ವ್ಯಸನಗಳ ದುಷ್ಪರಿಣಾಮದಅರಿವು ವಿದ್ಯಾರ್ಥಿಜೀವನದ ಯಶಸ್ಸಿಗೆ ಸಹಕಾರಿ

0
2

ಸರ್ಕಲ್‌ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್‌ಅಭಿಮತ

ಮೂಡುಬಿದಿರೆ: ಶ್ರೀ ಮಹಾವೀರಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್‌ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ಹೆಮ್ಮೆಯ ಹಳೆವಿದ್ಯಾರ್ಥಿ, ಮಣಿಪಾಲದ ಸರ್ಕಲ್‌ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್‌ಅವರು‘ವಿದ್ಯಾರ್ಥಿಗಳ ವೈಯಕ್ತಿಕ ಮತ್ತು ಸಾಮಾಜಿಕ ಜವಾಬ್ದಾರಿಗಳು’ ಎಂಬ ವಿಷಯದಕುರಿತು ವಿಶೇಷ ಉಪನ್ಯಾಸ ನೀಡಿದರು.
ಮಾದಕವಸ್ತು ಸೇರಿದಂತೆಯಾವುದೇರೀತಿಯ ವ್ಯಸನಗಳ ದುಷ್ಪರಿಣಾಮಗಳನ್ನು ಅರಿತು ಅವುಗಳಿಗೆಗುಲಾಮರಾಗದಿದ್ದರೆ ವಿದ್ಯಾರ್ಥಿಗಳು ಜೀವನದಲ್ಲಿಯಶಸ್ಸು ಸಾಧಿಸಲು ಸಾಧ್ಯ.ಕಾಲೇಜು ವಿದ್ಯಾರ್ಥಿಗಳು ಹೆಚ್ಚಾಗಿ ತಮ್ಮ ಸಮವಯಸ್ಕ ವಿದ್ಯಾರ್ಥಿ ಸಮೂಹಅಥವಾತಮ್ಮ ವಯೋಮಾನದಇತರರಿಂದ ಪ್ರಭಾವಕ್ಕೆ ಒಳಗಾಗುತ್ತಾರೆ.ಈ ಪ್ರಭಾವದಿಂದಾಗಿಕೆಟ್ಟ ವಿಷಯಗಳತ್ತ ಆಕರ್ಷಿತರಾಗದಂತೆಎಚ್ಚರವಹಿಸಬೇಕು.ಸೈಬರ್ ಅಪರಾಧಗಳಿಗೆ ಭಾವನಾತ್ಮಕ ನಡವಳಿಕೆ ಮತ್ತು ನಮ್ಮ ಮೊಬೈಲಿನಲ್ಲಿರುವ ಅಪ್ಲಿಕೇಶನ್‌ಗಳಿಗೆ ನಾವು ನೀಡುವಅನುಮತಿ (ಆ್ಯಕ್ಸೆಸ್‌ಕಂಟ್ರೋಲ್)ಗಳು ಮುಖ್ಯಕಾರಣಗಳಾಗುತ್ತವೆ ಎಂದರು.
ಸರ್ಕಾರಿ ಸೇವೆಗಳಿಗೆ ಸೇರಬಯಸುವಯುವಜನತೆಅಥವಾ ವಿದ್ಯಾರ್ಥಿಗಳು ತಮ್ಮ ಪೌಢಶಾಲಾ ಹಂತದಲ್ಲೇ ವಿದ್ಯಾಭ್ಯಾಸದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವಅಧ್ಯಯನವನ್ನೂಆರಂಭಿಸಬೇಕು.ಆಗ ಸುಲಭವಾಗಿ ಸರ್ಕಾರಿಉದ್ಯೋಗದೊರೆಯಲು ಸಾಧ್ಯಎಂದುತಮ್ಮ ಪೌಢಶಾಲಾ ದಿನಗಳ ಓದು ಮತ್ತು ಮಹಾವೀರಕಾಲೇಜಿನ ಎನ್‌ಸಿಸಿ ಘಟಕದಲ್ಲಿಕಠಿಣ ಶ್ರಮದ ಮೂಲಕ ತಾವು ಪಡೆದಜೀವನಾನುಭವತಮಗೆ ಸರ್ಕಾರಿ ಕೆಲಸ ಪಡೆಯಲು ನೆರವಾಗಿದೆಎಂದು ಸ್ಮರಿಸಿದರು.ಕಠಿಣ ಪರಿಶ್ರಮ ಮತ್ತುಗುರಿಯೆಡೆಗಿನ ಅಚಲ ನಿಷ್ಠೆಗಳು ವಿದ್ಯಾರ್ಥಿಗಳಲ್ಲಿ ಇರಬೇಕಾದ ಮುಖ್ಯ ಗುಣಗಳು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದರು. ಗಣಕ ವಿಜ್ಞಾನ ವಿಭಾಗದ ಕು.ದೀಕ್ಷಾಕಾರ್ಯಕ್ರಮ ಸಂಯೋಜಿಸಿದರು.ಡಾ. ಚಂದನಾ ಕೆ.ಎಸ್.ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿಕಾಲೇಜಿನ ಬೋಧಕ- ಬೋಧಕೇತರ ಸಿಬ್ಬಂದಿ, ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳು ಭಾಗವಹಿಸಿದರು.