ಸುಸ್ಥಿರ ಕೃಷಿ ಮತ್ತು ಅನ್ವೇಷಣೆ ಕುರಿತು ಜಾಗೃತಿ ಕಾರ್ಯಕ್ರಮ

0
76

ವರದಿ ರಾಯಿ ರಾಜ ಕುಮಾರ

ಸಾಣೂರು ರಾಜೇಶ್ವರಿ ನ್ಯಾಷನಲ್ ಸ್ಕೂಲ್ ಮತ್ತು ಸವಿ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ, “ಸುಸ್ಥಿರ ಕೃಷಿ ಮತ್ತು ಅನ್ವೇಷಣೆ” ಕುರಿತ ಜಾಗೃತಿ ಕಾರ್ಯಕ್ರಮವು ಅಕ್ಟೋಬರ್ 5 ರಂದು ನೆರವೇರಿತು.
ಡಾ. ರಾಮಕೃಷ್ಣ ಶರ್ಮಾ ಅವರು ವಿಜ್ಞಾನಾಧಾರಿತ ಸರಿಯಾದ ಕೃಷಿ ಪದ್ಧತಿಗಳು, ಮಣ್ಣು ಮತ್ತು ಬೆಳೆಗಳ ಸಂರಕ್ಷಣೆಯ ಮಹತ್ವವನ್ನು ವಿವರಿಸಿ, ರೈತರ ಬದುಕು ಒಗ್ಗೂಡಿಸುವ ಸಾಧನವಾಗಿ ಸುಸ್ಥಿರ ಕೃಷಿ ಕಾರ್ಯನಿರ್ವಹಿಸುತ್ತದೆ ಎಂದರು. ಪ್ರಭಾರ ಮುಖ್ಯಶಿಕ್ಷಕಿ ಶ್ರೀಮತಿ ಆಸ್ಯಾ ಬಾನು (ಪೆರುವಾಜೆ ಶಾಲೆ) ಅವರು ಬತ್ತದ ತಳಿಗಳ ವೈವಿಧ್ಯತೆ ಮತ್ತು ಅವುಗಳ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಲ್ಲಿ ಕುತೂಹಲ ಹುಟ್ಟಿಸುವ ಮಾಹಿತಿಯನ್ನು ಹಂಚಿಕೊಂಡರು. ಅತಿಥಿಗಳಾದ ಹಾಗೂ ಸವಿ ಫೌಂಡೇಶನ್ ಟ್ರಸ್ಟಿ ಡಾ. ರತನ್ ಗಾಂವ್ಕರ್ ಅವರು ಅನ್ವೇಷಣೆ ಮತ್ತು ಸಂಶೋಧನೆ ಮೂಲಕ ಕೃಷಿ ಕ್ಷೇತ್ರದ ಅಭಿವೃದ್ಧಿಯ ಅಗತ್ಯವನ್ನು ತಿಳಿಹೇಳಿದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಭಾಷಣ ಸ್ಪರ್ಧೆ ಆಯೋಜಿಸಲಾಯಿತು. ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಡಾ. ಸಂದೀಪ್ ನಾಯಕ್ ಪ್ರಾಸ್ತಾವಿಕ ನುಡಿದರು.
ಕಾರ್ಯಕ್ರಮಕ್ಕೆ ರಾಜೇಶ್ವರಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಶ್ವೇತಾ ಡಿ. ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಪ್ರಾಂಶುಪಾಲರಾದ ಸಚಿನ್ ಕೆ.ಎನ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ಶಾಂತಲಾ ಆಚಾರ್ಯ ಕಾರ್ಯಕ್ರಮವನ್ನು ಸಮರ್ಪಕವಾಗಿ ನಿರ್ವಹಿಸಿದರು. ಶ್ರೀಮತಿ ವಿನುತಾ ರೈ ಸ್ವಾಗತಿಸಿ, ಶ್ರೀಮತಿ ವಿನುತ ಪೈ ವಂದಿಸಿದರು.

LEAVE A REPLY

Please enter your comment!
Please enter your name here