ಮರುಮಾಲ್ಯಮಾಪನ : ನ್ಯೂ ವೈಬ್ರೆಂಟ್ ಪಿಯು ಕಾಲೇಜಿನ 5 ವಿದ್ಯಾರ್ಥಿಗಳಿಗೆ ರಾಜ್ಯಕ್ಕೆ ಅಗ್ರ 10 ರೊಳಗಿನ ರ‍್ಯಾಂಕ್

0
10

ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಈಗಾಗಲೇ ಪ್ರಕಟಗೊಂಡ ಫಲಿತಾಂಶದಲ್ಲಿ ಧನುಷ್ ಗುತ್ತಿ ವಿಜ್ಞಾನದಲ್ಲಿ 600 ಕ್ಕೆ 598 ಅಂಕಗಳಿಸಿ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಪಡೆದು ರಾಜ್ಯ ಮಟ್ಟದಲ್ಲಿ ಅತ್ಯತ್ತಮ ಸಾಧನೆ ಮಾಡಿರುತ್ತಾರೆ.

ಈ ಮೊದಲು ಸರಸ್ವತಿ ಎಂ. ಸಿ. 593 ಅಂಕಗಳಿಸಿದ್ದು ಮರು ಮೌಲ್ಯಮಾಪನದಲ್ಲಿ 2 ಅಂಕ ಹೆಚ್ಚಿಸಿಕೊಂಡು 595 ಅಂಕ ಗಳಿಸಿ ರಾಜ್ಯಮಟ್ಟದಲ್ಲಿ 7ನೇ ರ‍್ಯಾಂ ಕ್ ನಿಂದ 5ನೇ ರ‍್ಯಾಂ ಕ್ ಗೇರಿದ್ದಾರೆ. ಧನುಷ್ ಗುತ್ತಿ ಮತ್ತು ಸರಸ್ವತಿ ಭೌತಶಾಸ್ತ್ರ, ರಸಾಯನಶಾಸ್ತ್ರ , ಗಣಿತ ಮತ್ತು ಕ್ರಮವಾಗಿ ಗಣಕಶಾಸ್ತ್ರ ಹಾಗೂ ಜೀವಶಾಸ್ತ್ರ, ದಲ್ಲಿ 100/100 ಅಂಕ ಪಡೆದಿರುತ್ತಾರೆ.

ರವಿಜೇಜ್ ಎಸ್. ಈ ಮೊದಲು 589 ಅಂಕಗಳಿಸಿದ್ದು ಮಾರು ಮೌಲ್ಯ ಮಾಪನದಲ್ಲಿ 5 ಅಂಕ ಹೆಚ್ಚಿಸಿಕೊಂಡು 594 ಅಂಕಗಳಿಸಿ ರಾಜ್ಯಕ್ಕೆ 6ನೇ ರ‍್ಯಾಂ ಕ್ ಪಡೆದಿದ್ದಾರೆ. ತಸ್ನೀಮ್ ಎಸ್. ಎಂ. 592 ಅಂಕಗಳಿಸಿ ಈ ಮೊದಲೇ ರಾಜ್ಯಕ್ಕೆ 8ನೇ ರ‍್ಯಾಂ ಕ್ ಪಡೆದುಕೊಂಡಿದ್ದರು. ಕಿಶನ್ ಎಸ್. ಮಾತಾಡ್ ಈ ಮೊದಲು 589 ಅಂಕಗಳಿಸಿದ್ದು ಮರುಮೌಲ್ಯ ಮಾಪನದಲ್ಲಿ ಒಂದು ಅಂಕ ಹೆಚ್ಚಿಸಿಕೊಂಡು 590 ಅಂಕಗಳಿಸಿ ರಾಜ್ಯಕ್ಕೆ 10ನೇ ರ‍್ಯಾಂ ಕ್ ಪಡೆದುಕೊಂಡಿದ್ದಾರೆ.

ಹೀಗೆ ಮೊದಲು ಫಲಿತಾಂಶ ಬರುವಾಗ ರಾಜ್ಯಕ್ಕೆ ಅಗ್ರ ರ‍್ಯಾಂ ಕ್ 10ರೊಳಗೆ 3 ರ‍್ಯಾಂಕ್ ಇದ್ದದ್ದು ಮರು ಮೌಲ್ಯಮಾಪನದ ನಂತರ 5 ರ‍್ಯಾಂ ಕ್ ಗೆ ಏರಿಕೆಯಾಗಿದೆ. ಅಲ್ಲದೆ ಯಶಸ್ ಎಸ್ 589, ಶ್ರೇಯಸ್ ಯು. ಶಾನಭಾಗ್ 588, ಅನ್ವಿತಾ ಕಾಮತ್ 588, ಅನುಷಾ ಒ. ಸಿ. 588, ಮನ್ವಿತ್ ಎಸ್. ಪದ್ಮಶಾಲಿ 588, ಪ್ರಕೃತಿ ಎಸ್ 588, ವಿವೇಚನ್ ಡಿ. ಎಂ. 587, ಕಾವ್ಯ ಎನ್. ಆರ್. 586, ಶಿವಪ್ರಸಾದ್ ರಟ್ಟಿ 586, ದಿಲೀಪ್ ಆರ್. ಎಂ. 586, ಇಂಚರ ಆರ್. 585, ನಿರೀಕ್ಷಾ ಎಲ್ 585, ಹರ್ಷಿಣಿ ಕೆ. ಆರ್. 585, ಶ್ರೀನವನಿತ ವಿ. ಆರ್. 585 ಅಂಕಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ . ಅತ್ಯುನ್ನತ ಶ್ರೇಣಿಯಲ್ಲಿ 397 ವಿದ್ಯಾರ್ಥಿಗಳು , ಪ್ರಥಮ ಶ್ರೇಣಿಯಲ್ಲಿ 209 ವಿದ್ಯಾರ್ಥಿಗಳು, ದ್ವಿತೀಯ ಶ್ರೇಣಿಯಲ್ಲಿ 3 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.
.

LEAVE A REPLY

Please enter your comment!
Please enter your name here