ಡಿಜಿಟಲೀಕರಿಸಿದ ಬಸ್ ವೇಳಾಪಟ್ಟಿ ಬಿಡುಗಡೆ

0
227

ವರದಿ ರಾಯಿ ರಾಜ ಕುಮಾರ

ಮೂಡುಬಿದಿರೆ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಸರಕಾರಿ ಮತ್ತು ಖಾಸಗಿ ಬಸ್ಸುಗಳ ಡಿಜಿಟಲೀಕರಣಗೊಂಡ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಲಾಯಿತು. ಮಾಜಿ ಸಚಿವ ಅಭಯ ಚಂದ್ರ ಜೈನ್ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿದ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಕೆನರಾ ಬಸ್ಸು ಮಾಲಕರ ಸಂಘದ ವಲಯ ಅಧ್ಯಕ್ಷ ನಾರಾಯಣ ಪಿ ಎಂ ಅವರು ಮಾತನಾಡಿ ನಿರಂತರ ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಖಾಸಗಿ ಬಸ್ಸುಗಳು ವೇಳಾಪಟ್ಟಿಯಂತೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. ಅದಕ್ಕಾಗಿ ಎಲ್ಲ ಸಿಬ್ಬಂದಿಗಳನ್ನು ಪ್ರಶಂಸಿಸಬೇಕಾಗಿದೆ ಎಂದು ಹೊಗಳಿದರು.
ಲಯನ್ ಅಧ್ಯಕ್ಷ ಶಿವಪ್ರಸಾದ್ ಹೆಗಡೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿ ವಂದಿಸಿದರು. ಈ ಸಂದರ್ಭದಲ್ಲಿ ಶ್ರೀಪತಿ ಭಟ್, ತಿಮ್ಮಯ್ಯ ಶೆಟ್ಟಿ, ಮುನ್ನಾ ರಾವ್, ಜೊಸ್ಸಿ ಮಿನೇಜಸ್, ಬಸ್ ಏಜೆಂಟದ ಸಂತೋಷ್ ಶೆಟ್ಟಿ, ಹಾಗೂ ಇತರರು ಹಾಜರಿದ್ದರು. 

LEAVE A REPLY

Please enter your comment!
Please enter your name here