ದಿನಾಂಕ : 05-12-2025 , ಶುಕ್ರವಾರ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಸಚ್ಚೇರಿಪೇಟೆಯ ಶಾಲಾ ಆವರಣದಲ್ಲಿ ವಾರ್ಷಿಕ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಯಿತು . ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪೊಸ್ರಾಲ್ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಸಚ್ಚೇರಿಪೇಟೆಯ ಅಧ್ಯಕ್ಷರಾದ ಶ್ರೀಧರ್ ಸನಿಲ್ ರವರು ಶಾಲಾ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಕೆ.ಪಿ. ಸಂತೋಷ್ ಎಂ. ಶೆಟ್ಟಿ ಅವರು ಕ್ರೀಡಾಪಥ ಸಂಚಲನದಲ್ಲಿ Squad ನಾಯಕರಿಂದ ಗೌರವರಕ್ಷೆ ಸ್ವೀಕರಿಸಿದರು. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಸುಧಾಕರ್ ಸಾಲಿಯಾನ್ ರವರು ಕ್ರೀಡಾಜ್ಯೋತಿ ಬೆಳಗಿಸಿದರು. ಶಾಲೆಯ ಸಂಚಾಲಕರಾದ ಲಯನ್ ಕೆ. ಸತ್ಯಶಂಕರ್ ಶೆಟ್ಟಿ ಅವರು ಕ್ರೀಡಾಕೂಟಕ್ಕೆ ಶುಭ ಹಾರೈಕೆ ಮಾಡಿದರು.
ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಲಯನ್ ಕೆ.ಪಿ. ಸುಚರಿತ ಶೆಟ್ಟಿ ಅವರು ಇಂತಹ ಕ್ರೀಡಾಕೂಟವು ವಿದ್ಯಾರ್ಥಿಗಳಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿ ವೃದ್ಧಿಸುವಂತೆ ಪ್ರೇರಣೆಯಾಗಲಿ ಎಂದು ಶುಭಹಾರೈಸಿದರು. ಸಭಾ ಕಾರ್ಯಕ್ರಮದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಗೈದ ಶ್ರೀಧರ್ ಸನಿಲ್, ಸಂತೋಷ್ ಎಂ. ಶೆಟ್ಟಿ, ಸುಧಾಕರ್ ಸಾಲಿಯನ್, ಲಯನ್ ಬಿ. ಸೀತಾರಾಮ್ ಭಟ್ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಲಯನ್ಸ್ ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ಲಯನ್ MJF ಡಾ. ಎ. ರಾಜಾರಾಮ್, ಮು.ಕ.ಲ. ಕ್ಲಬ್‌ನ ಅಧ್ಯಕ್ಷರಾದ ಯಶವಂತ ಆಚಾರ್ಯ, ಲಯನ್ ಆನಂದ ಆಚಾರ್ಯ, ಮತ್ತು ಸಂಸ್ಥೆಯ ಮುಖ್ಯಶಿಕ್ಷಕರಾದ ಗೌರವ್ ಆರ್.ಕೆ. ಮೊದಲಾದವರು ಉಪಸ್ಥಿತರಿದ್ದರು. ಕ್ರೀಡಾಕೂಟಕ್ಕೆ ಲಯನ್ ಕೃಷ್ಣಾ ಶೆಟ್ಟಿ, ಲಯನ್ ಪುರುಷೋತ್ತಮ ಪೂಜಾರಿ, ಲಯನ್ ಸತೀಶ್ ಪ್ರಭು, ಲಯನ್ ಶ್ರೀಕಾಂತ್ ಪ್ರಭು, ಲಯನ್ ಅಶೋಕ್ ಶೆಟ್ಟಿ, ಲಯನ್ ಪ್ರಶಾಂತ್ ಶೆಟ್ಟಿ, ಲಯನ್ ಶರತ್ ಶೆಟ್ಟಿ ಮೊದಲಾದವರು ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಶೈಲಾ ಸ್ವಾಗತಿಸಿ, ಶ್ರೀಮತಿ ಮಂಜುವಾಣಿ ನಿರೂಪಣೆ ಮಾಡಿದರು. ಶ್ರೀಮತಿ ಜಯಲಕ್ಷ್ಮಿ ನಾಯಕ್ ಸನ್ಮಾನಿತರ ಪರಿಚಯ ವಾಚಿಸಿ, ಶ್ರೀಮತಿ ಪ್ರತಿಮಾ ವಂದನಾರ್ಪಣೆ ಗೈದರು.


