ಪೆಲತ್ತಿಮಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಅಷ್ಟಮಂಗಳ ಪ್ರಶ್ನಾಚಿಂತನೆ ಆರಂಭ

0
9

ಶಾಸಕ ಹರೀಶ್ ಪೂಂಜಾ ಭಾಗಿ

ಬಂದಾರು : ಗ್ರಾಮದ ಪೆಲತ್ತಿಮಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಕ್ಷೇತ್ರದ ಸಾನಿಧ್ಯ ಗುಣದೋಷಗಳ ಪರಿಜ್ಞಾನಾರ್ಥವಾಗಿ ಅಷ್ಟಮಂಗಳ ಪ್ರಶ್ನಾಚಿಂತನೆ ಕಾರ್ಯಕ್ರಮ ಅಕ್ಟೋಬರ್ 30ರಿಂದ ನವೆಂಬರ್ 1ರವರೆಗೆ ನಡೆಯುತ್ತಿದೆ.

ಕ್ಷೇತ್ರದ ತಂತ್ರಿಗಳಾದ ವೇ.ಮೂ. ಸೀತಾರಾಮ ಮುಚ್ಚಿಂತ್ತಾಯ ಅವರ ನೇತೃತ್ವದಲ್ಲಿ ಖ್ಯಾತ ಜ್ಯೋತಿಷಿ ಕಟಪಾಡಿ ಪ್ರವೀಣ್ ತಂತ್ರಿ ಅವರು ಅಷ್ಟಮಂಗಳ ಪ್ರಶ್ನಾಚಿಂತನೆಯನ್ನು ನಡೆಸುತ್ತಿದ್ದಾರೆ.

ಅಕ್ಟೋಬರ್ 30ರಂದು ನಡೆದ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಭಾಗವಹಿಸಿ ದೇವರ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಕ್ಷೇತ್ರದ ಅನುವಂಶಿಕ ಮೊಕ್ತೇಸರರು, ಶ್ರೀ ವಿಷ್ಣುಮೂರ್ತಿ ಸೇವಾ ಟ್ರಸ್ಟ್ (ರಿ.) ಹಾಗೂ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯ ಪದಾಧಿಕಾರಿಗಳು, ಊರಿನ ಪ್ರಮುಖರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಅರ್ಚಕರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.