ನ. 30ರಂದು ತುಳುವೆರೆಂಕುಲು(ರಿ) ಬೆಂಗಳೂರು ವತಿಯಿಂದ ಬಲೀಂದ್ರ ಹಬ್ಬ ಮತ್ತು ಬಲೀಂದ್ರ ಪ್ರಶಸ್ತಿ ಪ್ರದಾನ ಸಮಾರಂಭ-2025

0
126


ಬೆಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ತುಳುವೆರೆಂಕುಲು(ರಿ) ಬೆಂಗಳೂರು ವತಿಯಿಂದ ಬಲೀಂದ್ರ ಹಬ್ಬ ಮತ್ತು ಬಲೀಂದ್ರ ಪ್ರಶಸ್ತಿ ಪ್ರದಾನ ಸಮಾರಂಭ-2025ರಂದು ನವೆಂಬರ್‌ 30ರಂದು ಸಂಜೆ 3.30ಕ್ಕೆ ಪೂರ್ಣಿಮಾ ರಿಜೆನ್ಸಿ ಸಿದ್ದಯ್ಯ ರಸ್ತೆ ವಿಲ್ಸನ್‌ ಗಾರ್ಡನ್‌ ಬೆಂಗಳೂರಿನಲ್ಲಿ ನಡೆಯಲಿದೆ. ಸಂಜೆ 3.30 ಗಂಟೆಗೆ ಉಪಹಾರ, ಮನೋರಂಜನಾ ಕಾರ್ಯಕ್ರಮ, ಸಭಾ ಕಾರ್ಯಕ್ರಮ ನಡೆಯಲಿದೆ.
ಚಾರ್ಲ್ಸ್‌ ಗೋಮ್ಸ್‌ ಅಧ್ಯಕ್ರು ತುಳುವೆರೆಂಕುಲು ಬೆಂಗಳೂರು ಇವರು ಅಧ್ಯಕ್ಷತೆ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ವಿ. ಮನೋಹರ್‌ ಖ್ಯಾತ ಸಂಗೀತ ನಿರ್ದೇಶಕರು, ಡಾ|| ನರೆಂದ್ರ ರೈ ದೇರ್ಲ ಖ್ಯಾತ ಪತ್ರಕರ್ತರು, ದಿನೇಶ್‌ ಹೆಗ್ಡೆ ಅಧ್ಯಕ್ಷರು ತುಳುಕೂಟ ಉಪಸ್ಥಿತರಿರಲಿರುವರು.

ಶಾಲಿನಿ ಮೂರ್ತಿ ಸಾಹಿತ್ಯ(ಪದ್ಧಾನ), ಕೆ. ಸುಬ್ರಹ್ಮಣ್ಯ ಖ್ಯಾತ ಪತ್ರಕರ್ತರು, ಗಣೇಶ್‌ ರಾವ್‌ ಉದ್ಯಮಿ ಬಲೀಂದ್ರ ಪ್ರಶಸ್ತಿ ಸ್ವೀಕರಿಸಲಿರುವರು.
ಪಳ್ಳಿ ವಿಶ್ವನಾಥ ಶೆಟ್ಟಿ ಕಾರ್ಯಕ್ರಮನ ನಿರೂಪಿಸಲಿರುವರು.

LEAVE A REPLY

Please enter your comment!
Please enter your name here