ಡಿ. 1 ರಂದು ಕಲಾಕುಂಚ ಕೇರಳ ಶಾಖೆಯಿಂದ ಗೀತಾ ಸಪ್ತಾಹ ಉದ್ಘಾಟನೆ

0
94

ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಕೇರಳದ ಗಡಿನಾಡಿನ ಶಾಖೆ ಹಾಗೂ ಕೊಂಡೆವೂರಿನ ಎಸ್.ಎಸ್.ಎನ್.ವಿ.ಪಿ. ವಿದ್ಯಾಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಡಿ. 1 ರ ಸೋಮವಾರ ಬೆಳಿಗ್ಗೆ 9 ರಿಂದ ಗೀತಾ ಸಪ್ತಾಹ ಉದ್ಘಾಟನೆ ನಡೆಯಲಿದೆ ಎಂದು ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯುವ ಈ ಗೀತಾ ಸಪ್ತಾಹವನ್ನು ವಿಶೇಷ ಅಭ್ಯಾಗತರಾದ ಶ್ರೀಯುತ ಸುಬ್ರಾಯ ನಂದೋಡಿ ನಡೆಸಿಕೊಡಲಿದ್ದಾರೆ. ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಜಯಲಕ್ಷ್ಮಿ ಕಾರಂತ್ ರವರು ಉಪಸ್ಥಿತರಿರುತ್ತಾರೆ. ಭಗವದ್ಗೀತೆಯ ಆಸಕ್ತ ಸದ್ಭಕ್ತರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಗೀತಾ ಸಪ್ತಾಹ ಯಶಸ್ವಿಗೊಳಿಸಬೇಕಾಗಿ ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಗೌರವ ಅಧ್ಯಕ್ಷರಾದ ಶ್ರೀರಾಮ ಕಾರಂತ್ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here