೇರೆಬೈಲ್‌ ಇವರ ಪೌರೋಹಿತ್ಯದಲ್ಲಿ ಶ್ರೀ ಗಣೇಶ ಮಂಟಪದಲ್ಲಿ 17ನೇ ವರ್ಷದ ಜಪ್ಪಿನಮೊಗರು ಗಣೇಶೋತ್ಸವವನ್ನು ಬಹಳ ವಿಜೃಂಬಣೆಯಿಂದ ನಡಸುವರೇ ತೀರ್ಮಾನಿಸಲಾಯ್ತು.

ಕಾರ್ಯಕ್ರಮದ ಯಶಸ್ವಿಗೆ ಕಾರಣೀಭೂತರಾದವರಿಗೆ ಕಾರ್ಯಾಧ್ಯಕ್ಷರಾದ ಸುಧಾಕರ್ ಜೆ.ರವರು ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here