ಜುಲೈ ತಿಂಗಳಲ್ಲಿ 12 ದಿನ ಬ್ಯಾಂಕ್ ಬಂದ್..! ಯಾವ ದಿನಗಳು ಸಂಪೂರ್ಣ ವಿವರ ಇಲ್ಲಿದೆ..!

0
116

ನವದೆಹಲಿ : ಜುಲೈ ತಿಂಗಳಲ್ಲಿ ಬ್ಯಾಂಕ್‌ನಲ್ಲಿ ಯಾವುದೇ ಪ್ರಮುಖ ಕೆಲಸವಿದ್ದರೆ ಗ್ರಾಹಕರು ಮುಂಚಿತವಾಗಿಯೇ ಯೋಜನೆ ರೂಪಿಸಿಕೊಳ್ಳುವುದು ಒಳಿತು. ಏಕೆಂದರೆ, ಜುಲೈ ತಿಂಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಒಟ್ಟು 12 ದಿನಗಳ ಕಾಲ ಬ್ಯಾಂಕ್ ಶಾಖೆಗಳು ಕಾರ್ಯನಿರ್ವಹಿಸುವುದಿಲ್ಲ.

ಈ ಅವಧಿಯಲ್ಲಿ ಚೆಕ್ ಡೆಪಾಸಿಟ್, ಕೆವೈಸಿ (KYC) ನವೀಕರಣ, ಡಿಮ್ಯಾಂಡ್ ಡ್ರಾಫ್ಟ್, ಲಾಕರ್ ಸೇವೆ ಸೇರಿದಂತೆ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಮಾಡಬೇಕಾದ ಕೆಲಸಗಳಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ಆದ್ದರಿಂದ ಗ್ರಾಹಕರು ರಜಾ ದಿನಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಬ್ಯಾಂಕಿಂಗ್ ಕೆಲಸಗಳನ್ನು ಮುಂಚಿತವಾಗಿ ಪೂರ್ಣಗೊಳಿಸಿಕೊಳ್ಳುವುದು ಉತ್ತಮ.

ಆದರೆ, ಬ್ಯಾಂಕ್ ಶಾಖೆಗಳು ಮುಚ್ಚಿದ್ದರೂ ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಯುಪಿಐ (UPI), ಎಟಿಎಂ ಸೇವೆ, ಹಣ ವರ್ಗಾವಣೆ, ಬಿಲ್ ಪಾವತಿ ಹಾಗೂ ಬ್ಯಾಲೆನ್ಸ್ ಪರಿಶೀಲನೆ ಸೇರಿದಂತೆ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಲಭ್ಯವಿರುತ್ತವೆ.

ರಿಸರ್ವ್ ಬ್ಯಾಂಕ್‌ನ ನಿಯಮದಂತೆ ಜುಲೈ 11 (ಎರಡನೇ ಶನಿವಾರ) ಹಾಗೂ ಜುಲೈ 25 (ನಾಲ್ಕನೇ ಶನಿವಾರ) ದೇಶಾದ್ಯಂತ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಇದರ ಜೊತೆಗೆ ಜುಲೈ 5, 12, 19 ಮತ್ತು 26ರಂದು ಬರುವ ನಾಲ್ಕು ಭಾನುವಾರಗಳಂದೂ ಬ್ಯಾಂಕ್ ಶಾಖೆಗಳು ಮುಚ್ಚಿರಲಿವೆ.

ಇದಲ್ಲದೆ, ವಿವಿಧ ರಾಜ್ಯಗಳಲ್ಲಿ ಆಚರಿಸಲಾಗುವ ಸ್ಥಳೀಯ ಹಬ್ಬಗಳು ಮತ್ತು ವಿಶೇಷ ಸಂದರ್ಭಗಳ ಹಿನ್ನೆಲೆಯಲ್ಲಿ ಇನ್ನೂ ಆರು ದಿನಗಳ ಸ್ಥಳೀಯ ರಜೆಗಳು ಘೋಷಿಸಲಾಗಿದ್ದು, ರಾಜ್ಯದಿಂದ ರಾಜ್ಯಕ್ಕೆ ಈ ರಜೆಗಳು ಬದಲಾಗುತ್ತವೆ.

ಹೀಗಾಗಿ, ನೀವು ಬೇರೆ ರಾಜ್ಯದ ಬ್ಯಾಂಕ್ ಶಾಖೆಯಲ್ಲಿ ವ್ಯವಹಾರ ನಡೆಸಬೇಕಿದ್ದರೆ, ಆ ರಾಜ್ಯದ ರಜಾ ಪಟ್ಟಿಯನ್ನು ಮುಂಚಿತವಾಗಿ ಪರಿಶೀಲಿಸುವುದು ಸೂಕ್ತ. ಬ್ಯಾಂಕ್ ಶಾಖೆಗೆ ನೇರವಾಗಿ ತೆರಳಿ ಮಾಡಬೇಕಾದ ಕೆಲಸಗಳಿದ್ದರೆ, ರಜೆ ದಿನಗಳನ್ನು ಗಮನದಲ್ಲಿಟ್ಟುಕೊಂಡು ಮುಂಚಿತವಾಗಿ ಮುಗಿಸಿಕೊಳ್ಳುವುದು ಅನಗತ್ಯ ತೊಂದರೆಗಳನ್ನು ತಪ್ಪಿಸಲು ಸಹಕಾರಿಯಾಗಲಿದೆ.

LEAVE A REPLY

Please enter your comment!
Please enter your name here