ಮಾಜಿ ಸೈನಿಕರ ಸಂಘದ ಕಟ್ಟಡ ಉಳಿಸಲು ಮೊರೆ

0
11

ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘದ ಕಟ್ಟಡವು ಮಂಗಳೂರಿನ ಲೈಟ್ ಹೌಸ್ ಹಿಲ್ ನ ಅಂಚಿನಲ್ಲಿ ಸ್ಥಾಪಿತವಾಗಿದೆ. 2025ರ ಮೇ 28ರ ರಾತ್ರಿ ಭಾರಿ ಮಳೆಯಿಂದ ಕಟ್ಟಡದ ತಡೆಗೋಡೆ ಕುಸಿದು ಬಿದ್ದು ಕಟ್ಟಡವು ಅತ್ಯಂತ ಅಪಾಯಕಾರಿಯಾಗಿ ನಿಂತಿದೆ. ಈ ಬಗ್ಗೆ ಈಗಾಗಲೇ ಸರಕಾರ, ಅಧಿಕಾರಿಗಳು, ಶಾಸಕರುಗಳು ಇತ್ಯಾದಿಗಳಿಗೆ ಮನವಿಯನ್ನು ಸಲ್ಲಿಸಿದರು ಯಾವುದೇ ಬೆಂಬಲ, ಪ್ರೋತ್ಸಾಹ ದೊರಕಿರುವುದಿಲ್ಲ.

ಸುಮಾರು 86 ಲಕ್ಷ ಖರ್ಚಾಗಬಹುದಾದ ಈ ತಡೆಗೋಡೆಯನ್ನು ಪುನರಪಿ ನಿರ್ಮಿಸದಿದ್ದರೆ ಈ ವರ್ಷ ಇಡೀ ಸಂಘದ ಕಟ್ಟಡವೇ ನಾಶವಾಗುವ ಸಂಭವವಿರುತ್ತದೆ. ಈ ಸಂಭವನೀಯ ದುರಂತವನ್ನು ತಡೆಯಲು ಸಾರ್ವಜನಿಕರು ಮಾಜಿ ಸೈನಿಕರಿಗೆ ಬಲವನ್ನು ನೀಡುವುದರೊಂದಿಗೆ ಶಾಸಕರು, ಅಧಿಕಾರಿಗಳು, ಸರಕಾರ ಸೂಕ್ತವಾಗಿ ಸ್ಪಂದಿಸಿ ಸಾಕಷ್ಟು ಧನ ಸಹಾಯದ ಬೆಂಬಲವನ್ನು ನೀಡಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಜಯಚಂದ್ರನ್ ಎ.ಕೆ. ವಿನಂತಿಸಿದ್ದಾರೆ. ಈ ಸಂದರ್ಭದಲ್ಲಿ ದೀಪಕ್ ಅಡ್ಯಂತಾಯ, ಬಾಲಚಂದ್ರ ಕೆ ಎಸ್, ಸುಧೀರ್ ಪೈ ಹಾಜರಿದ್ದರು.

ವರದಿ ರಾಯಿ ರಾಜ ಕುಮಾರ
.

LEAVE A REPLY

Please enter your comment!
Please enter your name here